ಸಿನಿವಾಣಿ

ರಶ್ಮಿಕಾ,ತಮನ್ನಾರನ್ನು ಹಿಂದಿಕ್ಕಿದ್ದ ಕೀರ್ತಿ ಸುರೇಶ್​: ದಸರಾ ಚಿತ್ರಕ್ಕಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು?

ಹೈದರಾಬಾದ್​: ಯಶಸ್ವಿ ನಟಿಯರಲ್ಲಿ ಒಬ್ಬರೆನಿಸಿಕೊಂಡಿರುವ ನಟಿ ಕೀರ್ತಿ ಸುರೇಶ್ ಸದ್ಯ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹೆಚ್ಚು ಗ್ಲಾಮರ್​ ಆಗಿ ಕಾಣಿಸಿಕೊಳ್ಳದೇ ಇದ್ದರೂ ತಮ್ಮದೇ ವಿಭಿನ್ನ ಶೈಲಿಯಿಂದ ತನ್ನದೇ ಅಭಿಮಾನಿ ವರ್ಗವನ್ನು ಹೊಂದಿರುವ ನಟಿ ಕೀರ್ತಿ ಸುರೇಶ್​ ಸದ್ಯ ಸಂಭಾವನೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಮಹಾನಟಿ ಚಿತ್ರದ ಮೂಲಕ ದೊಡ್ಡ ಮಟ್ಟದ ಬ್ರೇಕ್​ ಪಡೆದ ನಟಿ ನಂತರ ಸಾಲು ಸಾಲು ಸಿನಿಮಾಗಳ ಅವಕಾಶಗಳು ಬಂದವು, ದೇಹದ ತೂಕ ಇಳಿಸಿಕೊಂಡು ಮಹೇಶ್​ ಬಾಬು ಜತೆಗಿನ ಸರ್ಕಾರಿ ವಾರುಪಾಟ ಚಿತ್ರ ಯಶಸ್ಸಿನ ಬಳಿಕ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ರಶ್ಮಿಕಾ ಹಾಗೂ ತಮನ್ನಾರನ್ನೇ ಹಿಂದಿಕ್ಕಿದ್ದಾರೆ.

ಸದ್ಯ ನಾನಿ -ಕೀರ್ತಿ ಜೋಡಿಯಾಗಿ ತೆಲುಗಿನ ದಸರಾ ಸಿನಿಮಾ ಸೆಟ್ಟೇರುತ್ತಿದ್ದು, ಇದಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ 3 ಕೋಟಿ ರೂ. ಗೂ ಅಧಿಕ ಸಂಭಾವನೆ ಕೇಳಿದ್ದು, ನಿರ್ಮಾಪಕರು ಕೂಡ ಒಪ್ಪಿಗೆ ನೀಡಿದ್ದಾರೆ.

ಸದ್ಯ ಯಶಸ್ವಿ ನಟಿಯಾಗಿರುವುದರಿಂದ ನಿರ್ಮಾಪಕರು ಕೂಡ ಕೇಳುವಷ್ಟು ಸಂಭಾವನೆಯನ್ನು ಕೊಡುತ್ತೇವೆ ಎಂದಿದ್ದಾರಂತೆ. ಈ ಚಿತ್ರ ಯಶಸ್ವಿಯಾದಲ್ಲಿ ಕೀರ್ತಿ ಸಂಭಾವನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)