ಸಿನಿವಾಣಿ

ಅಮೆರಿಕಾದಲ್ಲಿ 'ಚೌಕಾಬಾರ'; ಮಾರ್ಚ್​ 24ರಿಂದ ಪ್ರದರ್ಶನ

ಬೆಂಗಳೂರು: ವಿಕ್ರಂ ಸೂರಿ ನಿರ್ದೇಶನದ 'ಚೌಕಾಬಾರ' ಚಿತ್ರವು ಎರಡು ವಾರಗಳ ಹಿಂದಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು. ಈಗ ಚಿತ್ರ ಅಮೆರಿಕಾದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

'ಚೌಕಾಬಾರ' ಚಿತ್ರವು ಅಮೆರಿಕಾದಲ್ಲಿ ಶುಕ್ರವಾರ (ಮಾರ್ಚ್ 24) ಬಿಡುಗಡೆಯಾಗುತ್ತಿದೆ. ಕ್ಯಾಲಿಫೋರ್ನಿಯ, ಫ್ಲೋರಿಡಾ, ಟೆಕ್ಸಸ್, ವಾಷಿಂಗ್ಟನ್ ಮುಂತಾದ ಕಡೆ 11 ಪ್ರದರ್ಶನ ಕಾಣಲಿವೆ. ವಿಕ್ರಂ ಸೂರಿ ಮತ್ತು ನಿರ್ಮಾಪಕಿ-ನಾಯಕಿ ನಮಿತಾ ರಾವ್​ ಬುಧವಾರ ಅಮೆರಿಕಾಗೆ ಪ್ರಯಾಣ ಮಾಡಲಿದ್ದಾರೆ.

ಹಲವು ವರ್ಷಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಸಕ್ರಿಯರಾಗಿರುವ ನಮಿತಾರಾವ್ ಹಾಗೂ ವಿಕ್ರಮ್ ಸೂರಿ ದಂಪತಿಯ ಕನಸಿನ ಕೂಸು ಈ 'ಚೌಕಾಬಾರ'. 'ಚೌಕಾಬಾರ' ಚಿತ್ರವನ್ನು ವಿಕ್ರಮ್​ ಸೂರಿ ನಿರ್ದೇಶನ ಮಾಡಿದರೆ, ನಮಿತಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದರ ಜತೆಗೆ ನವಿನಿರ್ಮಿತಿ ಎಂಬ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ನಮಿತಾ ರಾವ್ ಜತೆಗೆ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಪ್ರಥಮ ಪಸಾದ್ ಮುಂತಾದವರ ಅಭಿನಯಿಸಿರುವ ಈ ಚಿತ್ರವು ಮಣಿರಾವ್ ಅವರ ಕಾದಂಬರಿಯನ್ನು ಆಧರಿಸಿದ್ದು, ನಟಿ ರೂಪಾ ಪ್ರಭಾಕರ್​ ಸಂಭಾಷಣೆ ರಚಿಸಿದ್ದಾರೆ.

'ಚೌಕಾಬಾರ' ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ಸಂಗೀತ, ರವಿರಾಜ್​ ಛಾಯಾಗ್ರಹಣವಿದ್ದು, ಎಚ್​.ಎಸ್​. ವೆಂಕಟೇಶಮೂರ್ತಿ ಮತ್ತು ಬಿ.ಆರ್​. ಲಕ್ಷ್ಮಣ ರಾವ್​ ಹಾಡುಗಳನ್ನು ಬರೆದಿದ್ದಾರೆ.