ಸಿನಿವಾಣಿ

ಸುಶಾಂತ್​ನನ್ನು ಕೊಲೆ ಮಾಡಿದ್ದು ದೀಪೇಶ್​!?; ಪ್ಯಾರಾನಾರ್ಮಲ್​ ತಜ್ಞನ ಮಾತುಕತೆಯಲ್ಲಿಯೇ ಇತ್ತು ಉತ್ತರ!

manjunathktgns

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಟ್ವಿಸ್ಟ್​ಗಳ ಮೇಲೆ ಟ್ವಿಸ್ಟ್ ಎದುರಾಗುತ್ತಿವೆ. ಇತ್ತೀಚೆಗಷ್ಟೇ ಪ್ಯಾರಾನಾರ್ಮಲ್​ ತಜ್ಞ ಸುಶಾಂತ್​ ಆತ್ಮದೊಂದಿಗೆ ಮಾತುಕತೆ ನಡೆಸಿದ ಬಳಿಕ ಮತ್ತಷ್ಟು ಹೊಸ ಪುರಾವೆಗಳು ಲಭ್ಯವಾಗುತ್ತಿವೆ. ಇದೀಗ ತಜ್ಞ ಸ್ಟೇವ್​ ಹಫ್​ ಎರಡು ಶೇರ್​ ಮಾಡಿಕೊಂಡಿರುವ ವಿಡಿಯೋಗಳು ಬೇರೆ ಬೇರೆ ಕೋನಗಳಿಂದ ಹೊಸ ಹೊಸ ಅನುಮಾನಗಳ ಹುಟ್ಟಿಗೆ ಕಾರಣವಾಗುತ್ತಿದೆ.

ಹೌದು, ಸ್ಟೇವ್​ ಹಫ್ ಸುಶಾಂತ್​ಗೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್​ಗೆ ಹಾಕಿದ್ದೇ ತಡ, ಮಿಲಿಯನ್​ಗಟ್ಟಲೇ ಆ ವಿಡಿಯೋಗಳು ವೀಕ್ಷಣೆ ಕಂಡಿವೆ. ಸಾವಿರಾರು ಕಮೆಂಟ್​ಗಳು ವಿಡಿಯೋಕ್ಕೆ ಸಂದಾಯವಾಗಿವೆ. ಒಂದಷ್ಟು ನೆಟ್ಟಿಗರು, ಆ ವಿಡಿಯೋದ ಮಾತುಕತೆಯನ್ನೇ ಆಧರಿಸಿ ಅಸಲಿ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಸುಶಾಂತ್​ ಮಾತುಗಳನ್ನೇ ಡಿಕೋಡ್​ ಮಾಡಿ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು, ದೀಪೇಶ್​ ಎಂಬುವವರನ್ನು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಅಂದಹಾಗೆ, 7.43 ಸೆಕೆಂಡ್​ನ ವಿಡಿಯೋದಲ್ಲಿ ಸುಶಾಂತ್ ಹೇಳಿದ ಹಲವು ವಿಚಾರಗಳು ನಿಜಕ್ಕೂ ಅಚ್ಚರಿ ಹುಟ್ಟಿಸಿವೆ. ಅವುಗಳನ್ನು ಈ ರೀತಿಯಲ್ಲಿ ನೆಟ್ಟಿಗರೇ ಡಿಕೋಡ್​ ಮಾಡಿದ್ದಾರೆ ನೋಡಿ. 

4.37; ಸ್ನೇಹದ ಹೆಸರನಲ್ಲಿ ಆತ ನನ್ನನ್ನು ಕೊಲೆಮಾಡಿದ.

4.45; ನಾನು ಆ ಹೊತ್ತಿನಲ್ಲಿ ಅಡುಗೆ ಮನೆಯಲ್ಲಿದ್ದೆ

5.02; ಸಂದೀಪ್​ ಜತೆ ದೊಡ್ಡ ವಾಗ್ವಾದ

5.11; ಆತ ಹಗ್ಗವನ್ನು ತಂದ

5.23; ದೀಪೇಶನೇ ಇಷ್ಟೆಲ್ಲ ಮಾಡಿದ್ದು

ಹೀಗೆ ವಿಡಿಯೋದಲ್ಲಿನ ಮಾತುಕತೆಯಲ್ಲಿ ಈ ರೀತಿ ನಡೆದಿದ್ದು, ಆ ಹೇಳಿಕೆಯ ಆಧಾರದ ಮೇಲೆ ನೆಟ್ಟಿಗರು ಉತ್ರವೊಂದನ್ನು ಕಂಡುಕೊಂಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ, (ಏಜೆನ್ಸೀಸ್​)