ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಬಿಟೌನ್ನ ಟಾಪ್ ನಟಿ. ಸ್ಟಾರ್ ಹೀರೋಗಳು ಒಂದು ಸಿನಿಮಾಕ್ಕೆ ಪಡೆಯುವಷ್ಟು ಸಂಭಾವನೆ ಪಡೆಯುವ ತಾಕತ್ತು ಈ ನಟಿಗಿದೆ. ಈಗಾಗಲೇ ಪಡೆದುಕೊಂಡಿದ್ದೂ ಉಂಟು. ಇನ್ನೂ ಒಂದು ಕೈ ಮುಂದೆ ಹೋಗಿ ಸಿನಿಮಾ ನಿರ್ಮಾಣ ಮಾಡಿ, ಕೋಟಿ ಕೋಟಿ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಂಥ ಸ್ಟಾರ್ ನಟಿಯ ಬಾಡಿಗಾರ್ಡ್ ಸಂಬಳ ಎಷ್ಟಿರಬಹುದು? ನಿಜಕ್ಕೂ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಬಹುದು. ಆದರೆ, ಆ ಕಷ್ಟದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ
ಹೌದು, ಕಳೆದ ಹಲವು ವರ್ಷಗಳಿಂದ ದೀಪಿಕಾ ಬಾಡಿಗಾರ್ಡ್ ಆಗಿ ಜಲಾಲ್ ಕೆಲಸ ಮಾಡುತ್ತಿದ್ದಾರೆ. ದೀಪಿಕಾ ಎಲ್ಲೇ ಹೋದರೂ ಅವರನ್ನು ಕಾಯುವ ಕೆಲಸವನ್ನು ಇಲ್ಲಿಯವರೆಗೂ ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದಾರೆ ಜಲಾಲ್. ಅಷ್ಟೇ ಅಲ್ಲ ಜಲಾಲ್ ದೀಪಿಕಾ ಪಾಲಿಗೆ ಕೇವಲ ಬಾಡಿಗಾರ್ಡ್ ಆಗಿಲ್ಲ. ಒಬ್ಬ ಸಹೋದರನಂತೆ ನನ್ನ ಬೆನ್ನಿಗಿರುತ್ತಾರೆ ಎಂದು ದೀಪಿಕಾ ಸಹ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಹೀಗಿರುವಾಗ ಜಲಾಲ್ಗೆ ದೀಪಿಕಾ ನೀದುವ ಸಂಬಳ ಎಷ್ಟು ಗೊತ್ತ? ವಾರ್ಷಿಕ ಬರೋಬ್ಬರಿ 1 ಕೋಟಿ ರೂಪಾಯಿ!!
2017ರಲ್ಲಿ ವಾರ್ಷಿಕ 80 ಲಕ್ಷ ಸಂಬಳ ಪಡೆಯುತ್ತಿದ್ದ ಜಲಾಲ್, ಇದೀಗ ಅವರ ಸಂಬಳ 1 ಕೋಟಿ ಮೀರಿದೆ ಎಂದರೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಈ ಮೂಲಕ ಪ್ರತಿ ತಿಂಗಳಿಗೆ 8.33 ಲಕ್ಷ ಸಂಬಳ ಪಡೆಯುತ್ತಿದ್ದಾರೆ ಜಲಾಲ್. (ಏಜೆನ್ಸೀಸ್)