ಸಿನಿವಾಣಿ

ಸಿಸಿಬಿ ಕಚೇರಿಯಲ್ಲಿ ರಾಗಿಣಿ ವಿಚಾರಣೆ ...

manjunathktgns

ಸ್ಯಾಂಡಲ್​ವುಡ್​ ನಟಿ ರಾಗಿಣಿ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಇದೀಗ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಹಲವು ವಿಷಯಗಳ ಕುರಿತು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ರಾಗಿಣಿ ಮತ್ತು ರವಿಶಂಕರ್​ ಅವರ ನಡುವಿನ ಸಂಬಂಧ ಎಂಥದ್ದು ಎಂಬ ವಿಷಯದ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ, ಅವರಿಬ್ಬರ ನಡುವೆ ಎಷ್ಟು ವರ್ಷಗಳ ಪರಿಚಯ? ಒಂದೆರೆಡು ವರ್ಷಗಳ ಹಿಂದೆ ಸ್ಟಾರ್​ ಹೋಟೆಲ್​ನಲ್ಲಿ ಗಲಾಟೆಯಾಗಿದ್ದು ಯಾಕೆ? ಪಾರ್ಟಿ ಅರೇಂಜ್​ ಮಾಡಿದ್ದು ಯಾರು? ಇದರಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಮುಂತಾದ ಹಲವು ಪ್ರಶ್ನೆಗಳನ್ನು ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖವಾಗಿ, ರವಿಶಂಕರ್​ ಹೇಳಿಕೆ ಎಷ್ಟು ಸತ್ಯಾಂಶವಿದೆ ಎಂದು ತಿಳಿಯುವುದಕ್ಕೆ ರಾಗಿಣಿ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಅದಕ್ಕೆಂದೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ವಿಚಾರಣೆ ಮಾಡಲಾಗುತ್ತಿದೆಯಂತೆ. ಇಬ್ಬರ ಉತ್ತರಗಳು ಟ್ಯಾಲಿ ಆಗುತ್ತಾ ಅಂತ ಪರಿಶೀಲಿಸಲಾಗುತ್ತಿದ್ದು. ವ್ಯತ್ಯಾಸ ಕಂಡು ಬಂದರೆ, ಮುಂದೆ ಹೆಚ್ಚಿನ ತನಿಖೆ ನಡೆಸಲಾಗುವ ಸಾಧ್ಯತೆ ಇದೆ.

ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಇಂದು ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್‌ ಲೇಔಟ್​ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್​ಗೆ ಸರ್ಚ್​​ ವಾರೆಂಟ್​ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಆ ನಂತರ ಅವರನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.