ಸಿನಿವಾಣಿ

ಒಂದು ಕೈಯಲ್ಲಿ ಅಡಕೋತು ಮತ್ತೊಂದು ಕೈಯಲ್ಲಿ ಗನ್; ದಿಗಂತ್​ ಜನ್ಮದಿನಕ್ಕೆ ಚಿತ್ರತಂಡಗಳಿಂದ ಪೋಸ್ಟರ್​

ಬೆಂಗಳೂರು: ಸ್ಯಾಂಡಲ್​ವುಡ್​ ದೂದ್​ ಪೇಡಾ ದಿಗಂತ್​ ಇದೀಗ ಬರ್ತ್​​ಡೇ ಖುಷಿಯಲ್ಲಿದ್ದಾರೆ. ಅವರ ಬರ್ತ್​ಡೇಗೆ ಇಡೀ ಸ್ಯಾಂಡಲ್​ವುಡ್​ ಶುಭಕೋರುತ್ತಿದೆ. ಇತ್ತ ಅವರು ನಟಿಸುತ್ತಿರುವ ಸಿನಿಮಾತಂಡಗಳಿಂದಲೂ ಬಗೆಬಗೆ ಪೋಸ್ಟರ್​ಗಳ ಉಡುಗೊರೆ ಸಿಕ್ಕಿದೆ.

ರಘುವರನ್ ನಿರ್ಮಾಣಮಾಡುತ್ತಿರುವ ರಾಘವೇಂದ್ರ ನಿರ್ದೇಶನದ ಮಾರಿಗೋಲ್ಡ್ ಚಿತ್ರದ ಫಸ್ಟ್ ಲುಕ್​ ಬಿಡುಗಡೆ ಆಗಿದೆ. ಪಕ್ಕಾ ಮಾಸ್​ ಅವತಾರದಲ್ಲಿ ದಿಗಂತ್​ ಎದುರಾಗಿದ್ದು, ರಕ್ತದ ಕಲೆಯ ಜತೆಗೆ ಬೆನ್ನಹಿಂದೆ ಗನ್​ಗಳನ್ನೂ ಪೋಸ್ಟರ್​ನಲ್ಲಿ ತೋರಿಸಿದ್ದಾರೆ.

ಇನ್ನು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ತಂಡ ಸಹ ದಿಗಂತ್ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಅಡಕೋತು ಹಿಡಿದು ಅಡಿಕೆ ಒಡೆಯುವುದರಲ್ಲಿ ನಿರತರಾಗಿದ್ದಾರವರು. ವಿನಾಯಕ ಕೋಡ್ಸರ ನಿರ್ದೇಶನದ ಈ ಚಿತ್ರವನ್ನು ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ.