ಮಾನಸಿಕ ಸ್ವಾಸ್ಥ್ಯದ ಬಗ್ಗೆ ದೀಪಿಕಾ ಪಡುಕೋಣೆ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಸೋಮವಾರ ಸಹ ಅದನ್ನೇ ಪುನರುಚ್ಚರಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ರಜಪೂತ್ ಸಾವು!
ಹೌದು, ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ದೀಪಿಕಾ ಆ ಬಗ್ಗೆ ಬಹುಮುಖ್ಯವಾದ ಅಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಾನೂ ಸಹ ಖಿನ್ನತೆಗೊಳಗಾಗಿ ಅದರಿಂದ ಹೊರಬಂದ ವ್ಯಕ್ತಿಯಾಗಿರುವುದರಿಂದ ಅದನ್ನೇ ಪುನಃ ಒತ್ತಿ ಹೇಳಲಾರೆ, ಆದರೆ ಒಂದಷ್ಟು ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಲೇಬೇಕು’ ಎಂದಿದ್ದಾರೆ. ಹಾಗಾದರೆ ದೀಪಿಕಾ ನೀಡಿದ ಆ ಸಲಹೆಗಳೇನು? ಇದನ್ನೂ ಓದಿ: ಸುಶಾಂತ್ ಸಿಂಗ್ನದ್ದು ಆತ್ಮಹತ್ಯೆಯಲ್ಲ, ಕೊಲೆ; ನಟನ ಚಿಕ್ಕಪ್ಪನಿಗೆ ಅನುಮಾನ; ತನಿಖೆಗೆ ಒತ್ತಾಯ
‘ಮಾತನಾಡಿ, ಇನ್ನೊಬ್ಬರ ಜತೆ ಸಂವಹನ ನಡೆಸಿ, ನಿಮಗನಿಸಿದ್ದನ್ನು ಹಂಚಿಕೊಳ್ಳಿ. ಸಹಾಯ ಬೇಕೆಂದರೆ ಕೇಳಿ ಪಡೆಯಿರಿ. ನೆನಪಿರಲಿ, ನೀವು ಒಬ್ಬಂಟಿಯಲ್ಲ. ನಾವೂ ಇದರಲ್ಲಿ ನಿಮ್ಮ ಜತೆಗೆ ಪಾಲುದಾರರಿದ್ದೇವೆ. ಎಲ್ಲದಕ್ಕಿಂತ ಬಹುಮುಖ್ಯ ಏನೆಂದರೆ ಭರವಸೆ ಕಳೆದುಕೊಳ್ಳದಿರಿ’ ಎಂದು ಚುಟುಕಾದ ಬರಹದ ಮೂಲಕ ಖಿನ್ನತೆಯನ್ನು ಮಣಿಸೋಣ ಎಂದಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ; ಗೃಹ ಇಲಾಖೆ ವೈಫಲ್ಯ ಪಕ್ಷಕ್ಕೂ ಕಿರಿಕಿರಿ
ಕಳೆೆದ ಹಲವು ವರ್ಷಗಳಿಂದ ಈ ಖಿನ್ನತೆಗೆ ಗುರಿಯಾಗಿ ತುಂಬ ನೊಂದಿದ್ದ ದೀಪಿಕಾ, ಕೊನೆಗೆ ಆ ನರಕದಿಂದ ಹೊರಬಂದಿದ್ದರು. ಅದ್ಯಾವ ಮಟ್ಟಿಗೆ ಅಂದರೆ, ತನಗಾದ ನೋವು ಬೇರೆಯವರಿಗೆ ಆಗಬಾರದೆಂಬ ಕಾರಣಕ್ಕೆ 2015ರಲ್ಲಿ ಮೆಂಟಲ್ ಹೆಲ್ತ್ಗೆ ಸಂಬಂಧಿಸಿದ ‘ಲಿವ್ ಲವ್ ಲಾಫ್’ ಹೆಸರಿನ ಫೌಂಡೇಷನ್ ತೆರೆದಿದ್ದಾರೆ.