ಸಿನಿವಾಣಿ

ಶಾರೂಖ್ ಖಾನ್​ ಜತೆಗೆ ನಟಿ ಪ್ರಿಯಾಮಣಿ?

Webdesk - Ravikanth

ಶಾರೂಖ್ ಖಾನ್ ಅಭಿನಯದ ‘ಚೆನ್ನೈ ಎಕ್ಸ್​ಪ್ರೆಸ್’ ಚಿತ್ರದಲ್ಲಿ ಪ್ರಿಯಾಮಣಿ, ‘ಒನ್ ಟೂ ಥ್ರೀ ಫೋರ್ ... ಗೆಟ್ ಆನ್ ದಿ ಡ್ಯಾನ್ಸ್ ಫ್ಲಾರ್ ...’ ಎಂಬ ಹಾಡಿಗೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದು ಗೊತ್ತೇ ಇದೆ. ಈಗ ಶಾರೂಖ್ ಅಭಿನಯದ ಇನ್ನೊಂದು ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿ ಕೇಳಿಬಂದಿದೆ. ಅಟ್ಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಶಾರೂಖ್ ಖಾನ್ ನಟಿಸುತ್ತಿದ್ದು, ಅವರಿಗೆ ನಯನತಾರಾ ನಾಯಕಿ. ಇದೀಗ ಇನ್ನೊಂದು ಪ್ರಮುಖ ಪಾತ್ರಕ್ಕೆ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.

ಇದಲ್ಲದೆ, ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮುಂದಿನ ಚಿತ್ರಕ್ಕೂ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದೆ. ಈ ಮೊದಲು ‘ಗಬ್ಬರ್ ಸಿಂಗ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಹರೀಶ್ ಶಂಕರ್, ಬಹಳ ವರ್ಷಗಳ ಬಳಿಕ ಪವನ್ ಕಲ್ಯಾಣ್ ಜತೆ ಕೈ ಜೋಡಿಸಿದ್ದಾರೆ.