ಸಿನಿವಾಣಿ

ಅ.2ರಂದು 'Don't Trouble The Trouble'​ ರಿಲೀಸ್; ಕಳ್ಳ ಜಾದೂಗಾರನಾಗಿ ಫಹಾದ್ ಫಾಸಿಲ್ ಅಬ್ಬರ

  • ಡೋಂಟ್​ ಟ್ರಬಲ್​ ದ ಟ್ರಬಲ್ ಫಹಾದ್​ ಫಾಸಿಲ್​ ಹೊಸ ಸಿನಿಮಾ

  • 2026ಅಕ್ಟೋಬರ್ 2ರಂದು ಬೆಳ್ಳಿ ತೆರೆ ಮೇಲೆ ಅಬ್ಬರ

  • ಮತ್ತೊಂದು ಫೀಲ್​ ಗುಡ್​ ಸಿನಿಮಾ ಎಂದ ಡೋಂಟ್​ ಟ್ರಬಲ್​ ದ ಟ್ರಬಲ್ ಟ್ರೇಲರ್​ ವೀಕ್ಷಕರು

Don't Trouble The Trouble: ಆವೇಶಂ ಸಿನಿಮಾ ಮೂಲಕ ಬ್ಲಾಕ್​ ಬ್ಲಷ್ಟರ್​ ನಗು ಕೊಟ್ಟಿದ್ದ ಮಾಲಿವುಡ್​​ ನಟ ಫಹಾದ್​ ಫಾಸಿಲ್ ಸದ್ಯ ಡೋಂಟ್​ ಟ್ರಬಲ್​ ದಿ ಟ್ರಬಲ್​ ಸಿನಿಮಾ ಮೂಲಕ ಮತ್ತೆ ಹೊಸ ಅವತಾರ ತಾಳಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್​​ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದ್ದು, ಅಕ್ಟೋಬರ್ 2, 2026 ರಂದು ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ.

ಟ್ರೇಲರ್​ನಲ್ಲಿ ಏನಿದೆ?

ಡೋಂಟ್​ ಟ್ರಬಲ್​ ದಿ ಟ್ರಬಲ್​ ಸಿನಿಮಾದ ಟ್ರೇಲರ್​​ ರಿಲೀಸ್ ಆಗಿದೆ. ಇದರಲ್ಲಿ ಫಹಾದ್​ ಫಾಸಿಲ್​ ಅವರನ್ನು ಜಾದೂಗಾರನಾಗಿ ಪರಿಚಯಿಸಲಾಗಿದೆ. ಜನರನ್ನು ಮೋಸಗೊಳಿಸಿ ಹಣ ದೋಚೋದು ಸಮಸ್ಯೆಗಳಿಂದ ಕುತಂತ್ರವಾಗಿ ತಪ್ಪಿಸಿಕೊಳ್ಳುವುದು ಈತನ ಬುದ್ಧಿ. ಇದೇ ಸೂರಿ ಬದುಕಿಗೆ ಬಾಲಕಿಯೊಬ್ಬಳು ಅಚಾನಕ್ಕಾಗಿ ಪ್ರವೇಶ ಪಡೆಯುತ್ತಾಳೆ. ಆಕೆಗೆ ನಿಜವಾಗಿಯೂ ಅಲೌಕಿಕ ಶಕ್ತಿ ಇರುತ್ತದೆ.

ಭಾವನಾತ್ಮಕ ಆಕರ್ಷಣೆ

ಆಕೆ ತನ್ನ ತಂದೆ-ತಾಯಿಯನ್ನು ಪತ್ತೆ ಹಚ್ಚಲು ಸೂರಿ ಸಹಾಯ ಬೇಕಾಗುತ್ತದೆ. ಮೊದಲಿಗೆ ಆಕೆಯ ವಿಶೇಷ ಮ್ಯಾಜಿಕ್​ ಅನ್ನು ದುರುಪಯೋಗಪಡಿಸಿಕೊಳ್ಳುವ ಆತ, ನಂತರ ಬಾಲಕಿಯ ಕಷ್ಟ ತಿಳಿದು ಜೊತೆಯಾಗುತ್ತಾನೆ. ಪೋಷಕರಿಗೆ ಹುಡುಕಾಡುವಾಗ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತದೆ. ಆಕೆಯೊಂದಿಗಿನ ಭಾವನಾತ್ಮಕ ಸಂಬಂಧವು ಹೆಚ್ಚು ಗಮನ ಸೆಳೆಯುವಂತೆ ಮಾಡುತ್ತದೆ.

ಸಿನಿಮಾದ ಟ್ರೇಲರ್​ ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಆವೃತ್ತಿಯಲ್ಲಿ ಮೋಹನ್ ಲಾಲ್ ಧ್ವನಿ ನೀಡಿದ್ದರೆ, ತಮಿಳು ಆವೃತ್ತಿಗೆ ಕಮಲ್ ಹಾಸನ್ ಧ್ವನಿ ನೀಡಿದ್ದಾರೆ. ತೆಲುಗು ಆವೃತ್ತಿಯಲ್ಲಿ ಬಾಲಯ್ಯ ಅವರ ಧ್ವನಿ ಇದೆ. ಬಾಲಯ್ಯ ನಿರೂಪಣೆಯ ಟ್ರೇಲರ್​ ಫ್ಯಾನ್ಸ್​ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಬಾಲಣ್ಣ ಫೇಮಸ್ ಡೈಲಾಗ್​

ಡೋಂಟ್​ ಟ್ರಬಲ್​ ದಿ ಟ್ರಬಲ್​, ಇಫ್​ ಯು ಟ್ರಬಲ್​ ದಿ ಟ್ರಬಲ್​, ಟ್ರಬಲ್​ ಟ್ರಬಲ್ಸ್​ ಯೂ ಎನ್ನುವುದು 2012ರ 'ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರ ಫೇಮಸ್​ ಡೈಲಾಗ್​ ಆಗಿದೆ. ಸಾಕಷ್ಟು ಟ್ರೋಲ್​ ಪೇಜಸ್​ಗಳು, ವ್ಲಾಗ್​ಗಳಿಗೆ ಈ ವಿಡಿಯೋವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Pushpa ದುರಂತದಿಂದ ಎಚ್ಚೆತ್ತ ನಾನಿ; ಫ್ಯಾನ್ಸ್ ಜೊತೆ 'The Paradise' ನೋಡಲು ಪೊಲೀಸ್ ಭದ್ರತೆಗೆ ಮನವಿ, ಸಿಎಂ ಹೀಗಂದ್ರು

ಆವೇಶಂ ನಂತ್ರ ಮತ್ತೊಂದು ಹಿಟ್

ವೇಶಂ ಸಿನಿಮಾದಲ್ಲಿ ಬೆಂಗಳೂರಿಗೆ ಬರುವ ಎಂಜಿನಿಯರ್​ ವಿದ್ಯಾರ್ಥಿಗಳು ಸ್ಥಳೀಯ ರೌಡಿಯೊಂದಿಗೆ ಕನೆಕ್ಟ್ ಆಗುವ ರೀತಿ ಆತನಿಂದ ತಪ್ಪಿಸಿಕೊಳ್ಳಲು ಪಡುವ ಫಜೀತಿಯನ್ನು ಕಾಮಿಡಿ ಸೀನ್​ಗಳ ಮೂಲಕ ಕಟ್ಟಿಕೊಡಲಾಗಿದೆ. ಈ ಚಿತ್ರವು ಸಿನಿಮಾ ಥಿಯೇಟರ್​ ಹಾಗೂ ಒಟಿಟಿಯಲ್ಲಿ ಭಾರಿ ವೀಕ್ಷಣೆ ಗಳಿಸಿತ್ತು. ಫಹಾದ್ ಅವರ ಮ್ಯಾನರಿಸಂ ಎಲ್ಲರನ್ನು ನಕ್ಕು ನಲಿದು ಹೊಟ್ಟೆ ಹುಣ್ಣಾಗಿಸುವಂತೆ ಮಾಡಿತ್ತು. ಇದು ಅಂತದ್ದೇ ಒಂದು ಸಿನಿಮಾ ಎಂದು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಟ್ರೇಲರ್ ಹಂಚಿಕೊಂಡ ಪತ್ನಿ ನಜ್ರಿಯಾ

ಫಹಾದ್​ ಪತ್ನಿ ನಜ್ರಿಯಾ ಅವರು ಇನ್​ಸ್ಟಾ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ಸಿನಿಮಾ ಟ್ರೇಲರ್​ ಹಂಚಿಕೊಂಡು ಕಾಂಟ್​ ವೇಟ್​ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).