ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕರೊನಾ ಮಾರ್ಗಸೂಚಿಯನ್ನು ಪಾಲಿಸಿಲ್ಲ ಎಂಬ ಆರೋಪದ ಮೇಲೆ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ಅಶ್ವತ್ಥಾಮ ಶಿವಣ್ಣ
ಶುಕ್ರವಾರ ಬೆಳಗ್ಗೆಯಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ದರ್ಶನ್ ಇಡೀ ದಿನ ಪ್ರಚಾರ ಮಾಡಿದ್ದರು. ಪ್ರಚಾರದ ವೇಳೆ ಕೋವಿಡ್ ನಿಯಮ ಪಾಲಿಸಿಲ್ಲ ಎಂದು ವಿಪತ್ತು ನಿರ್ವಹಣೆ ಕಾಯ್ದೆಯಡಿ ದೂರು ದಾಖಲಾಗಿದೆ.
ಇದನ್ನೂ ಓದಿ: ಚಿತ್ರನಟ ದರ್ಶನ್ ಓಡೋಡಿ ಬರಲು ಡಿಕೆಶಿ ಹಸು ಅಲ್ಲ!
ಆರ್ಆರ್ ನಗರದಲ್ಲಿ ದರ್ಶನ್ ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಯಾಗುತ್ತಿದ್ದಂತೆ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಪ್ರಚಾರ ಕಣಕ್ಕೆ ಬಂದಿದ್ದರು. ದರ್ಶನ್ ಜತೆಗೆ ನಟಿ ಅಮೂಲ್ಯ ಸಹ ಹಾಜರಾಗಿ ಮತಯಾಚನೆ ಮಾಡಿದ್ದರು. ಈಗ ಮತಯಾಚನೆ ಮಾಡಿದ್ದೇ ದರ್ಶನ್ಗೆ ಮುಳುವಾಗಿದೆ.