ಡೊರೋಥಿ ಸಿನಿಮಾದಿಂದ ಚಿತ್ರದಿಂದ ನನ್ನ ಜೀವನವೇ ಬದಲಾಯಿತು.
ಟ್ರಾನ್ಸ್ವುಮೆನ್ ಮೇಕಪ್ ಆರ್ಟಿಸ್ಟ್, ನಟಿ ಜೀವಾ ಸುಬ್ರಮಣ್ಯಂ ಭಾವುಕ ನುಡಿ!.
ಒಂಟಿತನದ ಹಬ್ಬಗಳಿಂದ ಯಶಸ್ಸಿನ ದೀಪಾವಳಿಯವರೆಗೆ ಇದು ಜೀವಾ ಸುಬ್ರಮಣ್ಯಂ ಯಶಸ್ಸು.
Dorothy Actress Jeeva Subramanian: ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಡೊರೋಥಿ ಸಿನಿಮಾವು ಸಾಕಷ್ಟು ಜನ ಮನ್ನಣೆಗೆ ಕಾರಣವಾಗಿತ್ತು. ಎಲ್ಜಿಬಿಟಿಕ್ಯೂ ಹಾಗೂ ತಮಿಳುನಾಡಿನ ಹಿಂದಿನ ಮದ್ರಾಸ್ ಪ್ರದೇಶದಲ್ಲಿದ್ದ ಪಿತೃ ಪ್ರಧಾನ ಕುಟುಂಬದ ಪ್ರಭಾವದ ಬಗ್ಗೆ ಪ್ರಬಲವಾಗಿ ಹೇಳಿರುವ ಸಿನಿಮಾವು ವಿಶ್ವದಾದ್ಯಂತ 18 ಕೋಟಿಗೂ ಹೆಚ್ಚು ಗಳಿಕೆ ಕಂಡು, ಸದ್ಯ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸದ್ಯ ಈ ಸಿನಿಮಾದಲ್ಲಿ ನಟಿಸಿರುವ ಟ್ರಾನ್ಸ್ವುಮೆನ್ ನಟಿ ಮತ್ತು ಮೇಕಪ್ ಕಲಾವಿದೆ ಜೀವಾ ಸುಬ್ರಮಣ್ಯಂ, ತಮ್ಮ ಜೀವನದಲ್ಲಿ ಈ ಸಿನಿಮಾ ತಂದಿರುವ ಮಹತ್ವದ ಬದಲಾವಣೆಯ ಕುರಿತು ಅತ್ಯಂತ ಭಾವುಕವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪ್ರತಿವರ್ಷ ದೀಪಾವಳಿ ಬಂದಾಗಲೆಲ್ಲಾ, ಇತರರಂತೆ ಖುಷಿಯಿಂದ ಹಬ್ಬ ಆಚರಿಸಿಕೊಳ್ಳುವ ಮನಸ್ಸಿಲ್ಲದೆ ನಾನು ಆ ದಿನಗಳನ್ನು ಕಳೆಯುತ್ತಿದ್ದೆ. ದೀಪಾವಳಿ ಮುಗಿದ ನಾಲ್ಕನೇ ದಿನದಂದು ನಾನು ನನ್ನ ಕುಟುಂಬವನ್ನು ತೊರೆದು, ನನ್ನ ಜೀವನದ ಪಯಣವನ್ನು ಏಕಾಂಗಿಯಾಗಿ ಆರಂಭಿಸಿದೆ. ದೀಪಾವಳಿ ಮಾತ್ರವಲ್ಲ, ಅಂದಿನಿಂದ ನಾನು ಯಾವುದೇ ಹಬ್ಬವನ್ನೂ ಆಚರಿಸಿಕೊಂಡಿಲ್ಲ. ನನ್ನ ಹುಟ್ಟುಹಬ್ಬವನ್ನೂ ಕೂಡ ನಾನು ಹೆಚ್ಚಾಗಿ ಆಚರಿಸಿಕೊಂಡಿಲ್ಲ.
ಪ್ರತಿವರ್ಷ ದೀಪಾವಳಿಗೂ ನಾಲ್ಕು ದಿನ ಮುಂಚಿತವಾಗಿ ಮನೆಗೆ ವಸ್ತುಗಳನ್ನು ತಂದು ಅಥವಾ ಕೋಣೆಯಲ್ಲೇ ಬಂಧಿಯಾಗಿ ಆ ದಿನಗಳನ್ನು ಯಾರೂ ಇಲ್ಲದೆ ಒಂಟಿಯಾಗಿ ಕಳೆಯುತ್ತಿದ್ದೆ. ಆದರೆ ಈ ವರ್ಷ ಮಾತ್ರ ಎಲ್ಲವೂ ವಿಶೇಷವಾಗಿತ್ತು. ಸ್ನೇಹಿತರಿಲ್ಲ, ಪಟಾಕಿಗಳಿಲ್ಲ, ಅತಿಥಿಗಳ ಸಂಭ್ರಮವಿಲ್ಲ. ಆದರೂ ನನ್ನ ಮನಸ್ಸು ತುಂಬಾನೇ ಖುಷಿಯಾಗಿತ್ತು.
ಆ ಖುಷಿಗೆ ಕಾರಣ ನನ್ನ ಪ್ರೀತಿಯ ಸಹೋದರ, ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಡೊರೋಥಿ ಸಿನಿಮಾ ನನ್ನ ಜೀವನದಲ್ಲಿ ಹೊಸ ಸಂತೋಷವನ್ನು ಮತ್ತು ಮರೆಯಲಾಗದ ಅನುಭವವನ್ನು ತಂದುಕೊಟ್ಟಿದೆ. ಒಂದು ಕಾಲದಲ್ಲಿ ಹಬ್ಬದ ದಿನಗಳನ್ನು ಒಂಟಿಯಾಗಿ ಕಳೆಯುತ್ತಿದ್ದ ನಾನು, ಇಂದು ಪ್ರೀತಿಯ ಜನರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಅವಕಾಶ ಪಡೆದಿದ್ದೇನೆ. ಅದೇ ನನಗೆ ಸಿಕ್ಕ ಅತಿ ದೊಡ್ಡ ದೀಪಾವಳಿ ಉಡುಗೊರೆ.
ನನ್ನ ಜೀವನದಲ್ಲಿ ಈ ಸುಂದರ ಬದಲಾವಣೆಗೆ ಕಾರಣರಾದ ನನ್ನ ಪ್ರೀತಿಯ ಅಣ್ಣ ಕಾರ್ತಿಕ್ ಸುಬ್ಬರಾಜ್, ಸನಾತ್, ರಿಷಿ ಹಾಗೂ ನನ್ನ ಡೊರೋಥಿ ತಂಡಕ್ಕೆ ಧನ್ಯವಾದ. 'ಹಲವು ವರ್ಷಗಳಿಂದ ನನಗೆ ಸಾಮಾನ್ಯವಾಗಿದ್ದ ದೀಪಾವಳಿ, ಈ ವರ್ಷ ನನ್ನ ಜೀವನದಲ್ಲೇ ಎಂದೆಂದೂ ಮರೆಯಲಾಗದ ದೀಪಾವಳಿಯಾಗಿ ಉಳಿಯಲಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಸನಾತ್, ರಿಷಿಕಾಂತ್ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲ್ಯದ ಸ್ನೇಹಿತರಾದ ಕಾರ್ತಿ ಮತ್ತು ಸುಬ್ಬು ಅವರ ಜೀವನಕ್ಕೆ ಡೊರೋಥಿ ಪ್ರವೇಶಿಸಿದ ಬಳಿಕ ನಡೆಯುವ ರೋಚಕ ಬದಲಾವಣೆಗಳೇ ಈ ಚಿತ್ರದ ಕಥೆಯಾಗಿದೆ. ಈ ಸಿನಿಮಾವು ಎಲ್ಜಿಬಿಟಿಕ್ಯೂ ಸಮುದಾಯದ ಬಗ್ಗೆ ಹೇಳುತ್ತದೆ. ಮೊದಲು ಸಿನಿಮಾ ಬಾಯ್ಕಾಟ್ಗೆ ಸಾಕಷ್ಟು ಒತ್ತಾಯ ಕೇಳಿಬಂದಿತ್ತು. ಈ ಚಿತ್ರವು 2026ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಥಿಯೇಟರ್ಗಳಲ್ಲಿ ಬಿಡುಗಡೆಯಾದ ಬಳಿಕ ವಿಶ್ವಾದ್ಯಂತ ಸುಮಾರು 18.34 ಕೋಟಿ ರೂ.ಗಳನ್ನು ಗಳಿಸಿದೆ, (ಏಜೆನ್ಸೀಸ್).