ಸಿನಿವಾಣಿ

ಕೇರಳದಲ್ಲಿ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಜಾಲಿರೈಡ್

ಗುಂಡ್ಲುಪೇಟೆ: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಜತೆ ಮತ್ತೊಮ್ಮೆ ಕೊಡಗಿಗೆ ಜಾಲಿ ರೈಡ್ ಹೋಗಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ತಮ್ಮ ಸ್ನೇಹಿತರೊಂದಿಗೆ ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದು, ಇದೀಗ ವಾಪಸ್ಸಾಗಿದ್ದಾರೆ. ದರ್ಶನ್, ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ಪನ್ನಗಾಭರಣ ಸೇರಿದಂತೆ 18 ಬೈಕ್​ಗಳಲ್ಲಿ ಕೇರಳದಿಂದ ಮೂಲೆಹೊಳೆ ಚೆಕ್​ಪೋಸ್ಟ್ ಮೂಲಕ ರಸ್ತೆ ಮಾರ್ಗವಾಗಿ ಆಗಮಿಸಿದ ದರ್ಶನ್ ಜತೆ ಫೋಟೋ ತೆಗೆಸಿಕೊಳ್ಳಲು ಚೆಕ್​ಪೋಸ್ಟ್ ನಲ್ಲಿದ್ದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್ ಕೊಟ್ಟು ನಂಜನಗೂಡು ಮಾರ್ಗವಾಗಿ ಟಿ.ನರಸೀಪುರದಲ್ಲಿರುವ ಫಾರಂ ಹೌಸ್​ಗೆ ದರ್ಶನ್ ಮತ್ತು ಸ್ನೇಹಿತರು ವಾಪಸಾಗಿದ್ದಾರೆ.