ಮುಂಬೈ: ಬಾಲಿವುಡ್ನ ಅತ್ಯಂತ ವಿವಾದಾತ್ಮಕ ನಟಿ ಎಂದರೆ ಅದು ಕಂಗನಾ ರಣಾವತ್. ಒಂದಲ್ಲ ಒಂದು ಕಾರಣಕ್ಕೆ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದು, ಇದರಿಂದ ಹೊಸ ವಿವಾದ ಪ್ರಾರಂಭವಾಗಿದೆ. ತಮ್ಮ ಪೋಸ್ಟ್ ಮೂಲಕ ಕಂಗನಾ ಪರೋಕ್ಷವಾಗಿ ಯಾರ ಕಾಲೆಳೆದಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಇತ್ತೀಚೆಗಷ್ಟೇ ಕರೊನಾದಿಂದು ಸುಧಾರಿಸಿಕೊಂಡಿರುವ ಕಂಗನಾ, ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಕರೊನಾದಿಂದ ಕಲಿತ ಐದು ಪಾಠಗಳ ಕುರಿತು ಅವರು ಬರೆದುಕೊಂಡಿದ್ದಾರೆ. ಈ ಪೈಕಿ, ನಿಧಿ ಸಂಗ್ರಹಣೆಗಾಗಿ ಬಡವರ ಹತ್ತಿರ ಭಿಕ್ಷೆ ಬೇಡಬೇಡಿ ಎಂದು ಅವರು ಬರೆದಿದ್ದು, ಇದು ಸಾಕಷ್ಟು ಚರ್ಚೆಯಾಗುತ್ತಿದೆ.
ಪ್ರಮುಖವಾಗಿ, ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಹಲವು ಸೆಲೆಬ್ರಿಟಿಗಳು ಫಂಡ್ರೈಸರ್ಗಳನ್ನು ಪ್ರಾರಂಭಿಸಿದ್ದಾರೆ. ನಟಿಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮ ಮುಂತಾದವರು ಫಂಡ್ಗಳನ್ನು ಪ್ರಾರಂಭಿಸಿದ್ದು, ಹಲವು ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ. ಈ ಫಂಡ್ಗೆ ಬಡವರು, ಶ್ರೀಮಂತರೆನ್ನೆದೆ ಹಲವರು ಧನಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ತೌಕ್ತೆ ಚಂಡಮಾರುತಕ್ಕೆ ಮೈದಾನ್ ಚಿತ್ರದ ಸೆಟ್ ಧ್ವಂಸ
ಕಂಗನಾ ಇಲ್ಲಿ ಯಾರ ಹೆಸರನ್ನೂ ಪ್ರತ್ಯೇಕವಾಗಿ ತೆಗೆದಿಲ್ಲ. ಆದರೆ, ಪ್ರಿಯಾಂಕಾ, ಅನುಷ್ಕಾ ಮುಂತಾದವರನ್ನು ಗಮನದಲ್ಲಿಟ್ಟುಕೊಂಡೇ, ಕಂಗನಾ ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಆದರೆ, ಕಂಗನಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಹೇಳಬೇಕಾಗಿದ್ದನ್ನು ಹೇಳಿ, ಮುಂಬೈ ಬಿಟ್ಟು ಹಿಮಾಚಲ ಪ್ರದೇಶದಲ್ಲಿರುವ ತಮ್ಮ ಮನೆಗೆ ಅವರು ಪ್ರಯಾಣ ಬೆಳೆಸಿದ್ದಾರೆ.