ಸಿನಿವಾಣಿ

ಅಬ್ದುಲ್​ ಕಲಾಂ ಆಗಲಿದ್ದಾರೆ ಖ್ಯಾತ ಹಾಸ್ಯನಟ; ಹಾಲಿವುಡ್​ನಲ್ಲಿ ಕೆಲಸ ಮಾಡಿದ ನಿರ್ದೇಶಕನಿಂದ ಬಯೋಪಿಕ್​

ಬಾಲಿವುಡ್​ ರೀತಿಯಲ್ಲಿ ಟಾಲಿವುಡ್​ನಲ್ಲಿಯೂ ಸಾಕಷ್ಟು ಬಯೊಪಿಕ್​ಗಳು ನಿರ್ಮಾಣವಾಗುತ್ತಿವೆ. ಈಗಾಗಲೇ ಒಂದಷ್ಟು ತೆರೆಕಂಡು ಸೂಪರ್​ ಹಿಟ್ ಪಟ್ಟಿ ಸೇರಿಕೊಂಡರೆ ಮತ್ತೆ ಕೆಲವು, ಸೊಲು ಕಂಡಿವೆ. ಇದೀಗ ಟಾಲಿವುಡ್​ನಲ್ಲಿ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಶುರುವಾಗುತ್ತಿದೆ. ಅಬ್ದುಲ್​ ಕಲಾಂ ಅವರ ಜೀವನವನ್ನೇ ಸಿನಿಮಾ ರೂಪದಲ್ಲಿ ತರಲು ಯೋಜನೆಗಳು ಸಿದ್ಧವಾಗುತ್ತಿದ್ದು, ಕಲಾಂ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೂ ಉತ್ತರ ಸಿಕ್ಕಿದೆ.

ಹೌದು, ಸದ್ಯ ಅಬ್ದುಲ್​ ಕಲಾಂ ಅವರ ಪುಣ್ಯ ತಿಥಿ ನಿಮಿತ್ತ ಈ ವಿಚಾರ ಬಹಿರಂಗವಾಗಿದ್ದು, ಟಾಲಿವುಡ್​ನ ಖ್ಯಾತ ಹಾಸ್ಯನಟ ಅಲಿ ಅಬ್ದುಲ್​ ಕಲಾಂ ಪಾತ್ರ ನಿರ್ವಹಿಸಲಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ಈ ಸಿನಿಮಾ ಅವರ ಸಿನಿ ಕರಿಯರ್​ನ 1111ನೇ ಸಿನಿಮಾ ಆಗಿದೆ. ಈಗಾಗಲೇ ಬಹುತೇಕ ಎಲ್ಲವೂ ಅಧಿಕೃತವಾಗಿದ್ದು ಶೀಘ್ರದಲ್ಲಿ ಶೂಟಿಂಗ್​ ವಿಚಾರ ಬಹಿರಂಗವಾಗಲಿದೆ.

ಹಾಲಿವುಡ್​ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ಟಾಲಿವುಡ್​ನ ಜಗದೀಶ್ ದನೇಟಿ ಈ ಬಯೋಪಿಕ್​ನ ನಿರ್ದೇಶನ ಮಾಡಲಿದ್ದಾರೆ. ಪಿಂಕ್​ ಜಾಗ್ವಾರ್ ಎಂಟರ್​ಟೈನ್​ಮೆಂಟ್ ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದು, ಹಾಲಿವುಡ್​ ಮೀಡಿಯಾ ಸಹ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದೆ. (ಏಜೆನ್ಸೀಸ್​)​