ಬೆಂಗಳೂರು: ವಿಭಿನ್ನ ಕಥಾಹಂದರ ಹೊಂದಿರುವ "ದಾರಿ ಯಾವುದಯ್ಯ ವೈಕುಂಠಕೆ" ಚಿತ್ರತಂಡ ಸಂತಸದ ಅಲೆಯಲ್ಲಿದೆ. ಒಂದಾದ ಮೇಲೊಂದರಂತೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದೆ. ಈ ಚಿತ್ರವು ಈಗಾಗಲೇ ಹತ್ತಾರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವ, ನಾವ್ಡ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಲರ್ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್, ಬೆಟ್ಟಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವ, 5ನೇ ಇಂಡಿಯನ್ ವರ್ಲ್ಡ್ ಫಿಲ್ಮ್ ಫೆಸ್ಟಿವಲ್, ಇಂಡಿಯನ್ ಇಂಟರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೇರಿ ಹತ್ತಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದೆ.
ಈ ಹಿಂದೆ ಕೃಷ್ಣ ಗಾರ್ಮೆಂಟ್ಸ್ ಚಿತ್ರವನ್ನು ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವರ್ಧನ್, ತಿಥಿ ಖ್ಯಾತಿಯ ಪೂಜಾ, ಬಾಲ ರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್‍ರಾವ್ ವರ್ಕು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ರಾಜೀವ್ ಅವರ ಸಂಕಲನ ಈ ಚಿತ್ರಕ್ಕಿದೆ.
ಪ್ರಶಸ್ತಿ ಪಟ್ಟಿ...
- ಮಹಾರಾಷ್ಟ್ರ "ಪುಣೆ"ಯಲ್ಲಿ ನಡೆದ "ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರಕಥೆಗೆ "ಬೆಸ್ಟ್ ಸ್ಕ್ರೀನ್ ಪ್ಲೇ" ಅವಾರ್ಡ್.
-ಸ್ಪೇನ್" ನಲ್ಲಿ ನಡೆಯುವ BARCELONA INTERNATIONAL FILM FESTIVAL ನಲ್ಲಿ BEST DIRECTOR AWARD ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ "ಅತ್ಯುತ್ತಮ ನಿರ್ದೇಶಕ" ಪ್ರಶಸ್ತಿ
- NAWADA INTERNATIONAL FILM FESTIVAL ನಲ್ಲೂ 1600 ಸಿನಿಮಾಗಳ ಪೈಕಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
- LONDON INDEPENDENT FILM FESTIVAL ನಲ್ಲಿ Best actor ಮತ್ತು Best Director ಪ್ರಶಸ್ತಿ
- ರೇ (ಸತ್ಯಜಿತ್ ರೇ) ಸಿನಿಮೋತ್ಸವದಲ್ಲೂ Best feature film and best Director ಅವಾರ್ಡ್
- Mumbai international film festival ನಲ್ಲಿ best writer ಅವಾರ್ಡ್
- ಮೊದಲನೇ ವರ್ಷದ "KASHI INDIAN INTERNATIONAL FILM FESTIVAL ನಲ್ಲಿ ಅತ್ಯತ್ತಮ "ಚಿತ್ರಕಥೆ ಮತ್ತು ಸಂಭಾಷಣೆ"ಗೆ ಅವಾರ್ಡ್
- ASIAN INTERNTIONL FILM FESTIVAL ನಲ್ಲಿ ಅತ್ಯುತ್ತಮ ನಟನೆಗೆ ವರ್ಧನ್ ರವರಿಗೂ ಪ್ರಶಸ್ತಿ .
- SAND DANCE INTERNATIONAL FILM FESTIVAL ನಲ್ಲೂ BEST DIRECTOR and BEST FEATURE FILM ಅವಾರ್ಡ್ ಬಂದಿದೆ.