ಮುಂಬೈ: ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ಸಾಯಿ ಪಲ್ಲವಿ ಅವರ ಮೊದಲ ಸಿನಿಮಾ "ಪ್ರೇಮಂ" ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಸಾಯಿ ಪಲ್ಲವಿಯವರು ಪ್ರೇಮಂ ಚಿತ್ರಕ್ಕೂ ಮುಂಚೆಯೇ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ 2006ರಲ್ಲೇ ತೆರೆಕಂಡ ತಮಿಳು ಚಿತ್ರ ಧಾಮ್ ಧೂಮ್ನಲ್ಲಿ ನಟಿಸಿದ್ದರು ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ.
ಹೌದು, ಧಾಮ್ ಧೂಮ್ ಚಿತ್ರದ ಶೂಟಿಂಗ್ ವೇಳೆ ಸಾಯಿ ಪಲ್ಲವಿಯವರು 6ನೇ ತರಗತಿ ಓದುತ್ತಿದ್ದರು. ಹೀಗಿದ್ದರೂ ಧಾಮ್ ಧೂಮ್ ತಮ್ಮ ಮೊದಲನೇ ಚಿತ್ರವೆಂದು ಸಾಯಿ ಪಲ್ಲವಿ ಎಂದೂ ಪರಿಗಣಿಸಿಲ್ಲವಂತೆ. ಅದಕ್ಕೆ ಕಾರಣ ಏನೆಂಬುದನ್ನು ಅವರೇ ವಿವರಿಸಿದ್ದಾರೆ ಮುಂದೆ ಓದಿ. ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ, ಹೌದು ನಾನು ಧಾಮ್ ಧೂಮ್ ಚಿತ್ರವನ್ನು ನನ್ನ ಮೊದಲ ಚಿತ್ರವೆಂದು ಭಾವಿಸಿಲ್ಲ. ಆಗ ನಾನು ಆರನೇ ತರಗತಿ ಓದುತ್ತಿದ್ದೇ, ತರಗತಿ ಇಷ್ಟವಿಲ್ಲದಿದ್ದರಿಂದ ನಾನು ನನ್ನ ಫ್ರೆಂಡ್ಸ್ ಜತೆಯಲ್ಲಿ ಶೂಟಿಂಗ್ಗೆ ಹೋಗುತ್ತಿದ್ದೆ. ಎರಡು ದಿನ ಶೂಟಿಂಗ್ ಮಾಡಿದೆ. ಅಂದಿನ ದಿನ ನಿಜಕ್ಕೂ ಕೆಟ್ಟ ಅನುಭವವಾಗಿತ್ತು. ಅಷ್ಟೊಂದು ಶಾಖದಲ್ಲಿ, ಎಷ್ಟು ಬಾರಿ ಶೂಟ್ ಮಾಡಿದ್ದನ್ನೇ ಮಾಡುತ್ತಾರೆ ಎಂದು ಬೈದುಕೊಳ್ಳುತ್ತಿದ್ದೆ. ಮೇಕಪ್, ಉಡುಪು, ಕೇಶ ಶೈಲಿ ಇವೆಲ್ಲವನ್ನು ನಾಯಕಿಯಾದವಳು ನಿಭಾಯಿಸುವುದು ತುಂಬಾ ಕಷ್ಟವೆಂದು ತಿಳಿದೆ ಎನ್ನುತ್ತಾರೆ ಸಾಯಿ ಪಲ್ಲವಿ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪ್ರೇಮಂ, ಮಾರಿ 2 ಹಾಗೂ ಫಿದಾ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಸಾಯಿ ಪಲ್ಲವಿ, ಸದ್ಯ ಲವ್ ಸ್ಟೋರಿ ಮತ್ತು ವಿರಾಟ ಪರ್ವಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಯಿ ಪಲ್ಲವಿ ಅವರ ರೌಡಿ ಬೇಬಿ ಹಾಡು ಚಿತ್ರ ಜಗತ್ತಿನಲ್ಲಿ ಭರ್ಜರಿ ದಾಖಲೆಯನ್ನು ಮಾಡಿದ್ದು, ಭಾಷೆಯ ಗಡಿ ಮೀರಿ ಎಲ್ಲರೂ ಇಷ್ಟಪಟ್ಟಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: ಕುಜ ದೋಷದ ಬಗ್ಗೆ ಗೊತ್ತಿದ್ದರೂ, ಬೇಕಂತಲೇ ನಿರ್ಲಕ್ಷ್ಯ ಮಾಡಿದ್ರಾ ಚಿರು!?