ಸಿನಿವಾಣಿ

ಚೆಫ್​ ಆದ ದೀಪಿಕಾ ... ರಣವೀರ್‌ಗೆ ಅಡುಗೆ ಮಾಡಿ ಬಡಿಸಿದ ಸಪೂರ ಸುಂದರಿ

chetannadiger

ಕರೊನಾದಿಂದ ಲಾಕ್‌ಡೌನ್ ಆಗಿ ಇಡೀ ದೇಶ ಸ್ಥಬ್ಧವಾಗಿದ್ದರೂ, ದೀಪಿಕಾ ಪಡುಕೋಣೆ ಮಾತ್ರ ಸುಮ್ಮನೆ ಕೂತಿಲ್ಲ. ಚಟುವಟಿಕೆಗಳೆಲ್ಲಾ ಬಂದಾಗಿ, ಸೆಲೆಬ್ರಿಟಿಗಳೆಲ್ಲಾ ಹೌಸ್ ಅರೆಸ್ಟ್ ಆಗುತ್ತಿದ್ದಂತೆಯೇ, ದೀಪಿಕಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ, ಮಾಡಿದ ಕೆಲಸಗಳನ್ನೆಲ್ಲಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ದೊಡ್ಡ ಸುದ್ದಿ ಮಾಡುತ್ತಿದ್ದಾರೆ.

ವರ್ಕೌಟ್ ಮಾಡಿದ್ದಾಯಿತು, ಮನೆ ಕ್ಲೀನ್ ಮಾಡಿದ್ದಾಯಿತು, ಎಲ್ಲಾ ಜೋಡಿಸಿಕೊಂಡಿದ್ದಾಯಿತು ... ಈಗ ದೀಪಿಕಾ ಚಿತ್ತ ಅಡುಗೆಯತ್ತ ಸರಿದಿದೆ. ಇತ್ತೀಚೆಗೆ ಚೆಫ್​ ಆದ ದೀಪಿಕಾ, ಗಂಡ ರಣವೀರ್‌ಗೆ ಸ್ಪೆಷಲ್ ಅಡುಗೆ ಮಾಡಿ, ಹೊಟ್ಟೆ ತುಂಬಾ ಬಡಿಸಿದ್ದಾರೆ. ರಣವೀರ್ ಖುಷಿಯಾಗುವುದಕ್ಕೆ ದೀಪಿಕಾ ಏನೆಲ್ಲಾ ಮಾಡಿದ್ದರು ಗೊತ್ತಾ? ಥಾಯ್ ಗ್ರೀನ್ ಕರ್ರಿ, ಅನ್ನ, ವೆಜಿಟೆಬಲ್ ಟಾಮ್ ಯಮ್ ಸೂಪ್, ಥಾಯ್ ಸಲಾಡ್ ಇತ್ಯಾದಿ ಇತ್ಯಾದಿ.

ಇದೆಲ್ಲದರ ಜತೆಗೆ ಅವರು ತಮ್ಮ ಗಂಡನಿಗೆ ಒಂದು ಕೇಕ್ ಸಹ ಮಾಡಿಕೊಟ್ಟಿದ್ದಾರೆ. ಆ ಕೇಕ್‌ನ್ನು ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿದ ಅವರು, ಜತೆಗೆ ಒಂದು ಸ್ಕೂಪ್ ಐಸ್‌ಕ್ರೀಮ್ ಹಾಕಿ ಕೊಟ್ಟಿದ್ದಾರೆ. ಈ ಕೇಕ್ ಪ್ಲಸ್ ಐಸ್‌ಕ್ರೀಮ್ ತಿಂದ ರಣವೀರ್‌ಗೆ ಸ್ವರ್ಗಕ್ಕೆ ಮೂರೇ ಗೇಣು.

ಹೀಗೆ ದೀಪಿಕಾ ಮಾಡಿದ ಅಡುಗೆಯನ್ನು ಈ ರಜೆಯಲ್ಲಿ ತಿಂದು ತಿಂದು, ರಣವೀರ್ ಸಿಕ್ಕಾಪಟ್ಟೆ ಊದಿಕೊಳ್ಳದಿದ್ದರೆ ಅಷ್ಟೇ ಸಾಕು.