ಸಿನಿವಾಣಿ

ನಟ ಸುಶಾಂತ್​ ಸಿಂಗ್ ಮನೆಯ ಕೆಲಸದವನು ಸಾಚಾ ಅಲ್ವೇ ಅಲ್ಲ ಎಂದ ಎನ್​​ಸಿಬಿ

ಮುಂಬೈ: ನಟ ಸುಶಾಂತ್​ ಸಿಂಗ್ ಹತ್ಯೆ ಪ್ರಕರಣವನ್ನು ಸಿಬಿಐ, ಎನ್​​ಸಿಬಿ ಮತ್ತು ಇಡಿ ತನಿಖಾ ಏಜೆನ್ಸಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.

ಸುಶಾಂತ್​ ಸಿಂಗ್​ ಸಾವಿನೊಂದಿಗೆ ಕೇಳಿಬರುತ್ತಿರುವ ಡ್ರಗ್ಸ್​ ಜಾಲದ ತನಿಖೆಯನ್ನು ಎನ್​ಸಿಬಿ ಮಾಡುತ್ತಿದ್ದು, ಈಗಾಗಲೇ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೇ ಅರೆಸ್ಟ್​ ಆದವರಲ್ಲಿ ಸುಶಾಂತ್ ಮನೆಯ ಕೆಲಸದವನಾದ ದೀಪೇಶ್ ಸಾವಂತ್​ ಕೂಡ ಓರ್ವ. ಇದನ್ನೂ ಓದಿ: ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕಾನ್ಸಲ್​ ಜನರಲ್​ ಆಗಿ ಜ್ಯುಡಿತ್​ ರೇವಿನ್ ನೇಮಕ

ರಿಯಾ ಚಕ್ರವರ್ತಿ ಅಕ್ರಮವಾಗಿ ಡ್ರಗ್ಸ್​ ಖರೀದಿ ಮಾಡುತ್ತಿದ್ದರು ಎಂದು ಹೇಳಿದ್ದೇ ಈ ದೀಪೇಶ್​ ಸಾವಂತ್​. ಆದರೆ ಈತನೇನೂ ಸಾಚಾ ಅಲ್ಲ, ಸಾಮಾನ್ಯ ಕೆಲಸದವನೂ ಅಲ್ಲ ಎಂಬುದನ್ನು ಎನ್​ಸಿಬಿ ಮೂಲಗಳೇ ಸ್ಪಷ್ಟಪಡಿಸಿವೆ. ದೀಪೇಶ್​ ನೀಡಿರುವ ಕೆಲವು ಹೇಳಿಕೆಗಳು, ಸಂಗ್ರಹಿಸಲಾದ ಕೆಲವು ಡಿಜಿಟಲ್​ ಪುರಾವೆಗಳ ಪ್ರಕಾರ, ಡ್ರಗ್ಸ್ ದಂಧೆಯಲ್ಲಿ ಆತನೂ ಸಕ್ರಿಯ ಎಂಬುದು ಗೊತ್ತಾಗಿದೆ. ಸಮಾಜದ ಉನ್ನತ ವ್ಯಕ್ತಿಗಳೊಂದಿಗೆ, ಡ್ರಗ್ಸ್​ ಪೂರೈಕೆದಾರರೊಂದಿಗೆ ದೀಪೇಶ್​ ನಿಕಟ ಸಂಪರ್ಕದಲ್ಲಿದ್ದ ಎಂಬುದನ್ನು ಎನ್​ಸಿಬಿಯೇ ತಿಳಿಸಿದೆ.

ಸೆಪ್ಟೆಂಬರ್​ 4ರಿಂದಲೂ ಎನ್​ಸಿಬಿ ಕಸ್ಟಡಿಯಲ್ಲಿರುವ ದೀಪೇಶ್​ನನ್ನು ವ್ಯದ್ಯಕೀಯ ತಪಾಸಣೆಗೂ ಒಳಪಡಿಸಲಾಗಿದೆ. ಹಾಗೇ, ಸೆಪ್ಟೆಂಬರ್​ 9ರವರೆಗೂ ಆತನನ್ನು ಎನ್​ಸಿಬಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ. (ಏಜೆನ್ಸೀಸ್​)