ರ‍್ಯಾಪರ್ ಬಾದ್ಶಾ ಹಾಗೂ ಪಂಜಾಬಿ ನಟಿ ಇಶಾ ರಿಖಿ
ಮುಂಬೈ: ಸದಾ ತಮ್ಮ ತೂಕಡಿಸುವ ಹಾಡುಗಳ ಮೂಲಕ ಜನ ಮನ ಸೆಳೆಯುವ ಖ್ಯಾತ ರ‍್ಯಾಪ್ ಗಾಯಕ ಬಾದ್ಶಾ (Badshah) ಈದೀಗ ತಮ್ಮ ವೈಯಕ್ತಿಕ ಜೀವನದ ಮೂಲಕ ಮತ್ತೊಮ್ಮೆ ಮುನ್ನಲೆಗೆ ಒಂದಿದ್ದಾರೆ. ಕೆಲ ತಿಂಗಳಿನ ಹಿಂದೆ ತಮ್ಮ ಬಹುಕಾಲದ ಗೆಳತಿ ಹಾಗೂ ಪಂಜಾಬಿ ಚಿತ್ರರಂಗದ ನಟಿಯಾಗಿರುವ ಇಶಾ ರಿಖಿರನ್ನು ಸೈಲೆಂಟಾಗಿ ಮದುವೆಯಾಗಿದ್ದರು. ಆದರೆ, ಈಗ ಬಾದ್ಶಾ ಇಶಾ ರಿಖಿ ಅವರಿಂದ ಕೂಡ ದೂರವಾಗಿರುವ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾನು ರಿಖಿ ದೂರವಾಗಿದ್ದೇವೆ!
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಾದ್ ಶಾ, ನಾನು ಮತ್ತು ಇಶಾ ರಿಖಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ನಾವು ವಿಭಿನ್ನ ಮಾರ್ಗದಲ್ಲಿ ನಮ್ಮ ಜೀವನವನ್ನು ನಡೆಸಲು ಮುಂದಾಗಲಿದ್ದೇವೆ. ದಯವಿಟ್ಟು ಎಲ್ಲರೂ ನಮ್ಮ ಖಾಸಗಿತನಕ್ಕೆ ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಅಂತೆಯೇ, ನನ್ನ ಅಥವಾ ಇಶಾ ರಿಖಿ ಕುರಿತು ವದಂತಿ, ಊಹಾ-ಪೋಹ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಎಂದು ನೆಟ್ಟಿಗರಲ್ಲಿ ವಿನಂತಿಸಿ ಕೊಂಡಿದ್ದಾರೆ.
ವಿಚ್ಛೇದನ ನಂತರ ಮತ್ತೆ ಹಸೆಮಣೆ ಏರಿದ್ದ ಗಾಯಕ!
ಬಾದ್ಶಾ ಈಗಾಗಲೇ ವಿವಾಹವಾಗಿ ವಿಚ್ಛೇದನನ್ನು ಸಹ ಪಡೆದಿದ್ದಾರೆ. ಬಾದ್ಶಾ 2012 ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿ ಜೆಸ್ಸಿಮಿ ಗ್ರೇಸ್ ಎಂಬ ಮಗಳನ್ನು ಸಹ ಈ ದಂಪತಿ ಹೊಂದಿದೆ. ಆದರೆ ಬಾದ್ಶಾ ತಮ್ಮ ಮೊದಲ ಪತ್ನಿತಿಂದ 2020 ರಲ್ಲಿ ಬೇರ್ಪಟ್ಟ ಬಳಿಕ ಇಶಾ ರಿಖಿ ಅವರನ್ನು ತಮ್ಮ ಪತ್ನಿಯಾಗಿ ಸ್ವೀಕರಿಸಿದ್ದರು. ಆದರೆ ಈಗ ಇಶಾ ರಿಖಿಯಿಂದ ಕೂಡ ಬಾದ್ಶಾ ದೂರವಾಗಿದ್ದಾರೆ, (ಏಜನ್ಸೀಸ್).