ದೇವರಕೊಂಡ ಫೌಂಡೇಶನ್ ಮೂಲಕ ತೆಲಂಗಾಣದ ತುಮ್ಮನ್‌ಪೇಟ್ ಶಾಲೆಯ 180 ಮಕ್ಕಳಿಗೆ ವಿದ್ಯಾರ್ಥಿವೇತನ 
ಕಾಲಿವುಡ್

ಸಮಾಜಮುಖಿ ಕಾರ್ಯದತ್ತ ರಶ್ಮಿಕಾ-ವಿಜಯ್: 180 ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಹಂಚಿದ ನವಜೋಡಿ! Deverakonda Foundation

ಪ್ರಮುಖ ಮುಖ್ಯಾಂಶಗಳು

  • ಸಮಾಜಮುಖಿ ಕಾರ್ಯಕ್ಕೆ ಮುಂದಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ!
  • ದೇವರಕೊಂಡ ಫೌಂಡೇಶನ್ ಮೂಲಕ ತೆಲಂಗಾಣದ ತುಮ್ಮನ್‌ಪೇಟ್ ಶಾಲೆಯ 180 ಮಕ್ಕಳಿಗೆ ವಿದ್ಯಾರ್ಥಿವೇತನ
  • ಮದುವೆ ಬಳಿಕ 'ರಣಬಲಿ' ಸಿನಿಮಾ ಮೂಲಕ ಮತ್ತೆ ಜೊತೆಯಾಗಲಿರುವ ಗೀತಾ ಗೋವಿಂದಂ ಜೋಡಿ
ತೆಲಂಗಾಣ: ರೌಡಿ ಸ್ಟಾರ್​ ಎಂದೇ ಖ್ಯಾತನಾಮನಾಗಿರುವ ನಟ ವಿಜಯ್​ ದೇವರಕೊಂಡ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದ್ದಿ ಎಲ್ಲರಿಗೂ ತಿಳಿದೆಯಿದೆ.
ಈದೀಗ ಈ ನವ ದಂಪತಿಗಳು ದೇವರಕೊಂಡ ಫೌಂಡೇಶನ್ ​(Deverakonda Foundation) ಮೂಲಕ ತೆಲಂಗಾಣದ ತುಮ್ಮನ್‌ಪೇಟ್​ ಶಾಲೆಯ 180 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಸಮಾಜಮುಖಿಗಳಾಗಿ ಗುರುತಿಸಿಕೊಂಡಿದ್ದಾರೆ.

ದೇವರಕೊಂಡ ಫೌಂಡೇಶನ್​ ಮೂಲಕ ವಿತರಣೆ

ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿರುವ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ವಿಜಯ್​ ದೇವರಕೊಂಡ, ಇಂದು (ಭಾನುವಾರ, ಜೂ. 14) ನನ್ನ ತಂದೆಯ ಊರಾದ ತುಮ್ಮನ್‌ಪೇಟ್​ ಶಾಲೆಯ 9 ಮತ್ತು 10 ನೇ ತರಗತಿಯ 180 ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೆವೆ. ಕಷ್ಟಪಟ್ಟು ಓದುತ್ತಿರುವ ಈ ಮಕ್ಕಳಿಗೆ ಇದು ಸಹಾಯಕವಾಗಲಿ ಎಂದು ನಾನು ನನ್ನ ಪತ್ನಿ ರಶ್ಮಿಕಾ ಆಶಿಸುತ್ತೆವೆಂದು ಬರೆದುಕೊಂಡಿದ್ದಾರೆ.
ಏನೋ ಒಳ್ಳೆಯದನ್ನು ಪ್ರಾರಂಭಿಸಿದ್ದೆವೆ!
ಈ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ, ನಾವು ದೇವರಕೊಂಡ ಫೌಂಡೇಶನ್​ ಮೂಲಕ ಏನೋ ಒಂದು ಒಳ್ಳೆಯ ಕೆಲಸಕ್ಕೆ ಚಾನಲೆ ನೀಡಿದ್ದೆವೆ. ಈ ಕೆಲಸಕ್ಕೆ ನಮ್ಮ ಮಾವನವರ ಊರಾದ ಅಚ್ಚಂಪೇಟ್​ ಮತ್ತು ತುಮ್ಮನ್‌ಪೇಟ್​ನ್ನು ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದೆವೆ. ನಾನು ವಿದ್ಯಾರ್ಥಿ ವೇತನ ಸ್ವೀಕರಿಸಿದ ಎಲ್ಲಾ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಅಭಿನಂದನೆ ಸಲ್ಲಿಸುತ್ತೆನೆಂದು ಹೇಳಿದ್ದಾರೆ.
ಮತ್ತೆ ಪರದೆ ಮೇಲೆ ದಂಪತಿ
2018 ರಲ್ಲಿ ತೆರೆಕಂಡಿದ್ದ ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್​ ಮತ್ತು ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ನಂತರ 2019 ರಲ್ಲಿ ಡಿಯರ್​ ಕಾರ್ಮೆಡ್​ನಲ್ಲಿ ಈ ಜೋಡಿ ಮತ್ತೆ ತೆರೆ ಮೇಲೆ ಮಿಂಚಿದ್ದರು.
ಆಮೇಲೆ ಫೆಬ್ರವರಿ 26, 2026 ರಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಈ ಜೋಡಿ ರಣಬಲಿ ಎಂಬ ಸಿನಿಮಾ ಮೂಲಕ ಮದುವೆ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳು ಸಜ್ಜಾಗಿದ್ದಾರೆ, (ಏಜನ್ಸೀಸ್).