ಸಿನಿವಾಣಿ

ದೀಪಿಕಾಗೆ ಯಾವುದರ ಮೇಲೆ ಹೆಚ್ಚು ಪ್ರೀತಿ ಗೊತ್ತೆ?

rameshmysuru

ಬೆಂಗಳೂರು: ಅಡುಗೆ ಮಾಡುವುದರಲ್ಲಿ ತನಗೆ ತುಂಬಾ ಆಸಕ್ತಿ ಎಂದು ದೀಪಿಕಾ ಪಡುಕೋಣೆ ಹಲವು ಬಾರಿ ಹೇಳಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ, ಲಾಕ್​ಡೌನ್ ಸಮಯದಲ್ಲಿ ತಮಗಿಷ್ಟವಾದ ಅಡುಗೆ ಮಾಡುವುದರ ಜತೆಗೆ, ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.

ಸದಾ ಒಂದಿಲ್ಲೊಂದು ಹೊಸರುಚಿ ಪ್ರಯತ್ನಿಸುತ್ತಲೇ ಇರುವ ದೀಪಿಕಾಗೆ ಇಷ್ಟವಾದ ಖಾದ್ಯ ಯಾವುದು? ಇಂಥದ್ದೊಂದು ಪ್ರಶ್ನೆ ಬರುವುದು ಸಹಜ. ಇತ್ತೀಚೆಗೆ ಅಭಿಮಾನಿಯೊಬ್ಬರು, ಅವರಿಗೆ ಇದೇ ಪ್ರಶ್ನೆಯನ್ನು ಕೇಳಿದ್ದರು. ಜೀವನ ಪೂರ್ತಿ, ಖುಷಿಖುಷಿಯಿಂದ ನೀವು ತಿನ್ನುವ ಡಿಶ್ ಯಾವುದು ಎಂಬ ಪ್ರಶ್ನೆಗೆ, ದೀಪಿಕಾ ಕೊಟ್ಟ ಉತ್ತರವೇನು ಗೊತ್ತಾ?

ಅನ್ನ, ರಸಂ ಮತ್ತು ಮಾವಿನಕಾಯಿ ಉಪ್ಪಿನಕಾಯಿ. ಹೌದು, ದೀಪಿಕಾಗೆ ಅನ್ನ, ಸಾರು ಮತ್ತು ಉಪ್ಪಿನಕಾಯಿ ಬಹಳ ಇಷ್ಟವಂತೆ. ದೀಪಿಕಾ ಹೇಳಿಕೇಳಿ ಕನ್ನಡದ ಹುಡುಗಿ. ಅನ್ನ, ಸಾರು ಉಪ್ಪಿನಕಾಯಿ ಕರ್ನಾಟಕದ ಸ್ಪೆಷಲ್. ಹಾಗಾಗಿ ಮುಂಬೈಗೆ ಹೋದರೂ, ಕರ್ನಾಟಕದ ನಂಟನ್ನು ಅವರು ಬಿಟ್ಟಿಲ್ಲ. ದೀಪಿಕಾಗೆ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಸಹ ಬಹಳ ಇಷ್ಟವಂತೆ.