ಸಿನಿವಾಣಿ

ಬಿಕಿನಿ ಫೋಟೋಗೆ ರೇಷ್ಮೆ ಸೀರೆ, ಬುರ್ಕಾ! ಹಿಗ್ಗಾ-ಮುಗ್ಗಾ ಟ್ರೋಲ್ ಆದ ನಟಿ ದಿಶಾ ಪಟಾನಿ...

ನಟಿ ದಿಶಾ ಪಟಾನಿ ತಮ್ಮ ಸಿನಿಮಾಗಳಿಗಿಂತ ಹೆಚ್ಚು ಅವರ ಬೋಲ್ಡ್ ಲುಕ್​​ಗೆ ಸಿಕ್ಕಾಪಟ್ಟೆ ಫೇಮಸ್. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಖತ್ ಹಾಟ್ ಹಾಟ್ ಫೋಟೋಗಳನ್ನು ತಮ್ಮ ಸೋಶೀಯಲ್ ಮೀಡಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಲೆ ಇರುತ್ತಾರೆ. ಹಾಗೆಯೇ, ಇತ್ತೀಚೆಗೆ ದಿಶಾ ಬಿಕಿನಿ ಧರಿಸಿದ್ದು, ಈಜುಕೊಳದಲ್ಲಿ ಮುಳುಗಿ ಒದ್ದೆಯಾಗಿ ನಿಂತಿರುವ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು. ಆ ಫೋಟೋವನ್ನು ಸಿಕ್ಕಿದ್ದೆ ಅವಕಾಶ ಎಂದು ಬಳಸಿಕೊಂಡ ಟ್ರೋಲಿಗರು ವಿವಿಧ ಉಡುಪುಗಳನ್ನು ಧರಿಸಿ ಹಿಗ್ಗಾ-ಮುಗ್ಗಾ ಟ್ರೋಲ್ ಮಾಡಿದ್ದಾರೆ.
ಹೌದು, ನಟಿಯ ಬಿಕಿನಿ ಫೋಟೋವನ್ನು ಎಡಿಟ್ ಮಾಡಿ ಟ್ರೋಲಿಗರು, ಅದೇ ಫೋಟೋಗೆ ರೇಷ್ಮೆ ಸೀರೆ ಉಡಿಸಿದ್ದಾರೆ. ನಂತರ, ಅದೇ ಫೋಟೋಗೆ ಶಾಲ್ ಹೊದಿಸಿ ಎಡಿಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ನಟಿಗೆ ಜೀನ್ ಪ್ಯಾಂಟ್ ಮತ್ತು ಸ್ಕರ್ಟ್ ಕೂಡ ತೊಡಿಸಿದ್ದಾರೆ. ಅದಕ್ಕೆ, ದಿಶಾ ಅವರಿಗೆ 'ಹಾಕಿಕೊಳ್ಳಲು ಬಟ್ಟೆ' ಎಂಬ ಕಾಮೆಂಟ್​ಗಳು ಮಾಡಲಾಗಿದೆ. ಮತ್ತೊಂದೆಡೆ, ಅದೇ ಫೋಟೋಗೆ ಬುರ್ಕಾ ಕೂಡ ಹಾಕಲಾಗಿದೆ. ಹೀಗೆ, ಎಡಿಟ್ ಮಾಡಲಾದ ನಟಿಯ ಫೋಟೋಗಳು ನಿಜವಾದ ಬಿಕಿನಿ ಫೋಟೋಗಿಂತ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. 50 ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು ಇನ್​ಸ್ಟಾಗ್ರಾಂನಲ್ಲಿ ಹೊಂದಿರುವ ನಟಿ ದಿಶಾ ಈ ಟ್ರೋಲ್​ಗಳಿಗೆ ಕ್ಯಾರೆ ಮಾಡಲಿಲ್ಲ.