ಸಿನಿವಾಣಿ

ಎರಡನೇ ಸರಣಿಯೇ ಇನ್ನೂ ಬಂದಿಲ್ಲ; ಮೂರನೇ ಸೀಸನ್ ಬಗ್ಗೆ ಮಾಹಿತಿ ಹೊರಹಾಕಿದ 'ಫ್ಯಾಮಿಲಿ ಮ್ಯಾನ್​'!

ಮುಂಬೈ: ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುವ ‘ಫ್ಯಾಮಿಲಿ ಮ್ಯಾನ್​‘ ವೆಬ್​ ಸಿರೀಸ್​ಗೆ ದೊಡ್ಡ ಮಟ್ಟದ ವೀಕ್ಷಕರಿದ್ದಾರೆ. ಅದು ಈಗಾಗಲೇ ಸಾಬೀತಾಗಿದೆ. ಇನ್ನೇನು ಕೆಲದಿನಗಳಲ್ಲಿ ಅದರ ಎರಡನೇ ಸೀಸನ್​ ಬರಲಿದೆ. ಹೀಗಿರುವಾಗಲೇ ಮೂರನೇ ಸೀಸನ್​ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.

ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿರುವ ಸೀಸನ್ 2 ಜೂ. 4ರಂದು ಪ್ರಸಾರವಾಗಲು ಸಜ್ಜಾಗಿದೆ. ಇದೀಗ ಅದಕ್ಕೂ ಮೊದಲು ಮೂರನೇ ಸೀಸನ್ ಬಗ್ಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿದ್ದು, ಒನ್​ ಲೈನ್​ ಕಥೆಯೂ ಸಿದ್ಧವಾಗಿದೆಯಂತೆ. ಅಷ್ಟೇ ಅಲ್ಲ ಮೊದಲ ಮತ್ತು ಎರಡನೇ ಸೀಸನ್​ಗಿಂತ ದೊಡ್ಡ ಮಟ್ಟದಲ್ಲಿ 3ನೇ ಸೀಸನ್​ ಮೂಡಿಬರಲಿದೆಯಂತೆ. ಕೇವಲ ಮೇಕಿಂಗ್​ ವಿಚಾರದಲ್ಲಷ್ಟೇ ಅಲ್ಲದೆ, ಹೊಸ ಹೊಸ ಸ್ಟಾರ್​ಗಳು ಮೂರನೇ ಸೀಸನ್​ ಫ್ಯಾಮಿಲಿ ಮ್ಯಾನ್​ನ ಕಳೆ ಹೆಚ್ಚಿಸಲಿದ್ದಾರಂತೆ.

ದಿ ಫ್ಯಾಮಿಲಿ ಮ್ಯಾನ್​ನಲ್ಲಿ ಮನೋಜ್​ ಬಾಜ್​ಪೇಯಿ, ನ್ಯಾಷನಲ್​ ಇಂಟಲಿಜೆನ್ಸ್​ ಏಜನ್ಸಿಯ ಏಜೆಂಟ್​ ಆಗಿ ನಟಿಸಿದ್ದರು. ಈ ಸೀಸನ್ 2ನಲ್ಲೂ ಅವರು ಭಯೋತ್ಪಾದಕರ ವಿರುದ್ಧ ಹೋರಾಡಲಿದ್ದಾರೆ. ಎರಡನೇ ಸೀಸನ್​ನಲ್ಲಿ ವಿಶೇಷ ಆಕರ್ಷಣೆ ಎಂದರೆ ಅದು ಟಾಲಿವುಡ್​ ನಟಿ ಸಮಂತಾ. ಈ ಬಾರಿ ಅವರು ಸೂಸೈಡ್​ ಬಾಂಬರ್​ ಆಗಿ ಕಾಣಿಸಿಕೊಂಡಿದ್ದು, ಅವರನ್ನು ತಡೆಯುವುದಕ್ಕೆ ಮನೋಜ್​ ಬಾಜ್ಪೇಯಿ ಏನೆಲ್ಲಾ ಮಾಡುತ್ತಾರೆ ಎಂಬುದು ಈ ಸೀಸನ್​ನ ಹೈಲೈಟ್​ ಆಗಲಿದೆ. -ಏಜೆನ್ಸೀಸ್​