ತ್ರಿಷಾಗೆ ಗಂಡಸರಿಗಿಂತ ಹೆಂಗಸರ ಮೇಲೆಯೇ ಆಸೆ ಜಾಸ್ತಿ...ವಿಜಯ್​ ಡಿವೋರ್ಸ್​ ಕೇಸ್​ ಬೆನ್ನಲ್ಲೇ ಗಂಭೀರ ಆರೋಪ! Actress Trisha  
ಕಾಲಿವುಡ್

ತ್ರಿಷಾಗೆ ಗಂಡಸರಿಗಿಂತ ಹೆಂಗಸರ ಮೇಲೆಯೇ ಆಸೆ ಜಾಸ್ತಿ...ವಿಜಯ್​ ಡಿವೋರ್ಸ್​ ಕೇಸ್​ ಬೆನ್ನಲ್ಲೇ ಗಂಭೀರ ಆರೋಪ! Actress Trisha

ಪ್ರಮುಖ ಮುಖ್ಯಾಂಶಗಳು

  • ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು
  • ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಜಯ್​ ಪತ್ನಿ ಸಂಗೀತಾ
  • ವಿಜಯ್​ ಡಿವೋರ್ಸ್​ ಸುದ್ದಿಯ ಬೆನ್ನಲ್ಲೇ ನಟಿ ತ್ರಿಷಾ ಹೆಸರು ಸಹ ಭಾರಿ ಚರ್ಚೆಯಾಗುತ್ತಿದೆ
  • ತ್ರಿಷಾ ವಿರುದ್ಧ ಗಂಭೀರ ಆರೋಪ ಮಾಡಿದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ
Actress Trisha : ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್, ಇದೀಗ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದು, ತನ್ನ ಗಂಭೀರ ಆರೋಪಗಳಿಂದ ಮತ್ತೆ ಭಾರಿ ಸುದ್ದಿಯಾಗುತ್ತಿದ್ದಾರೆ.
ತಾಜಾ ಸಂಗತಿ ತಿಳಿಯುವ ಮುನ್ನ ಸುಚಿತ್ರಾಳ ಹಳೆಯ ಪ್ರಕರಣದ ಬಗ್ಗೆ ಮೊದಲು ತಿಳಿದುಕೊಳ್ಳೋಣ. 2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು. ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.

ತಾಜಾ ಸಂಗತಿ ಏನು?

ತಾಜಾ ಸಂಗತಿ ಏನೆಂದರೆ, ಸುಚಿತ್ರಾ ಅವರು ಕಾಲಿವುಡ್​ ಬ್ಯೂಟಿ ತ್ರಿಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಂದಹಾಗೆ, ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್ ಹಾಗೂ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಸೃಷ್ಟಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸಂಗೀತಾ ಅವರು ಚೆನ್ನೈನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಏಪ್ರಿಲ್​ 20 ರಂದು ಡಿವೋರ್ಸ್​ ಅರ್ಜಿ ವಿಚಾರಣೆ ನಡೆಯಲಿದೆ ಅಂತ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿದೆ. ಡಿವೋರ್ಸ್​ ಅರ್ಜಿಯಲ್ಲಿ ನಟಿಯೊಂದಿಗಿನ ವಿವಾಹೇತರ ಸಂಬಂಧವನ್ನು ಸಂಗೀತಾ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ನಟಿ ತ್ರಿಷಾ ಹೆಸರು ಚರ್ಚೆಯಾಗುತ್ತಿದೆ. ವಿಜಯ್​ ಮತ್ತು ತ್ರಿಷಾ ನಡುವೆ ಸಂಬಂಧವಿದೆ ಅನ್ನೋ ಮಾತು ಜೋರಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸುಚಿತ್ರಾ ಅವರು ತ್ರಿಷಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ತ್ರಿಷಾ, ಓರ್ವ ಉಭಯಲಿಂಗಿ ( ಮಹಿಳೆಯರು ಮತ್ತು ಪುರುಷರು ಇಬ್ಬರ ಮೇಲೂ ಲೈಂಗಿಕ ಆಕರ್ಷಣೆ ಹೊಂದುವುದು). ಮಹಿಳೆಯರು ಮತ್ತು ಪುರುಷರ ಮೇಲೆ ಸಮಾನವಾಗಿ ವ್ಯಾಮೋಹ ಹೊಂದಿದ್ದಾರೆ. ಆದರೆ, ಮಹಿಳೆಯರ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದು ಸುಚಿತ್ರಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತ್ರಿಷಾ ಅವರಿಗೆ ಯಾವಾಗಲೂ ಯಾವುದಾದರೊಂದು ಸಂಬಂಧದಲ್ಲಿರುವ ಗೀಳನ್ನು ಹೊಂದಿದ್ದಾರೆ ಅಂತಾನೂ ಆರೋಪಿಸಿದ್ದಾರೆ.
ಇನ್ನು ವಿಜಯ್ ಅವರು ತ್ರಿಷಾಳ ತೋಳುಗಳಲ್ಲಿ ಸಿಲುಕಿದ್ದಾರೆ. ಹೇಳಬೇಕೆಂದರೆ ಆತ ಒಂದು ಬೊಂಬೆಯಂತೆ. ಆಕೆ ಕುಳಿತುಕೊಳ್ಳಲು ಹೇಳಿದರೆ ಕುಳಿತುಕೊಳ್ಳುತ್ತಾನೆ, ನಿಲ್ಲು ಎಂದರೆ ನಿಲ್ಲುತ್ತಾನೆ. ಒಟ್ಟಾರೆ ಆಕೆ ಆಡಿಸಿದಂತೆ ವಿಜಯ್​ ಆಡುತ್ತಾನೆ ಎಂದು ಸುಚಿತ್ರಾ ಹೇಳಿದ್ದಾಳೆ. ಸದ್ಯ ಕಾಲಿವುಡ್​ನಲ್ಲಿ ಸುಚಿತ್ರಾ ನೀಡಿರುವ ಹೇಳಿಕೆಗಳು ಭಾರಿ ಸಂಚಲನವನ್ನು ಮೂಡಿಸಿದೆ.
ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. ಯಾವಾಗ ವಿಜಯ್​ ಅವರು ರಾಜಕೀಯಕ್ಕೆ ಇಳಿದರೋ ಈ ಚರ್ಚೆ ಜೋರಾಗ ತೊಡಗಿದೆ. ತಮಿಳುನಾಡಿನ ಕೆಲ ರಾಜಕೀಯ ನಾಯಕರು ಬಹಿರಂಗವಾಗಿಯೇ ವಿಜಯ್​ ಮತ್ತು ತ್ರಿಷಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈ ಹಿಂದೆ ತ್ರಿಷಾ, ವಿಜಯ್​ ಅವರ ಹುಟ್ಟುಹಬ್ಬದ ಸಮಯದಲ್ಲಿ 'ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್' ಎಂದು ಶೀರ್ಷಿಕೆ ನೀಡಿ, ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತಿತ್ತು. ಆಗಲೂ ವಿಜಯ್​-ತ್ರಿಷಾ ಸಂಬಂಧ ಚರ್ಚೆಯಾಗಿತ್ತು. ಅಲ್ಲದೆ, ಈ ಹಿಂದೆ, ಕೀರ್ತಿ ಸುರೇಶ್ ಅವರ ಮದುವೆಗೆ ವಿಜಯ್​ ಮತ್ತು ತ್ರಿಷಾ ಪ್ರೈವೆಟ್​ ಜೆಟ್​ನಲ್ಲಿ ತೆರಳಿದ್ದರು. ಈ ವೇಳೆಯೂ ಭಾರಿ ಸುದ್ದಿಯಾಗಿತ್ತು. ಇದೀಗ ಡಿವೋರ್ಸ್​ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮತ್ತೊಮ್ಮೆ ತ್ರಿಷಾ ಹೆಸರು ಜೋರಾಗಿ ಸದ್ದು ಮಾಡುತ್ತಿದೆ.

ಡಿವೋರ್ಸ್​ಗೆ ಅರ್ಜಿ ಸಲ್ಲಿಕೆ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪತ್ನಿ ಸಂಗೀತಾ ಡಿವೋರ್ಟ್​ ಅರ್ಜಿ ಸಲ್ಲಿಸಿದ್ದಾರೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡುತ್ತಿವೆ. ವಿಜಯ್​ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಫೆಬ್ರವರಿ 24 ರಂದು ಸಲ್ಲಿಸಲಾದ ಡಿವೋರ್ಸ್​ ಅರ್ಜಿಯು ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ, (ಏಜೆನ್ಸೀಸ್​).