ಸಿನಿವಾಣಿ

ಬಿಗ್​ಬಾಸ್​ ಆರಂಭಕ್ಕೂ ಮುನ್ನವೇ ಸ್ಪರ್ಧಿಯೊಬ್ಬರ ಹೆಸರು ಬಹಿರಂಗ..!?

ಧಾರವಾಡ: ಕನ್ನಡ ಕಿರಿತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ 8ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬಿಗ್​ ಮನೆ ಪ್ರವೇಶಿಸಲಿದ್ದಾರೆ ಎಂಬ ಕೂತೂಹಲ ಮೂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಕುತೂಹಲಕ್ಕೆ ಬ್ರೇಕ್​ ಬೀಳಲಿದೆ.

ಆದರೆ, ಅದಕ್ಕೂ ಮುನ್ನವೇ ಸ್ಪರ್ಧಿಯೊಬ್ಬರ ಹೆಸರು ಬಹಿರಂಗವಾಗಿದೆ. ಹೌದು. ಬಿಗ್​ಬಾಸ್​ ಮನೆಗೆ ಧಾರವಾಡ ಗಾಯಕನ ಎಂಟ್ರಿಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಶೋನ ಆರಂಭಕ್ಕೂ ಮೊದಲೇ ಸ್ಪರ್ಧಿಯ ಹೆಸರು ಬಹಿರಂಗವಾಗಿದೆ. ಬಿಗ್​ಬಾಸ್ ಸ್ಪರ್ಧಿಯಾಗಲಿದ್ದಾರಂತೆ ವಿಶ್ವನಾಥ ಹಾವೇರಿ. ವಿಶ್ವನಾಥ್​, ಧಾರವಾಡದ ಯುವ ಗಾಯಕ. ಕಲರ್ಸ್​ ಕನ್ನಡದಲ್ಲಿ ಮೂಡಿಬಂದ "ಹಾಡು ಕರ್ನಾಟಕ" ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಪಡೆದಿದ್ದಾರೆ.

ವಿಶ್ವನಾಥ್​ ಸ್ಪರ್ಧೆ ಕುರಿತು ಧಾರವಾಡ ಬಾಂಡ್ಸ್ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್​ ಒಂದು ಹರಿದಾಡುತ್ತಿದೆ. ಧಾರವಾಡದ ಪ್ರತಿಷ್ಠಿತ ಫೇಸ್‌ಬುಕ್ ಪೇಜ್‌ನಲ್ಲಿ ವಿಶ್ವನಾಥ ಹೆಸರು ಬಹಿರಂಗವಾಗಿದ್ದು, ಶುಭ ಕೋರಲಾಗಿದೆ. ಆದರೆ, ಇದು ಅಧಿಕೃತವೇ ಎಂಬುದು ಖಚಿತವಾಗಿಲ್ಲ. ಇದು ನಿಜವೇ ಆಗಿದ್ದರೆ ಇಂದು ಕಾರ್ಯಕ್ರಮದ ಆರಂಭದ ಬಳಿಕ ಗೊತ್ತಾಗಲಿದೆ. (ದಿಗ್ವಿಜಯ ನ್ಯೂಸ್​)