ಸಿನಿವಾಣಿ

'ಯುವರತ್ನ' ಮೋಷನ್​ ಪೋಸ್ಟರ್​ ಬಿಡುಗಡೆ; ಇದು ಅಭಿಮಾನಿಗಳ ಉಡುಗೊರೆ

manjunathktgns

ಬೆಂಗಳೂರು: ಪವರ್​ಸ್ಟಾರ್ ಪುನೀತ್​ ರಾಜಕುಮಾರ್ ನಟನೆಯ ಯುವರತ್ನ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೇನಿದ್ದರೂ, ಸಿನಿಮಾ ಟೀಸರ್, ಟ್ರೇಲರ್​ ಮತ್ತು ಹಾಡುಗಳ ಸಂಭ್ರಮವಷ್ಟೇ. ಈ ನಡುವೆಯೇ ಇದೇ ಚಿತ್ರದ ಟೀಸರ್ ಮೋಷನ್​ ಪೋಸ್ಟರ್ ಬಿಡುಗಡೆ ಆಗಿದೆ.

ಅರೇ, ಅಭಿಮಾನಿಗಳ ಗಮನಕ್ಕೆ ತರದೇ ಟೀಸರ್ ಬಿಡುಗಡೆ ಮಾಡಿಕೊಂಡಿತೇ ಯುವರತ್ನ ಟೀಮ್​ ಎನ್ನಬೇಡಿ. ಏಕೆಂದರೆ, ಸದ್ಯ ಬಿಡುಗಡೆಯಾಗಿರುವ ಮೋಷನ್​ ಪೋಸ್ಟರ್​ ಅನ್ನು ಅಭಿಮಾನಿಗಳೇ ಸಿದ್ಧಪಡಿಸಿದ್ದಾರೆ.

ಹೌದು, ದಸರಾ ಹಬ್ಬದ ಪ್ರಯುಕ್ತ ಚಿತ್ರದ ಯಾವುದೇ ಅಪ್​ಡೇಟ್ಸ್ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಅದೆಲ್ಲವನ್ನು ಗಮನಿಸಿ ಒಂದಷ್ಟು ಜನ ಅಭಿಮಾನಿಗಳು ಸೇರಿ ಫ್ಯಾನ್​ ಮೇಡ್​ ಮೋಷನ್​ ಸಿದ್ಧಪಡಿಸಿ ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದಾರೆ.

ಚಿತ್ರದ ನಿರ್ದೇಶಕ ಸಂತೋಷ್ ಆನಂದ್​ರಾಮ್​ ಸೋಷಿಯಲ್​ ಮೀಡಿಯಾದಲ್ಲಿ ಲಿಂಕ್​ ಶೇರ್​ ಮಾಡಿಕೊಂಡಿದ್ದು, ಅಭಿಮಾನಿಗಳ ಅಭಿಮಾನಕ್ಕೆ ಬಹುಪರಾಕ್​ ಹೇಳಿದ್ದಾರೆ ನಿರ್ದೇಶಕರು.