ಸಿನಿವಾಣಿ

ನಟನೆಗೆ ಗುಡ್​ಬೈ ಹೇಳಿದರೂ 48ನೇ ವಯಸ್ಸಿನಲ್ಲಿ ನಟಿ ಮೀನಾ ಬಳಿ ಇಷ್ಟೊಂದು ಆಸ್ತಿ ಇದೆಯಾ? Actress Meena

Actress Meena : ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.

ನಟಿ ಮೀನಾ ಅವರು ಬಾಲನಟಿಯಾಗಿ ತಮಿಳು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ನಂತರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲು ಪ್ರಾರಂಭಿಸಿದರು. ಆಕೆಯನ್ನು ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸಿದ್ದು ನಟ ರಾಜ್​ಕಿರಣ್​.

ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಬಣ್ಣದ ಜಗತ್ತಿನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

ಮೀನಾ ಪತಿಗೆ ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಸಾಯುವ ಮುನ್ನವೇ ವಿದ್ಯಾ ಸಾಗರ್​ ಅವರು ತನ್ನೆಲ್ಲ ಆಸ್ತಿಯನ್ನು ನಟಿ ಮೀನಾ ಹಾಗೂ ಆಕೆಯ ಮಗಳ ಹೆಸರಿಗೆ ಬರೆದಿದ್ದರು. ಸದ್ಯ ಮೀನಾ ಮಗಳು ಕೂಡ ಸಿನಿಮಾದಲ್ಲಿ ಬಾಲ್ಯ ನಟಿಯಾಗಿ ನಟಿಸುತ್ತಿದ್ದಾರೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ.

ವರದಿಗಳ ಪ್ರಕಾರ, ನಟಿ ಮೀನಾ ಅವರ ನಿವ್ವಳ ಮೌಲ್ಯ 35 ಕೋಟಿಯಿಂದ 40 ಕೋಟಿ ರೂ.ವರೆಗೆ ಇದೆ. ಇದಲ್ಲದೆ, ಮೀನಾ ಅವರು ಅಂಗಡಿಗಳು ಸೇರಿದಂತೆ ಇತರ ವ್ಯಾಪಾರಗಳನ್ನು ಹೊಂದಿದ್ದಾರೆ. ಐಷಾರಾಮಿ ಮನೆ ಮತ್ತು ಲಕ್ಸುರಿ ಕಾರುಗಳನ್ನು ಸಹ ಹೊಂದಿದ್ದಾರೆ. ತಮ್ಮ ಆದಾಯಕ್ಕೆ ಅವರು ಸಿನಿಮಾವನ್ನೇ ನಂಬಿಲ್ಲ.

ಇನ್ನು ಪತಿ ಮರಣದ ಬಳಿಕ ಮೀನಾ ಅವರು ಮತ್ತೆ ಬಣ್ಣದ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಪೋಷಕ ಪಾತ್ರ ಮತ್ತು ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)