ಸಿನಿವಾಣಿ

#AppuLivesOn: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಳಗಿದ 'ನೀನೇ ರಾಜಕುಮಾರ'! ವಿಡಿಯೋ ವೈರಲ್...

ಬೆಂಗಳೂರು: #AppuLivesOn... ಅಂದಹಾಗೆ, #AppuLivesOn ಎಂದು ಟ್ವಿಟರ್​ನಲ್ಲಿ ನೆನ್ನೆ ಇಂದ ಒಂದು ಹ್ಯಾಶ್​ಟ್ಯಾಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟ ಪುನೀತ್ ರಾಜ್​ಕುಮಾರ್ ಅವರು ನಟಿಸಿದ ‘ರಾಜಕುಮಾರ’ ಸಿನಿಮಾ ಹಲವು ಕಾರಣಗಳಿಗಾಗಿ ಕನ್ನಡ ಚಿತ್ರರಂಗದ, ಅಭಿಮಾನಿಗಳ ಮನದಲ್ಲಿ ಚಿರ ಸ್ಥಾನ ಪಡೆದಿದೆ. ಇನ್ನು, ಈ ಸಿನಿಮಾ ಬರೆದ ದಾಖಲೆಗಳ ಬಗ್ಗೆ ಅಂತೂ ಹೆಚ್ಚು ಹೇಳಬೇಕಿಲ್ಲ. ಇಂದು ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಈ ಸಿನಿಮಾವನ್ನು ಒಮ್ಮೆ ನೋಡಿದರೆ ಆ ಚಿತ್ರದಂತೆಯೇ ಅಪ್ಪು ಜೀವನವಿತ್ತೇನೋ ಎಂದು ಜತೆಗೆ ಅವರು ನಮ್ಮೊಂದಿಗೆ ಇನ್ನೂ ಬದುಕಿದ್ದಾರೆ ಎಂದು ಅಭಿಮಾನಿಗಳಿಗೆ ಅನಿಸುತ್ತದೆ. 2017 ರಲ್ಲಿ ತೆರೆಕಂಡ ಈ ಚಿತ್ರವನ್ನು ಸಂತೋಷ್ ಆನಂದ್​ರಾಮ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿತ್ತು.
ಈ ಸಿನಿಮಾ ಬಿಡುಗಡೆಯಾಗಿ ಐದು ವರ್ಷಗಳು ಕಳೆದರೂ, ‘ರಾಜಕುಮಾರ’ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ವಿಶೇಷವಾಗಿ, ಅಪ್ಪು ನೆನಪಾದ ತಕ್ಷಣ ‘‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ... ನೀನೆ ರಾಜಕುಮಾರ’’ ಎಂಬ ಈ ಚಿತ್ರದ ಹಾಡನ್ನು ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗುತ್ತಾರೆ. ಸದ್ಯ, ಇಡೀ ಹಾಡಿನ ಮೇಲಿರುವ ಕ್ರೇಜ್ ಎಷ್ಟು ಎಂದು ನಿಮಗೆ ತೋರಿಸಲು ನಮಗೆ ಮತ್ತೊಂದು ಉದಾಹರಣೆ ಸಿಕ್ಕಿದೆ ಎಂದರೇ ತಪ್ಪಾಗುವುದಿಲ್ಲ. ಹೌದು, ಸಾವಿರ ಸಾವಿರ ಜನ ಕಿಕ್ಕಿರಿದು ತುಂಬಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ''ಬೊಂಬೆ ಹೇಳುತೈತೆ'' ಹಾಡು ಮೊಳಗಿದರೆ ಹೇಗಿದ್ದಿರಬಹುದು ಹೇಳಿ? ಇಂತಹ ಅಭೂತಪೂರ್ವ ಕ್ಷಣದ ಒಂದು ಜಲಕ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸದ್ಯ, ಭಾರತ Vs ಶ್ರೀಲಂಕಾದ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
ಹಗಲು-ರಾತ್ರಿ ನಡೆಯುತ್ತಿರುವ ಈ ಪಿಂಕ್ ಟೆಸ್ಟ್ ಪಂದ್ಯಾವಳಿಯನ್ನು ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ, ಎರಡು ವರ್ಷಗಳ ನಂತರ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿರುವುದು. ಇನ್ನು, ಕ್ರಿಕೆಟ್ ಪಂದ್ಯದ ವೇಳೆ ಹಿಟ್ ಗೀತೆಗಳನ್ನು ಸಾಮಾನ್ಯವಾಗಿ ಹಾಕಲಾಗುತ್ತದೆ. ಇದಕ್ಕೆ ಜನರು ದನಿಗೂಡಿಸುತ್ತಾರೆ. ಹೀಗೆ, 'ಬೊಂಬೆ ಹೇಳುತೈತೆ'' ಹಾಡು ಮೊಳಗಿದ್ದು, ಪುನೀತ್ ಮೇಲಿನ ಅಭಿಮಾನವನ್ನು ಕ್ರೀಡಾಂಗಣದಲ್ಲಿ ಎಲ್ಲರೂ ಕಣ್ತುಂಬಿಕೊಳ್ಳ ಬಹುದಿತ್ತು. ಕೆಲವರು ಅಪ್ಪು ಫೋಟೋ ಹಿಡಿದು ಸಂಭ್ರಮಿಸಿದರೆ, ಮತ್ತಷ್ಟು ಜನರು ಅಪ್ಪು ಅವರನ್ನು ಕುರಿತ ಬರಹಗಳನ್ನು ಪ್ರದರ್ಶಿಸಿದರು. ಇಷ್ಟು ಸಾಕಲ್ಲವೇ, ''ಅಪ್ಪು ಲಿವ್ಸ್ ಆನ್'', ಎಂದು ಹೇಳಲಿ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ವೀಕ್ಷಣೆಗಳನ್ನು, ಸಾವಿರ ಸಾವಿರ ಕಾಮೆಂಟ್​ಗಳನ್ನು ಪಡೆಯುತ್ತಿದೆ ಎಂದರೇ ತಪ್ಪಾಗುವುದಿಲ್ಲ. ಈ ವಿಡಿಯೋಗೆ #AppuLiveOn ಎಂಬ ಹ್ಯಾಶ್​ಟ್ಯಾಗ್ ಅನ್ನು ಕ್ಯಾಪ್ಷನ್ ಆಗಿ ಹಲವರು ಕೊಟ್ಟಿದ್ದಾರೆ.