ಸಿನಿವಾಣಿ

'ದೂರದರ್ಶನ' ಚಿತ್ರದ ಕ್ಲಾಸ್ ಅಂಡ್ ಮಾಸ್ ಟೀಸರ್ ಬಿಡುಗಡೆ …

chetannadiger

ಬೆಂಗಳೂರು: ಹಳ್ಳಿಯೊಂದಕ್ಕೆ 80ರ ದಶಕದಲ್ಲಿ ಟಿವಿ ಎಂಟ್ರಿ ಕೊಟ್ಟಾಗ ಏನೆಲ್ಲಾ ಆಗುತ್ತದೆ ಎಂಬ ವಿಷಯವನ್ನಿಟ್ಟುಕೊಂಡು ತಯಾರಾಗಿರುವ ಚಿತ್ರ ಪೃಥ್ವಿ ಅಂಬರ್​ ಅಭಿನಯದ 'ದೂರದರ್ಶನ'. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇದೀಗ ಟೀಸರ್​ ಸಹ ಬಿಡುಗಡೆಯಾಗಿದೆ.

'ದೂರದರ್ಶನ' ಎಂದರೆ ಕ್ಲಾಸ್ ಸಿನಿಮಾ ಇರಬಹುದು ಅಂದುಕೊಂಡವರಿಗೆ ಇಲ್ಲಿ ಬರೀ ಕ್ಲಾಸ್​ ಅಂಶಗಳಷ್ಟೇ ಅಲ್ಲ, ಮಾಸ್​ ಅಂಶಗಳೂ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಟೀಸರ್​ ಬಿಡುಗಡೆಯಾಗಿದೆ. ಇಬ್ಬರು ಜಿಗಿರಿ ದೋಸ್ತ್​​ಗಳು ಕಾರಣಾಂತರಗಳಿಂದ ವೈರಿಗಳಾಗಿರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ಹೊಡೆದಾಡುತ್ತಲೇ ಇರುತ್ತಾರೆ. ಇಷ್ಟಕ್ಕೂ ಅವರಿಬ್ಬರ ನಡುವೆ ಏನಾಗಿದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಒಂದು ಕಾಲದಲ್ಲಿ ಸ್ನೇಹಿತರಾಗಿ ನಂತರ ವೈರಿಗಳಾಗಿ ಪೃಥ್ವಿ ಮತ್ತು 'ಉಗ್ರಂ' ಮಂಜು ನಟಿಸಿದ್ದಾರೆ. ಪೃಥ್ವಿಗೆ ನಾಯಕಿಯಾಗಿ ಆಯನಾ ನಟಿಸಿದ್ದಾರೆ. ಮಿಕ್ಕಂತೆ ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಮುಂತಾದವರು ನಟಿಸಿದ್ದಾರೆ.

'ದೂರದರ್ಶನ' ಚಿತ್ರವನ್ನು ವಿ.ಎಸ್. ಮೀಡಿಯಾ ಎಂಟರ್ ಪ್ರೈಸಸ್​ನಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ವೈಭವ್ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣವಿರುವ ಈ ಚಿತ್ರದ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಹೊರಬೀಳಲಿದೆ.