ಸಿನಿವಾಣಿ

ನೊರಾ ಫತೇಹಿ ಅವರ ಈ ಡ್ರೆಸ್​ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಸುಸ್ತಾಗ್ತೀರಿ ...

ಮುಂಬೈ: ಬಾಲಿವುಡ್​ ನಟಿಯರು ಫ್ಯಾಶನ್​ಗೆ ಹೆಚ್ಚು ಗಮನ ಕೊಡುವುದು, ಕಾಸ್ಟ್ಲಿ ಬಟ್ಟೆಗಳನ್ನು ಖರೀದಿಸುವುದು ಎಲ್ಲರಿಗೂ ಗೊತ್ತಿದೆ. ಈ ಪಟ್ಟಿಯಲ್ಲಿ ನೊರಾ ಸಹ ಒಬ್ಬರು. ಈ ನೊರಾ ಯಾರು ಅಂತ ಗೊತ್ತು ತಾನೆ? 'ರೋರ್​' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನೊರಾ ನಂತರದ ವರ್ಷಗಳಲ್ಲಿ ಸಾಕಷ್ಟು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಲಾಕ್​ಡೌನ್​ಗೂ ಮುನ್ನ ನೊರಾ ಅಭಿನಯದ 'ಸ್ಟ್ರೀಟ್​ ಡ್ಯಾನ್ಸರ್​' ಚಿತ್ರವು ಬಿಡುಗಡೆಯಾಗಿತ್ತು.

ಈಗ್ಯಾಕೆ ಆಕೆಯ ವಿಷಯ ಎಂದರೆ, ನೊರಾ ಆಗಾಗ ಹೊಸಹೊಸ ಕಾಸ್ಟ್ಯೂಮ್​ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸಹ ಅವರು ಬಿಳಿ ಡ್ರೆಸ್​ನಲ್ಲಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.

ಅಂದಹಾಗೆ, ಆ ಕಾಸ್ಟ್ಯೂಮ್​ನ ಬೆಲೆ ಎಷ್ಟು ಗೊತ್ತಾ? ಎರಡು ಲಕ್ಷದ ಮೂವತ್ತು ಸಾವಿರವಂತೆ. ಹಾಗಂತ ಅವರೆಲ್ಲೂ ಹೇಳಿಕೊಂಡಿಲ್ಲ. ಅವರ ಫೋಟೋಗಳನ್ನು ನೋಡಿರುವ ನೆಟ್ಟಿಗರು, ಅವರು ತೊಟ್ಟಿರುವ ಕಾಸ್ಟ್ಯೂಮ್​ಗೆ ಬೆಲೆ ಎಷ್ಟಿರಬಹುದು ಎಂದು ತನಿಖೆ ನಡೆಸಿದ್ದಾರೆ. ಸಾಕಷ್ಟು ತನಿಖೆಯ ನಂತರ ಅದಕ್ಕೆ 2.3 ಲಕ್ಷ ರೂಪಾಯಿಗಳೆಂದು ಪತ್ತೆ ಹಚ್ಚಿದ್ದಾರೆ.

ಬಾಲಿವುಡ್​ ನಟ-ನಟಿಯರು ತಾವು ತೊಡುವ ಬಟ್ಟೆಗಳಿಗೆ ಲಕ್ಷಲಕ್ಷ ಚೆಲ್ಲುವುದು ಇತ್ತೀಚೆಗೆ ಟ್ರೆಂಡ್​ ಆಗುತ್ತಿದ್ದು, ಹಲವು ನಟ-ನಟಿಯರು ತಮ್ಮ ಕಾಸ್ಟ್ಯೂಮ್​ಗಳಿಗೆಂದೇ ಪ್ರತಿ ತಿಂಗಳು ಇಂತಿಷ್ಟು ಬಜೆಟ್​ ಎತ್ತಿಡುತ್ತಾರೆ ಎಂದು ಹೇಳಲಾಗುತ್ತದೆ.