ಸಿನಿವಾಣಿ

ಅಲ್ಲು ಅರ್ಜುನ್​​ ಜತೆ ಸೊಂಟ ಬಳುಕಿಸಿರೋ ಈ ಬ್ಯೂಟಿ ಯಾರು ಗೊತ್ತಾ? ಈಕೆಯ ಟ್ಯಾಲೆಂಟ್ ಕೇಳಿದ್ರೆ ಬೆರಗಾಗ್ತೀರಿ!​ Allu Arjun

Allu Arjun : ಟಾಲಿವುಡ್​ ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಹಾಗೂ ಸುಕುಮಾರ್​ ನಿರ್ದೇಶನದ ಪುಷ್ಪ-2 ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಸಿನಿಮಾ ಯಶಸ್ಸಿನ ನಡುವೆ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋ ಬೇರೆ ಯಾವುದೂ ಅಲ್ಲ ಪುಷ್ಪ 2 ಚಿತ್ರದ ಹಾಡಿನ ಮೇಕಿಂಗ್​ಗೆ ಸಂಬಂಧಿಸಿದ ವಿಡಿಯೋ. ಅದರಲ್ಲಿ ಗುಲಾಬಿ ಬಣ್ಣದ ಟಾಪ್​ ಮತ್ತು ಕಪ್ಪು ಬಣ್ಣದ ಪ್ಯಾಂಟ್​ ಧರಿಸಿರುವ ಯುವತಿಯೊಬ್ಬಳು ಅಲ್ಲು ಅರ್ಜುನ್ ಜೊತೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಯುವತಿಯ ಡಾನ್ಸ್​ಗೆ ಮಾತ್ರವಲ್ಲ ಆಕೆಯ ಬ್ಯೂಟಿಗೂ ಫಿದಾ ಆಗಿದ್ದು, ಯಾರು ಆಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಅಂದಹಾಗೆ ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿನ ಮೇಕಿಂಗ್ ಸಮಯದಲ್ಲಿ ಯಾರೋ ಮೊಬೈಲ್​ನಲ್ಲಿ ಸೆರೆಹಿಡಿದಿರುವ ವಿಡಿಯೋ ಇದಾಗಿದೆ. ಅಲ್ಲು ಅರ್ಜುನ್​ ಜತೆಗೆ ಸುಂದರಿಯ ಡಾನ್ಸ್ ಪ್ರಾಕ್ಟೀಸ್ ವಿಡಿಯೋವನ್ನು ನೋಡಿದ ನೆಟ್ಟಿಗರು ಆಕೆಯ ಇನ್​ಸ್ಟಾ ಐಡಿ ಕೊಟ್ಟರೆ ಜೀವ ಕೊಡುತ್ತೇನೆಂದು ಕಾಮೆಂಟ್ ಮಾಡುತ್ತಿದ್ದಾರೆ. ಆಕೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿರುವಾಗಲೇ ಆಕೆಯ ಸಂಪೂರ್ಣ ಜಾತಕ ಇದೀಗ ಬಯಲಾಗಿದೆ.

ವೈರಲ್​​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಪಕ್ಕದಲ್ಲಿ ಡಾನ್ಸ್​ ಮಾಡಿದ ಹುಡುಗಿಯ ಹೆಸರು ಊರ್ವಶಿ ಅಪ್ಸರಾ. ಪುಷ್ಪ 2 ಚಿತ್ರಕ್ಕೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿರುವ ಕಿಸ್ಸಿಕ್ ಹಾಡಿಗೆ ಈ ಊರ್ವಶಿ ಅವರೇ ಅಸಿಸ್ಟೆಂಟ್ ಕೊರಿಯೋಗ್ರಾಫರ್. ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ಗಣೇಶ್ ಆಚಾರ್ಯ ಅವರ ಬಳಿ ಊರ್ವಶಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಪುಷ್ಪ ಚಿತ್ರದ ಮೊದಲ ಭಾಗ ಊ ಅಂಟಾವಾ ಮಾವ ಹಾಡಿಗೂ ಊರ್ವಶಿ ನೃತ್ಯ ಸಂಯೋಜನೆ ಮಾಡಿದ್ದರು. ಈ ಊರ್ವಶಿ ಬೆಲ್ಲಿ ಡಾನ್ಸ್‌ನಲ್ಲಿ ಪರಿಣಿತಿ ಪಡೆದಿದ್ದಾರೆ. ಇದರ ಜತೆಗೆ ಯೋಗ ತರಬೇತಿಯನ್ನು ನೀಡುತ್ತಾರೆ. ಅಷ್ಟೇ ಅಲ್ಲ ನಟಿಯೂ ಹೌದು. ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಟ್ಟಿ ಪಾರ್ಟಿ, ಅನಂತ್, ಪಿಂಟು ಕಿ ಪಾಪಿ ಮುಂತಾದ ಚಲನಚಿತ್ರಗಳಲ್ಲಿ ಊರ್ವಶಿ ನಟಿಸಿದ್ದಾರೆ. ಊರ್ವಶಿ ಅವರು ಅನೇಕ ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡಿದ್ದಾರೆ.

ಈ ಚೆಲುವೆ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದು, ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈಬಿಸಿಯೇರಿಸುತ್ತಿರುತ್ತಾರೆ. ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿ, ಸಹಾಯಕ ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡಿದರೂ ಊರ್ವಶಿಗೆ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಆದರೆ, ಅಲ್ಲು ಅರ್ಜುನ್ ಜತೆ ಡಾನ್ಸ್​ ಪ್ರಾಕ್ಟೀಸ್​ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಈ ಸುಂದರಿಯ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್​ನಲ್ಲಿದೆ.

ವಿಡಿಯೋ ನೋಡಿದವರು ಶ್ರೀಲೀಲಾ ಬದಲು ಊರ್ವಶಿ ಅವರೇ ಕಿಸ್ಸಿಕ್​ ಹಾಡಿಗೆ ಸೊಂಟ ಬಳುಕಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಏನೇ ಇರಲಿ ಒಂದೇ ಒಂದು ಮೇಕಿಂಗ್ ವಿಡಿಯೋ ಮೂಲಕ ಊರ್ವಶಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. (ಏಜೆನ್ಸೀಸ್​)