ಸಿನಿವಾಣಿ

ನಟ ಸಿದ್ಧಾರ್ಥ್​ನಿಂದಿಡಿದು ಶಂತನುವರೆಗೆ ಶ್ರುತಿ ಹಾಸನ್​ ಬಾಳಲ್ಲಿ ಬಂದು ಹೋದವರೆಷ್ಟು?

ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಅಂದಹಾಗೆ ತಾರೆಯರ ಬದುಕು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಭಿನ್ನವಾಗಿರುತ್ತದೆ. ಅದಕ್ಕೆ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ಏಕೆಂದರೆ, ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸಾಕಷ್ಟು ಸುದ್ದಿಯಾಗಿದ್ದಾರೆ.

ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಇದೀಗ ಬಾಯ್​ಫ್ರೆಂಡ್​ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಶ್ರುತಿ ಜೀವನದಲ್ಲಿ ಅನೇಕರು ಬಂದು ಹೋಗಿದ್ದಾರೆ. ಸದ್ಯ ಶ್ರುತಿ ಹಾಸನ್ ಅವರ ಬಾಯ್ ಫ್ರೆಂಡ್ ಹುದ್ದೆ ಖಾಲಿ ಇದೆ.

ಶ್ರುತಿ ಹಾಸನ್ ಅವರು 2010ರಲ್ಲಿ ನಟ ಸಿದ್ಧಾರ್ಥ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಒಂದು ವರ್ಷ ಚೆನ್ನಾಗಿ ಇದ್ದರು. ಆದರೆ, ಇಬ್ಬರ ನಡುವೆ ಏನಾಯಿತೋ ಆನಂತರ ಇಬ್ಬರ ಸಂಬಂಧ ಮುರಿದುಬಿತ್ತು. ಇದಾದ ಬಳಿಕ 2011 ರಿಂದ 2012 ರವರೆಗೆ ಧನುಷ್ ಜೊತೆ ಡೇಟಿಂಗ್ ಮಾಡಿದರು ಎಂಬ ಸುದ್ದಿಯೂ ಹರಿದಾಡಿತು. ಆದರೆ ಈಗಾಗಲೇ ಮದುವೆಯಾಗಿದ್ದ ಧನುಷ್ ಜೊತೆಗಿನ ಅವರ ಸಂಬಂಧವು ಕೆಲವೇ ವರ್ಷಗಳಲ್ಲಿ ಮುರಿದು ಬಿತ್ತು ಎಂಬ ವದಂತಿಯೂ ಇದೆ.

ಧನುಷ್​ ಬಳಿಕ ನಟ ನಾಗಚೈತನ್ಯ ಜೊತೆ ಕೆಲ ವರ್ಷಗಳ ಕಾಲ ಪ್ರಣಯ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆದರೆ, ತನ್ನ ಸಹೋದರಿಯನ್ನು ಕಾರ್ಯಕ್ರಮವೊಂದರಿಂದ ಪಿಕಪ್​ ಮಾಡಲಿಲ್ಲ ಎಂಬ ಕಾರಣಕ್ಕೆ ಶ್ರುತಿ ಹಾಸನ್, ನಾಗಚೈತನ್ಯ ಜತೆಗಿನ ಸಂಬಂಧ ಮುರಿದುಕೊಂಡರು ಎನ್ನಲಾಗಿದೆ. 2014ರಲ್ಲಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾಗ ಶ್ರುತಿ ಹಾಸನ್ ಜತೆ ಡೇಟಿಂಗ್​ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದಾದ ಬಳಿಕ 2016 ರಿಂದ 2019 ರವರೆಗೆ, ಶ್ರುತಿ ಮೂರು ವರ್ಷಗಳ ಕಾಲ ಮೈಕೆಲ್ ಕೊರ್ಸಲೆ ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ತನ್ನ ಜೀವನದ ಬಹುಪಾಲು ಸಮಯ ಮೈಕೆಲ್ ಜೊತೆಗಿದ್ದೇನೆ ಮತ್ತು ಅವನನ್ನು ಮದುವೆಯಾಗಲು ಬಯಸುತ್ತೇನೆ ಎಂದು ಅನೇಕ ಬಾರಿ ಹೇಳಿದ್ದರು. ಆದರೆ ಅಂತಿಮವಾಗಿ 2019ರಲ್ಲಿ ಇಬ್ಬರು ಬೇರ್ಪಟ್ಟರು. ಇದಾದ ಬಳಿಕ 2021 ರಲ್ಲಿ ಶ್ರುತಿ ಹಾಸನ್​ ಶಂತನು ಹಜಾರಿಕಾ ಎಂಬ ಡೂಡಲ್ ಕಲಾವಿದನನ್ನು ಪ್ರೀತಿಸಿದರು. ಆದರೆ ಈಗ ಆತನೊಂದಿಗೂ ಬ್ರೇಕಪ್​ ಮಾಡಿಕೊಂಡಿದ್ದಾರೆ.

ಶ್ರುತಿ ಅವರು ಶಂತನು ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಮತ್ತು ಅವರ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ಅಲ್ಲದೆ, ಶ್ರುತಿ, ಶಂತನು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಬ್ರೇಕಪ್​ ಆಗಿರುವುದು ಕನ್ಫರ್ಮ್​ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಶ್ರುತಿ ಹಾಸನ್ ಮತ್ತು ಶಾಂತನು ವಿವಾಹವಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಇದು ಸಂಪೂರ್ಣ ವದಂತಿ ಎಂದು ಶ್ರುತಿ ಹಾಸನ್ ವಿವರಣೆ ನೀಡಿದ್ದರು. ಇದೀಗ ಇಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶ್ರುತಿ ಹಾಸನ್​ ಸ್ಪಷ್ಟನೆ ನೀಡಬೇಕಿದೆ. (ಏಜೆನ್ಸೀಸ್​)