ನಟ ರವಿ ಮೋಹನ್ ಮನೆಯಲ್ಲಿ 10 ಲಕ್ಷ ರೂ. ಮೌಲ್ಯದ ನೆಕ್ಲೆಸ್ ಮತ್ತು 40 ಸಾವಿರ ರೂ. ನಗದು ಕಳ್ಳತನ 
ಕಾಲಿವುಡ್

ವಿಚ್ಛೇದನ ವಿವಾದದ ಬೆನ್ನಲ್ಲೇ ರವಿ ಮೋಹನ್ ಮನೆಯಲ್ಲಿ ಕಳ್ಳತನ! 10 ಲಕ್ಷದ ನೆಕ್ಲೆಸ್​, 40 ಸಾವಿರ ಕ್ಯಾಶ್​ ಕದ್ದ ಕೆಲಸದಾಕೆ? ಪೊಲೀಸರಿಂದ ಮುಂದುವರಿದ ವಿಚಾರಣೆ! Ravi Mohan House Theft

ಪ್ರಮುಖ ಮುಖ್ಯಾಂಶಗಳು

  • ನಟ ರವಿ ಮೋಹನ್ ಮನೆಯಲ್ಲಿ 10 ಲಕ್ಷ ರೂ. ಮೌಲ್ಯದ ನೆಕ್ಲೆಸ್ ಮತ್ತು 40 ಸಾವಿರ ರೂ. ನಗದು ಕಳ್ಳತನ
  • ಕೆಲಸದಾಕೆ ವಿರುದ್ಧ ದೂರು ದಾಖಲು
  • ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್​ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾ ಬಗ್ಗೆ ಇಂದಲ್ಲ, ಬದಲಾಗಿ ತಮ್ಮ ಮನೆಯಲ್ಲಿ ನಡೆದಿರುವ ಕಳ್ಳತನ (Ravi Mohan House Theft) ದಿಂದ ಮತ್ತೆ ಮುನ್ನಲೆಗೆ ಬಂದಿದ್ದಾರೆ.
ಮಾಹಿತಿ ಪ್ರಕಾರ, ಸೋಮವಾರ (ಜೂ. 22) ಮೋಹನ್​ ರವಿ ಮನೆಗೆ ಕೆಲಸಕ್ಕೆ ಬರುವವಳು ಸಂಜೆ ಆದರೂ ತನ್ನ ಮನೆಗೆ ಮರಳಿಲ್ಲ. ಇದರಿಂದ ಗಾಬರಿಯಾದ ಆಕೆ ಮನೆಯವರು ಪೊಲೀಸರಲ್ಲಿ ಕಣ್ಮರೆಯಾದ ದೂರನ್ನು ದಾಖಲಿಸಿದ್ದಾರೆ.
ನಂತರ ಈ ಪಕ್ರರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ನಟ ರವಿ ಮೋಹನ್​ ಮನೆಯನ್ನು ಪ್ರವೇಶಿಸಿದಾಗ, ಕೆಲಸದಾಕೆ ಹಾಗೂ ಆಕೆಗೆ ಜೊತೆಗೆ ಇನ್ನೊಬ್ಬ ಹೆಂಗಸು ಮತ್ತು ಒಬ್ಬ ಯುವಕನನ್ನು ರವಿ ಮೋಹನ್​ ಮನೆಯವರು ಬಂಧಿಸಿಟ್ಟು ಕೊಂಡಿರುವುದು ತಿಳಿದುಬಂದಿದೆ.

ಕೆಲಸದಾಕೆ ಮೇಲೆ ಕಳ್ಳತನದ ಆರೋಪ!

ನಮ್ಮ ಮನೆಯಲ್ಲಿದ್ದ ಹತ್ತು ಲಕ್ಷ ಮೌಲ್ಯದ ನೆಕ್ಲೆಸ್​ ಮತ್ತು 40 ಸಾವಿರ ರೂಪಾಯಿಯನ್ನು ಇಕೆ ಕದ್ದಿದ್ದಾಳೆ ಅದನ್ನು ವಿಚಾರಣೆ ಮಾಡಲು ಇಕೆಯನ್ನು ಬಂಧಿಸಿದ್ದೆವೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ಕುಪಿತರಾದ ಪೊಲೀಸರು ನೀವು ಹೀಗೆ ವೈಯಕ್ತಿಕವಾಗಿ ವಿಚಾರಣೆ, ಬಂಧನ ಮಾಡುವ ಅಧಿಕಾರ ನಿಮಗಿಲ್ಲ. ಮೊದಲು ಪೊಲೀಸರಲ್ಲಿ ದೂರನ್ನು ದಾಖಲಿಸಿ ಎಂದಿದ್ದಾರೆ. ನಂತರ ರವಿ ಮೋಹನ್​ ಕುಟುಂಬದವರು ಕಳ್ಳತನದ ದೂರನ್ನು ದಾಖಲಿಸಿದ್ದಾರೆ.
ಈಗ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪೊಲೀಸರು ರವಿ ಮೋಹನ್​ ಮನೆಗೆ ತೆರಳಿದ್ದಾಗ ನಟ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ವೈವಾಹಿಕ ಜೀವನದಿಂದ ಸುದ್ದಿಯಲ್ಲಿದ್ದ ನಟ!

ನಟ ರವಿ ಮೋಹನ್​ ಸದ್ಯ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ರವಿ ಮೋಹನ್​ ತಮ್ಮ ಹೆಂಡತಿ ಆರ್ತಿ ರವಿಗೆ ವಿಚ್ಛೇದನ ನೀಡುವ ಮೂಲಕ ಸುದ್ದಿಯಲ್ಲಿದ್ದರು. 2009 ರಲ್ಲಿ ಮದುವೆಯಾಗಿದ್ದ ಇವರಿಗೆ ಆರವ್​ ಮತ್ತು ಅಯಾನ್​ ಎಂಬ ಇಬ್ಬರು ಮಕ್ಕಳಿದ್ದಾರೆ. 2025 ರಲ್ಲಿ ಗಾಯಕಿ ಕೆನೀಶಾ ಫ್ರಾನ್ಸಿಸ್ (Keneeshaa Francis) ಳ ಪರಿಚಯದ ನಂತರ ರವಿ ಮೋಹನ್​ ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯ ಎಸೆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು, (ಏಜನ್ಸೀಸ್​).