ಸಿನಿವಾಣಿ

ಅಪ್ಪುಗೆ ಇಂಟ್ರೊಡಕ್ಷನ್ ಬೇಕಾ?; ‘ಜೇಮ್ಸ್​’ ಟ್ರೇಡ್​​ಮಾರ್ಕ್​ ಹಾಡು ಬಿಡುಗಡೆ

Webdesk - Ravikanth

ಬೆಂಗಳೂರು: ಇವ್ರ ಬಗ್ಗೆ ನಿಂಗೆ ಇಂಟ್ರೊಡಕ್ಷನ್ ಬೇಕಾ ... ಇವ್ರ ಬಗ್ಗೆ ನಿಂಗೆ ಇನ್ಪಮೇಶನ್ ಬೇಕಾ ... ಎಲ್ಲ ಹೇಳತೀನಿ ಕೇಳಿ ಕೇಳಿ ಸೌಂಡ್ ಜಾಸ್ತಿ ಮಾಡೋಲೇ ...- ಹೀಗೆ ಶುರುವಾಗುತ್ತದೆ ಶಿವರಾತ್ರಿ ಪ್ರಯುಕ್ತ ಮಂಗಳವಾರ ಬಿಡುಗಡೆಯಾದ ‘ಜೇಮ್್ಸ’ ಚಿತ್ರದ ಹೊಸ ಹಾಡು. ‘ಟ್ರೇಡ್​​ಮಾರ್ಕ್​’ ಎನ್ನುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಪುನೀತ್ ರಾಜಕುಮಾರ್ ಕಡಿಮೆ ಕಾಣುತ್ತಾರೆ. ಅವರ ಬಗ್ಗೆ ಗುಣಗಾನ ಮಾಡುವುದಕ್ಕೆ ರಚಿತಾ ರಾಮ್ ಚಂದನ್ ಶೆಟ್ಟಿ, ಚರಣ್ ರಾಜ್, ಆಶಿಕಾ ರಂಗನಾಥ್ ಮತ್ತು ಶ್ರೀಲೀಲಾ ಅತಿಥಿಗಳಾಗಿ ಬರುತ್ತಾರೆ. ಪುನೀತ್ ಬಗ್ಗೆ ಪವರ್​ಫುಲ್ ಸಾಲುಗಳನ್ನು ಹಾಡುತ್ತಾರೆ. ಈ ಸಾಲುಗಳ ಮೂಲಕ ಚಿತ್ರದ ನಾಯಕನನ್ನು ವೀಕ್ಷಕರಿಗೆ ಪರಿಚಯಿಸುತ್ತಾರೆ.

‘ಜೇಮ್್ಸ’ ಚಿತ್ರದಲ್ಲಿ ನಾಯಕನನ್ನು ಪರಿಚಯಿಸುವ ಹಾಡು ಬೇರೆ ಇರಬಹುದು. ಆದರೆ, ಅದಕ್ಕೂ ಮುನ್ನ ಇವರೆಲ್ಲ ನಾಯಕನನ್ನು ವಿನೂತನವಾಗಿ ಪರಿಚಯಿಸುವ ಹಾಡನ್ನು ಯೂಟ್ಯೂಬ್​ನ ಪಿಆರ್​ಕೆ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಕನ್ನಡದ ಹಾಡೊಂದೇ ಬಿಡುಗಡೆಯಾದ ಐದು ಗಂಟೆಗಳಲ್ಲಿ 10 ಲಕ್ಷ ವೀಕ್ಷಣೆ ಪಡೆದಿದೆ. ಚರಣ್ ರಾಜ್ ಸಂಯೋಜಿಸಿರುವ ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದು, ಯುವ ರಾಜಕುಮಾರ್, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ವಿುಳಾ, ಯುವ ರಾಜಕುಮಾರ್ ಮತ್ತು ವಿಕ್ಕಿ ಧ್ವನಿಯಾಗಿದ್ದಾರೆ. ಮಾರ್ಚ್ 6ರಂದು ‘ಬೋಲೋ ಬೋಲೋ ಜೇಮ್್ಸ’ ಎಂಬ ಎರಡನೆಯ ಹಾಡು ಬಿಡುಗಡೆಯಾದರೆ, ಮಾ.11ಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು (ಮಾ.17) ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.