ಮುಂಬೈ: ಕರೊನಾ ಎರಡನೇ ಅಲೆ ಅನೇಕರನ್ನು ಬಲಿ ಪಡೆಯಲಾರಂಭಿಸದೆ. ಚಿತ್ರೋದ್ಯಮದ ಹಲವರು ಸಹ ಕರೊನಾದ ಹೊಡೆತಕ್ಕೆ ಉಸಿರನ್ನೇ ನಿಲ್ಲಿಸಿದ್ದಾರೆ. ಇದೀಗ ಮರಾಠಿಯ ಪ್ರಸಿದ್ಧ ನಟಿ ಅಭಿಲಾಷಾ ಪಾಟೀಲ್ ಕೂಡ ಕರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ.
ಅಭಿಲಾಷಾ ಮೇ 4ರಂದು ಕರೊನಾದಿಂದಾಗಿ ಸಾವನ್ನಪ್ಪಿರುವುದಾಗಿ ಸಹಾಯಕ ನಿರ್ದೇಶಕ ಪ್ರಕಾಶ್ ಪಾಟೇಲ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಅವರು, ಅಭಿಲಾಷಾ ಅವರೊಂದಿಗೆ ತೆಗೆಸಿಕೊಂಡ ಕೊನೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.
43 ವರ್ಷ ವಯಸ್ಸಾಗಿದ್ದ ನಟಿ ಅನೇಕ ಮರಾಠಿ ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ ಬಾಲಿವುಡ್ನಲ್ಲಿಯೂ ಕಾಣಿಸಿಕೊಂಡಿದ್ದರು. ಸುಶಾಂತ್ ಸಿಂಗ್ ಅಭಿನಯದ ಛಿಛೋರೆ ಮತ್ತು ಅಕ್ಷಯ್ ಕುಮಾರ್ ಅಭಿನಯದ ಗುಡ್ ನ್ಯೂಸ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ನಟಿಯ ಸಾವಿಗೆ ಸಿನಿಮಾ ಕ್ಷೇತ್ರದ ಅನೇಕರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)