ಸಿನಿವಾಣಿ

ವೇದಿಕೆ ಮೇಲೆಯೇ ಕಿಸ್​ ಕೇಳಿದ ನಿರ್ದೇಶಕ: ಹೀರೋಯಿನ್​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಆದರೆ, ನಿರ್ದೇಶಕರೊಬ್ಬರು ನಟಿಯೊಬ್ಬಳ ಬಳಿ ನೇರವಾಗಿಯೇ ಕಿಸ್ ಕೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಆದರೆ, ಇಲ್ಲಿ ಇದಕ್ಕೊಂದು ಟ್ವಿಸ್ಟ್​ ಸಹ ಇದೆ.

ಆ ನಿರ್ದೇಶಕನ ಹೆಸರು ಆರ್​​.ವಿ. ಉದಯಕುಮಾರ್​. ಇವರು ತಮಿಳಿನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ರಜಿನಿಕಾಂತ್​ ನಟನೆಯ ಯಜಮಾನ, ವಿಜಯಕಾಂತ್​ ನಟನೆಯ ಚಿನ್ನ ಗೌಂಡರ್​, ಕಮಲ್​ ಹಾಸನ್​ ನಟನೆಯ ಸಿಂಗಾರ ವೇಲನ್​ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಕುಂಬರಿ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಉದಯ್​ ಕುಮಾರ್​ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರ ಇಲ್ಲಿಯವರೆಗೂ ಕಾರ್ಯಕ್ರಮಗಳಲ್ಲಿ ವಿಐಪಿಗಳಿಗಾಗಿ ಕಾಯುತ್ತಿದ್ದರು. ಆದರೆ, ಮೊದಲ ಬಾರಿಗೆ ಮಾಧ್ಯಮ ಮಿತ್ರರಿಗಾಗಿ ಕಾಯುತ್ತಿದ್ದೇವೆ. ನಮ್ಮ ಎಷ್ಟೊಂದು ಕಾರ್ಯಕ್ರಮಗಳಿಂದ ನೀವು ಬಳಲಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾನು ಕುಂಬರಿ ಸಿನಿಮಾ ಹಾಡುಗಳನ್ನು ಕೇಳಿದ್ದೇನೆ. ಹಾಡುಗಳು ತುಂಬಾ ಚೆನ್ನಾಗಿವೆ. ತಮಿಳಿನಲ್ಲಿ ಕುಂಬರಿ ಪದದ ಅರ್ಥ ಏನೆಂದು ನನಗೆ ಗೊತ್ತಿಲ್ಲ. ಈಗಷ್ಟೇ ಕುಂಬರಿ ಎಂದು ಸ್ನೇಹ ಎಂದು ತಿಳಿದುಕೊಂಡೆ ಎಂದರು.

ಈ ಕಾರ್ಯಕ್ರಮದಲ್ಲಿ ನಾಯಕಿಯೂ ಸಹ ಬಹಳ ಹೊತ್ತು ಕುಳಿತಿದ್ದಳು. ನನ್ನ ಸುತ್ತ ಹೀರೋಯಿನ್​ಗಳು ಕೂರುತ್ತಿದ್ದ ಕಾಲ ಕಳೆದು ಹೋಗಿದೆ, ಈಗ ನೋಡು ನೀನು ಹೀಗೆ ಕುಳಿತಿದ್ದೀಯ ಎಂದು ನಾಯಕಿಯನ್ನು ಕಿಚಾಯಿಸಿದ ಉದಯ್​ ಕುಮಾರ್​, ನಾಯಕಿಗೆ ನಟ ವಿಜಯ್ ವಿಶ್ವ ಕೊಟ್ಟ ಮೊದಲ ಕಿಸ್​ ಚೆನ್ನಾಗಿತ್ತು ಎಂದು ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸಿದರು.

ಕಿಸ್​ ಕೇಳಿದೆ

ನನ್ನನ್ನು ಮಾತನಾಡಲು ಆಹ್ವಾನಿಸುತ್ತಿದ್ದರೂ ಆದರೆ, ಪಕ್ಕದಲ್ಲಿ ಹೀರೋಯಿನ್​ ಪಕ್ಕದಲ್ಲಿ ಕುಳಿತಿದ್ದರಿಂದ ನಾನು ಆಮೇಲೆ ಮಾತನಾಡುತ್ತೇನೆಂದು ಹೇಳಿ ನೆಪ ಹೇಳುತ್ತಿದ್ದೆ. ಹೀರೋಯಿನ್​ ಪಕ್ಕದಲ್ಲಿದ್ದರೆ ಎಲ್ಲ ಕೆಲಸವು ಮರೆತು ಹೋಗುತ್ತದೆ. ನೀನು ಒಂದು ಕಿಸ್​ ಕೊಟ್ಟರೆ ಮಾತ್ರ ನಾನು ಮಾತನಾಡುತ್ತೇನೆ ಎಂದು ಹೀರೋಯಿನ್​ ಬಳಿ ಕೇಳಿದೆ. ಅದಕ್ಕೆ ಹಿರೋಯಿನ್​ ಕೂಡ ಓಕೆ ಎಂದರು ಎನ್ನುತ್ತಾ ಉದಯ್​ ಕುಮಾರ್​, ಹಿರೋಯಿನ್​ ಕಾಲೆಳೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)