ನನ್ನ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸೋ ಅಧಿಕಾರ ಇರೋದು ಈತನಿಗೆ ಮಾತ್ರ... ಕೊನೆಗೂ ಮೌನ ಮುರಿದ ತ್ರಿಷಾ! Trisha Krishnan 
ಕಾಲಿವುಡ್

ನನ್ನ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸೋ ಅಧಿಕಾರ ಇರೋದು ಈತನಿಗೆ ಮಾತ್ರ... ಕೊನೆಗೂ ಮೌನ ಮುರಿದ ತ್ರಿಷಾ! Trisha Krishnan

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ನಟಿ ತ್ರಿಷಾ
  • ತಮಿಳುನಾಡಿನ ನೂತನ ಸಿಎಂ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದೇ ಇದಕ್ಕೆ ಕಾರಣ
  • ತ್ರಿಷಾ ಜೊತೆಗೆ ವಿಜಯ್​ ಅವರಿಗೆ ಅಕ್ರಮ ಸಂಬಂಧ ಇದೆ ಎಂಬ ಆರೋಪವನ್ನು ಪತ್ನಿ ಸಂಗೀತಾ ಹೊರಿಸಿದ್ದಾರೆ
Trisha Krishnan : ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ (Trisha Krishnan) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ನಟಿ ತ್ರಿಷಾ ಜೊತೆಗಿನ ಅಕ್ರಮ ಸಂಬಂಧದ ಆರೋಪ ಹೊರಿಸಿ, ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹಲವಾರು ದಿನಗಳಿಂದ ಹರಿದಾಡುತ್ತಿದೆ. ಸದ್ಯ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಇದರ ನಡುವೆ ತ್ರಿಷಾ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದಾರೆ.
ವಿಜಯ್ ಮತ್ತು ಸಂಗೀತಾ ದಂಪತಿಯ 25 ವರ್ಷಗಳ ದಾಂಪತ್ಯ ಮುರಿದುಬೀಳಲು ನಟಿ ತ್ರಿಷಾ ಅವರೇ ನೇರ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ನಟ ವಿಜಯ್​ ಜೊತೆ ತ್ರಿಷಾ ಆಗಾಗ ಕಾಣಿಸಿಕೊಳ್ಳುತ್ತಿರುವುದು ಕೂಡ ಚರ್ಚೆಗೆ ನಾಂದಿಯಾಡಿದೆ. ಸದ್ಯ ತ್ರಿಷಾ ಅವರು ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ಸಾಲು ಸಾಲು ಗಾಸಿಪ್‌ಗಳ ನಡುವೆಯೇ, ನಟಿ ತ್ರಿಷಾ ಕೃಷ್ಣನ್ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿ ಈಗ ಭಾರಿ ವೈರಲ್ ಆಗುತ್ತಿದೆ. ತಮ್ಮ ಮುದ್ದಿನ ನಾಯಿ ಹಾಸಿಗೆಯ ಮೇಲೆ ಶಾಂತವಾಗಿ ಮಲಗಿರುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಅದಕ್ಕೆ "ನನ್ನ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ನಾನು ಅನುಮತಿಸುವ ಏಕೈಕ ಮೂಗು (Nose) ಎಂದರೆ ಇದು ಮಾತ್ರ" ಎಂಬ ಮಾರ್ಮಿಕ ಅಡಿಬರಹವನ್ನು ಬರೆದುಕೊಂಡಿದ್ದಾರೆ. ಅಂದರೆ, ಅವರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸುವ ಅಧಿಕಾರ ಇರೋದು ಈ ನಾಯಿಗೆ ಮಾತ್ರ ಎಂಬ ಅರ್ಥವನ್ನು ತ್ರಿಷಾ ಅವರ ಪೋಸ್ಟ್​ ಹೇಳುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಾ, ಮೂಗು ತೂರಿಸುತ್ತಿರುವ ಟ್ರೋಲರ್‌ಗಳು ಹಾಗೂ ಗಾಸಿಪ್ ಪ್ರಿಯರಿಗೆ ನಟಿ ತ್ರಿಷಾ ತಮ್ಮ ಸಾಕುಪ್ರಾಣಿಯ ವಿಡಿಯೋ ಮೂಲಕವೇ ಪರೋಕ್ಷವಾಗಿ ಖಡಕ್ ಉತ್ತರ ನೀಡಿದ್ದಾರೆ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಅಲ್ಲದೆ, ತ್ರಿಷಾ ಅವರ ಪೋಸ್ಟ್ ಅನ್ನು ಶೇರ್​ ಮಾಡುತ್ತಾ ಬೆಂಬಲಿಸುತ್ತಿದ್ದಾರೆ.
ಅಂದಹಾಗೆ, ತಮಿಳು ಚಿತ್ರರಂಗದಲ್ಲಿ ನಟ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರ ಜೋಡಿ ಕಳೆದ ಎರಡುವರೆ ದಶಕಗಳಿಂದ ಅತ್ಯಂತ ಜನಪ್ರಿಯ ಜೋಡಿಯಾಗಿ ಹೊರಹೊಮ್ಮಿದೆ. ಇವರಿಬ್ಬರ ಯಶಸ್ವಿ ಕಾಂಬಿನೇಷನ್ ಆರಂಭವಾಗಿದ್ದು 2004ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ 'ಗಿಲ್ಲಿ' (Ghilli) ಮೂಲಕ. ಆ ಬಳಿಕ ತೆರೆಕಂಡ 'ತಿರುಪಾಚಿ', 'ಆದಿ', 'ಕುರುವಿ' ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ 'ಲಿಯೋ' ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಜೋಡಿ ಜೊತೆಯಾಗಿ ನಟಿಸುವ ಮೂಲಕ ಪ್ರೇಕ್ಷಕರ ಸಾರ್ವಕಾಲಿಕ ನೆಚ್ಚಿನ ಆನ್‌ಸ್ಕ್ರೀನ್ ಜೋಡಿಯಾಗಿ ಅಭಿಮಾನಿಗಳ ಹೃದಯ ಗೆದ್ದಿದೆ, (ಏಜೆನ್ಸೀಸ್​).