ವಿಜಯ್​ಗೆ ತ್ರಿಷಾ, ತ್ರಿಷಾಗೆ ವಿಜಯ್​ ಇಟ್ಟಿರುವ ಅಡ್ಡ ಹೆಸರೇನು? ಕೊನೆಗೂ ಗಿಲ್ಲಿ ಚಿತ್ರದ ರಹಸ್ಯ ಬಯಲು! Actress Trisha  
ಕಾಲಿವುಡ್

ವಿಜಯ್​ಗೆ ತ್ರಿಷಾ, ತ್ರಿಷಾಗೆ ವಿಜಯ್​ ಇಟ್ಟಿರುವ ಅಡ್ಡ ಹೆಸರೇನು? ಕೊನೆಗೂ ಗಿಲ್ಲಿ ಚಿತ್ರದ ರಹಸ್ಯ ಬಯಲು! Actress Trisha

Actress Trisha : ನಟಿ ತ್ರಿಷಾ, ಸೂಪರ್​ ಸ್ಟಾರ್​ ವಿಜಯ್ ಜತೆ ಮೊದಲ ಬಾರಿಗೆ ಗಿಲ್ಲಿ ಚಿತ್ರದಲ್ಲಿ ನಟಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆದ ಬಳಿಕ ಈ ಜೋಡಿ, ತಿರುಪಚ್ಚಿ, ಆದಿ ಮತ್ತು ಕುರುವಿ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾಗಳೂ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದವು.
ಕುರುವಿ ಸಿನಿಮಾ ಬಳಿಕ ಮತ್ತೆ ತ್ರಿಷಾ ಜತೆ ವಿಜಯ್​ ನಟಿಸಲಿಲ್ಲ. ಸುಮಾರು 15 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಯ್ತು. ಲಿಯೋ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ಇಬ್ಬರೂ ವಿದೇಶದಲ್ಲಿ ಶಾಪಿಂಗ್ ಮಾಡುತ್ತಿರುವ ಫೋಟೋಗಳು ಜಾತಾಣದಲ್ಲಿ ವೈರಲ್​ ಆಗಿ, ಸಾಕಷ್ಟು ವದಂತಿಗಳು ಹರಡಲು ಕಾರಣವಾದವು.
ಲಿಯೋ ಚಿತ್ರದ ಯಶಸ್ಸಿನ ನಂತರ, ನಟಿ ತ್ರಿಶಾ ಮತ್ತು ವಿಜಯ್ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡರು. ಗೋವಾದಲ್ಲಿ ನಡೆದ ನಟಿ ಕೀರ್ತಿ ಸುರೇಶ್​ ಅವರ ಮದುವೆಗೆ ವಿಜಯ್​ ಮತ್ತು ತ್ರಿಷಾ ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿದರು. ಇದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಹೀಗಿರುವಾಗ ಕಳೆದ ತಿಂಗಳು ವಿಜಯ್​ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಾ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಇದು ಕಾಗ್ಚಿಚ್ಚಿನಂತೆ ಹರಡಿತು.
ಏಪ್ರಿಲ್​ 20 ರಂದು ಡಿವೋರ್ಸ್​ ಅರ್ಜಿ ವಿಚಾರಣೆ ನಡೆಯಲಿದ್ದು, ಖುದ್ದು ವಿಜಯ್​ ಹಾಜರಿರಬೇಕೆಂದು ಕೋರ್ಟ್​ ಆದೇಶ ಮಾಡಿರುವುದಾಗಿ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿದೆ. ನಟಿಯೊಂದಿಗಿನ ವಿವಾಹೇತರ ಸಂಬಂಧವನ್ನು ಉಲ್ಲೇಖಿಸಿ ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಮಾತಿದೆ. ಕೆಲವರು ಆ ನಟಿ ತ್ರಿಷಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಒಂದು ಸುದ್ದಿ ವಿಜಯ್​ ಅಭಿಮಾನಿಗಳಲ್ಲಿ ಭಾರಿ ಬೇಸರ ಉಂಟುಮಾಡಿದೆ.
ಸದ್ಯ ನಟ ವಿಜಯ್​ ಟಿವಿಕೆ ಪಕ್ಷವನ್ನು ಸ್ಥಾಪಿಸಿ, ಸಂಪೂರ್ಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್​ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಂದ ವಿಜಯ್​ ಅವರ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಸದ್ಯ ವಿಜಯ್​ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ರಾಜ್ಯದ ಸಿಎಂ ಗಾದಿ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ತ್ರಿಷಾ, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆ.
ಇದೀಗ ತ್ರಿಷಾ ಅವರ ಹಳೆಯ ಸಂದರ್ಶನವೊಂದರ ತುಣುಕು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಜಯ್ ಅವರಿಗೆ ತಾವು ಇಟ್ಟಿರುವ ಅಡ್ಡಹೆಸರಿನ ಬಗ್ಗೆ ತ್ರಿಷಾ ಈ ಹಿಂದಿನ ಸಂದರ್ಶನದಲ್ಲಿ ಮಾತನಾಡಿದ್ದು, ಈಗ ವೈರಲ್​ ಆಗುತ್ತಿದೆ. 'ಗಿಲ್ಲಿ' ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ವಿಜಯ್ ಅವರು ಚೀತಾ ಜಾಕೆಟ್ ಧರಿಸಿದ್ದರಿಂದ ನಾನು ಅವರನ್ನು ಚೀತಾ ಎಂದು ಕರೆಯುತ್ತಿದ್ದೆ ಎಂದು ತ್ರಿಷಾ ಹೇಳಿದ್ದಾರೆ.
ಅದೇ ರೀತಿ, ವಿಜಯ್ ಕೂಡ ತ್ರಿಷಾರನ್ನು ಅವರ ಪೂರ್ಣ ಹೆಸರಿನ ಬದಲು ತ್ರಿಶ್ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರಂತೆ. ಚಿತ್ರ ಯಶಸ್ವಿಯಾದರೆ, "ಒಳ್ಳೆಯ ಕೆಲಸ ತ್ರಿಶ್" ಎಂದು ಸಂದೇಶ ಕಳುಹಿಸುತ್ತಿದ್ದರು ಎಂದು ತ್ರಿಷಾ ಅದೇ ಸಂದರ್ಶನದಲ್ಲಿ ಹೇಳಿದ್ದು, ಇದೀಗ ಅದರ ವಿಡಿಯೋ ತುಣುಕು ಜಾಲತಾಣದಲ್ಲಿ ಓಡಾಡುತ್ತಿದೆ, (ಏಜೆನ್ಸೀಸ್​).