ಸಿನಿವಾಣಿ

ರಿಷಬ್​ ಶೆಟ್ಟಿ ಆಸೆ ಈಡೇರಿಸಿದ ದರ್ಶನ್​; ಡ್ರೀಮ್ ಕಾರಲ್ಲಿ ಚಾಲೆಂಜಿಂಗ್​ ಸ್ಟಾರ್ ಜತೆ ಸುತ್ತಾಟ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಬಗೆಬಗೆ ಬ್ರಾಂಡ್​ನ ಕಾರುಗಳನ್ನು ಹೊಂದಿದವರಲ್ಲಿ ದರ್ಶನ್​ ಮೊದಲಿಗರು. ಅವರ ಬಳಿ ವೆರೈಟಿ ವೆರೈಟಿ ಕಾರುಗಳ ಸಂಗ್ರಹಣೆಯೇ ಇದೆ. ಅದರಲ್ಲಿ ಫೋರ್ಡ್​ ಮಸ್ಟಾಂಗ್ ಸಹ ಒಂದು. ಇದೀಗ ಆ ದುಬಾರಿ ಕಾರಿನಲ್ಲಿಯೇ ದರ್ಶನ್​ ಒಂದು ರೌಂಡ್​ ಹೊಡೆದು ಬಂದಿದ್ದಾರೆ. ಒಬ್ಬರೇ ಅಲ್ಲ ರಿಷಬ್​ ಶೆಟ್ಟಿ ಅವರನ್ನೂ ಕರೆದೊಯ್ದಿದ್ದಾರೆ.

ಅಂದಹಾಗೆ, ರಿಷಬ್ ಶೆಟ್ಟಿಗೆ ಫೋರ್ಡ್ ಮಸ್ಟಾಂಗ್​ ಕಾರ್ ಎಂದರೆ ಅಚ್ಚುಮೆಚ್ಚು. ಆ ಕಾರಿನಲ್ಲಿ ಒಂದೇ ಒಂದು ಸುತ್ತಾದರೂ ಹೋಗಬೇಕೆಂಬುದು ಅವರ ಕನಸಾಗಿತ್ತು. ಇದೀಗ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ. ದರ್ಶನ್​ ಅವರ ಫೋರ್ಡ್​ ಮಸ್ಟಾಂಗ್ ಕಾರಿನಲ್ಲಿ ಸಂಜೆ ವೇಳೆಗೆ ಒಟ್ಟಿಗೆ ಡ್ರೈವ್​ಗೆ ಹೋಗಿಬಂದಿದ್ದಾರೆ.

ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಿಷಬ್, ‘ನನ್ನ ಡ್ರೀಮ್‌ ಕಾರು ಫೋರ್ಡ್ ಮಸ್ಟಾಂಗ್. ನಿನ್ನೆ (ಡಿ.3) ಸಂಜೆ ದರ್ಶನ್‌ ಸರ್ ತಮ್ಮ ಮಸ್ಟಾಂಗ್ ಜಿಟಿ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ದರ್ಶನ್‌ ಸರ್. ಒಂದೊಳ್ಳೆಯ ಸಮಯ ಕಳೆದೆ’ ಎಂದು ಬರೆದುಕೊಂಡಿದ್ದಾರೆ.