ಸಿನಿವಾಣಿ

ಪ್ರೇಮಿಗಳನ್ನು ನೋಡಿದ್ರೆ ರಾಖಿ ಸಾವಂತ್​ಗೆ ಅಳು ಬರುತ್ತದಂತೆ … ಯಾಕೆ ಗೊತ್ತಾ?

ಮುಂಬೈ: 'ಶೇರ್​ಷಾ' ಜೋಡಿ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆಯಾಗಿದ್ದಾರೆ. ಭಾನುವಾರ, ಮುಂಬೈನಲ್ಲಿ ಅವರ ರಿಸೆಪ್ಶನ್​ ಸಹ ಆಗಿದ್ದು, ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಸಹ ಭಾಗವಹಿಸಿದ್ದಾರೆ.

ಒಂದು ಕಡೆ ಬಾಲಿವುಡ್​ ಮಂದಿ ಕಿಯಾರಾ ಮತ್ತು ಸಿದ್ಧಾರ್ಥ್​ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ರಾಖಿ ಸಾವಂತ್​ಗೆ ಮಾತ್ರ ಅವರಿಬ್ಬರನ್ನು ಕಂಡರೆ ಹೊಟ್ಟೆ ಉರಿಯುತ್ತಿದೆಯಂತೆ. ಅಷ್ಟೇ ಅಲ್ಲ, ಅವರನ್ನು ನೋಡಿದರೆ ಅಳು ಬರುತ್ತಿದೆಯಂತೆ.

ಈ ಕುರಿತು ಮಾತನಾಡಿರುವ ಅವರು, 'ಕಿಯಾರಾ ಮತ್ತು ಸಿದ್ಧಾರ್ಥ್​ ಪ್ರೀತಿಸಿ ಮದುವೆಯಾಗಿದ್ದಾರೆ. ಎಷ್ಟು ಖುಷಿಯ ವಿಷಯ. ಎಲ್ಲರೂ ಅವರ ಮದುವೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಎಲ್ಲ ಕಡೆ ಅವರ ಮದುವೆಯ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನನ್ನ ಮದುವೆಯ ಬಗ್ಗೆಯೂ ಕೆಟ್ಟ ಸುದ್ದಿಗಳು ಬರುತ್ತಿವೆ. ಪ್ರೀತಿಸಿ ಮದುವೆಯಾದವರನ್ನು ನೋಡಿದರೆ ನನಗೆ ಹೊಟ್ಟೆ ಉರಿಯುತ್ತದೆ. ಪ್ರೇಮಿಗಳನ್ನು ನೋಡಿದರೆ ನನಗೆ ಅಳು ಬರುವಂತಾಗುತ್ತದೆ. ಪ್ರೇಮಿಗಳ ದಿನ ಬರುತ್ತಿದೆ. ಆದರೆ, ನಾನು ಪ್ರೀತಿಸಿದವರು ಯಾರೂ ಇಲ್ಲ. ನಾನು ಒಳಗೊಳಗೇ ಅಳುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ರಾಖಿ ಸಹ ಮೈಸೂರು ಮೂಲದ ಆದಿಲ್​ ದುರ್ರಾನಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಆತನಿಗೆ ಅಕ್ರಮ ಸಂಬಂಧ ಇದೆ ಎಂದು ಆತನ ವಿರುದ್ಧ ಇತ್ತೀಚೆಗೆ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದರು. ಆಕೆಯ ದೂರಿನ ಪ್ರಕಾರ, ಪೊಲೀಸರು ಆದಿಲ್​ನನ್ನು ಬಂಧಿಸಿದ್ದಾರೆ.