First Lip Lock Scene : ಸಿನಿಮಾ ರಂಗದಲ್ಲಿ ಇಂದು ಲಿಪ್ಲಾಕ್ ಸೀನ್ಗಳು ಸಾಮಾನ್ಯವಾಗಿಬಿಟ್ಟಿವೆ. ಪ್ರೇಮಕತೆ ಆಧಾರಿತ ಸಿನಿಮಾಗಳಲ್ಲಂತೂ ಈ ಚುಂಬನದ ದೃಶ್ಯ ಇರಲೇಬೇಕು. ಈ ಹಿಂದೆ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಇಂತಹ ದೃಶ್ಯಗಳು ಕಂಡುಬರುತ್ತಿದ್ದವು. ಆದರೆ, ದಿನಗಳು ಕಳೆದ ಸಿನಿಮಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ ರೊಮ್ಯಾಂಟಿಕ್ ದೃಶ್ಯಗಳು ಎಲ್ಲ ಸಿನಿ ರಂಗವನ್ನು ಆವರಿಸಿಕೊಂಡಿತು.
ಭಾರತದಲ್ಲಿ ರೊಮ್ಯಾಂಟಿಕ್ ಸೀನ್ಗಳಿಂದರೆ ಸಾಕು ಮೊದಲು ನೆನಪಾಗುವುದು ಬಾಲಿವುಡ್ ಅಥವಾ ಹಿಂದಿ ಚಿತ್ರರಂಗ. ಆದರೆ, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನಲ್ಲೂ ಲಿಪ್ಲಾಕ್ ದೃಶ್ಯಗಳು ಕಾಮಾನ್ ಆಗಿವೆ. ಅಷ್ಟಕ್ಕೂ ಈ ಲಿಪ್ಲಾಕ್ ಸೀನ್ ಭಾರತದಲ್ಲಿ ಯಾವಾಗ ಆರಂಭವಾಯಿತು? ಯಾವ ಸಿನಿಮಾ? ಯಾವ ನಟಿ ಮೊದಲ ಲಿಪ್ಲಾಕ್ ಸೀನ್ನಲ್ಲಿ ನಟಿಸಿದರು ಎಂಬ ಪ್ರಶ್ನೆಗೆ ಬಹುತೇಕರಿಗೆ ಉತ್ತರವೇ ತಿಳಿದಿಲ್ಲ. ಆದರೆ, ನಾವಿಂದು ಈ ಕುರಿತು ತಿಳಿಸುತ್ತೇವೆ.
ಭಾರತದ ಸಿನಿಮಾ ರಂಗದಲ್ಲಿ ಮೊದಲ ಚುಂಬನ ದೃಶ್ಯವನ್ನು ಬಾಲಿವುಡ್‌ನಲ್ಲಿ ಚಿತ್ರೀಕರಿಸಲಾಯಿತು. ಪರದೆಯ ಮೇಲೆ ಕಂಪ್ಲೀಟ್ ಲಿಪ್ಲಾಕ್ ದೃಶ್ಯದಲ್ಲಿ ನಟಿಸಿದ ಮೊದಲ ನಟಿ ದೇವಿಕಾ ರಾಣಿ. ಈ ದೃಶ್ಯವನ್ನು 92 ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿದೆ.
1933ರಲ್ಲಿ ಬಿಡುಗಡೆಯಾದ ಕರ್ಮ ಚಿತ್ರದಲ್ಲಿ ಮೊದಲ ಲಿಪ್ಲಾಕ್ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇದರಲ್ಲಿ ನಟಿ ದೇವಿಕಾ ರಾಣಿ ಅವರು ನಟ ಹಾಗೂ ನಿರ್ದೇಶಕ ಹಿಮಾಂಶು ರಾಯ್ ಎದುರು ನಟಿಸಿದ್ದರು. ಆ ಸಮಯದಲ್ಲಿ ಇಬ್ಬರೂ ಮದುವೆಯಾಗಿದ್ದರು. ಅಲ್ಲದೆ, ಈ ಸಿನಿಮಾ ಸಹ ನಿರ್ಮಾಪಕರು ಕೂಡ ಆಗಿದ್ದರು. ಈ ಲಿಪ್ಲಾಕ್ ದೃಶ್ಯವು ಸುಮಾರು ನಾಲ್ಕು ನಿಮಿಷಗಳ ಕಾಲ ನಡೆಯಿತು. ಆದಾಗ್ಯೂ, ಹಲವಾರು ವಿವಾದಗಳಿಂದಾಗಿ ಚಿತ್ರವನ್ನು ನಿಷೇಧಿಸಲಾಯಿತು. ಇದಾದ ನಂತರ ಅನೇಕ ಸಿನಿಮಾಗಳಲ್ಲಿ ಇಂಟಿಮೇಟ್ ದೃಶ್ಯಗಳು ಕ್ರಮೇಣ ಕಾಮನ್ ಆದವು.
ಅಂದಹಾಗೆ ಈ ಕರ್ಮ ಸಿನಿಮಾವನ್ನು ಬಾಂಬೆ ಟಾಕೀಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಆದರೆ, ವಿವಾದಗಳಿಂದ ಬಿಡುಗಡೆಯಾಗಲಿಲ್ಲ. 1929ರಲ್ಲೇ ಹಿಮಾಂಶು ರಾಯ್ ಅವರು ದೇವಿಕಾ ರಾಣಿ ಅವರನ್ನು ಮದುವೆಯಾದರು. ಇದಕ್ಕೂ ಮುನ್ನ ಅಂದರೆ 1924ರಲ್ಲಿ ಮೇರಿ ಹೈನ್ಲಿನ್ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಎರಡೇ ವರ್ಷದಲ್ಲಿ ಅವರಿಂದ ದೂರವಾಗಿ 1929ರಲ್ಲಿ ದೇವಿಕಾ ರಾಣಿಯನ್ನು ವರಿಸಿದರು. 1940ರಲ್ಲಿ ಹಿಮಾಂಶು ರಾಯ್ ಇಹಲೋಕ ತ್ಯಜಿಸಿದರು. (ಏಜೆನ್ಸೀಸ್)