ವಿದ್ಯಾವಂತರಾಗಿ ನೀವು ಈ ಕೆಲಸ ಮಾಡಬೇಡಿ 
ಬಾಲಿವುಡ್

ಜೆನ್​- ಜೀ ಗಳನ್ನು ನೋಡಿ ಕಲಿತುಕೊಳ್ಳಿ..! ಜೈಸ್ವಾಲ್​ ಜೊತೆ ಮೃಣಾಲ್​ ಡೇಟಿಂಗ್​ ವದಂತಿ; ಬಾಲಿವುಡ್​ ನಟಿ ಹೇಳಿದ್ದೇನು? Mrunal Thakur on Dating

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಮೃಣಾಲ್ ಡೇಟಿಂಗ್ ವದಂತಿ
  • ವಿದ್ಯಾವಂತರಾಗಿ ನೀವು ಈ ಕೆಲಸ ಮಾಡಬೇಡಿ
  • ಜೆನ್​-ಜೀ ಗಳನ್ನು ನೋಡಿ ಕಲಿಯಿರಿ
ಮುಂಬೈ: ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟಿ ಮೃಣಾಲ್​ ಠಾಕೂರ್​ ಹಾಗೂ ಟೀಂ ಇಂಡಿಯಾದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಡೇಟಿಂಗ್ (Mrunal Thakur on Dating)​ ಮಾಡುತ್ತಿರುವುದಾಗಿ ವದಂತಿ ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿತ್ತು.
ಈ ಬಗ್ಗೆ ನಟಿಗೆ ಅವರ ಇನ್​ಸ್ಟಾಗ್ರಾಮ್​ ಡಿಎಂಗಳಲ್ಲಿ, ಫೋಟೊ ಕಮೆಂಟ್​ಗಳಲ್ಲಿ ನಿರಂತರವಾಗಿ ಪ್ರಶ್ನಿಸಲಾಗುತ್ತಿತ್ತು. ಈಗ ಈ ವದಂತಿಯಿಂದ ಬೇಸತ್ತು ನಟಿ ಇದಕ್ಕೊಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ವದಂತಿ ಹರಡಬೇಡಿ!

ಕೆಲ ದಿನಗಳ ಹಿಂದೆ, ನಟಿ ಮೃಣಾಲ್​ ಠಾಕೂರ್​ ಹಾಗೂ ಯಶಸ್ವಿ ಜೈಸ್ವಾಲ್​ ಇಬ್ಬರೂ ಒಂದೇ ಕೆಫೆಯಲ್ಲಿ ಕಾಣಿಸಿಕೊಂಡಿದ್ದರು. ಕೆಫೆಯಿಂದ ಮೊದಲು ಮೃಣಾಲ್​ ಹೊರಬಿದ್ದಿದ್ದು, ನಂತರ ಜೈಸ್ವಾಲ್​ ಆಚೆ ಬಂದು ತಮ್ಮ ಕಾರನ್ನೇರಿ ಹೊರಟಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ, 34 ವರ್ಷದ ನಟಿ 24 ವರ್ಷದ ಯುವ ಆಟಗಾರನನ್ನು ಡೇಟ್​ ಮಾಡುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು.

ಈಗ, ಈ ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿಯೊಬ್ಬನಿಗೆ ಕಮೆಂಟ್ ಮೂಲಕ ಉತ್ತರಿಸಿರುವ ಮೃಣಾಲ್​, ನೀವು ಶಿಕ್ಷಿತರಾಗಿ, ವಿದ್ಯಾವಂತರಾಗಿ ಈ ರೀತಿಯ ವದಂತಿಗಳನ್ನು ನೀವು ನಂಬುವಿರಾ? ದೇಶದಲ್ಲಿ ಇದಕ್ಕಿಂತ ಮುಖ್ಯವಾದ ಹಲವು ಘಟನೆಗಳು ನಡೆಯುತ್ತಿವೆ; ಕನಿಷ್ಟ ಜೆನ್​ ಜೀ ಗಳನ್ನು ನೋಡಿ ಕಲಿಯಿರಿ, ಅದರ ಬಗ್ಗೆ ಚರ್ಚಿಸಿ, ವಿಡಿಯೋ ಮಾಡಿ. ಕನಿಷ್ಟ ಜೆನ್​ ಜೀ ಗಳನ್ನು ನೋಡಿ ಕಲಿಯಿರಿ, ನಿಮಗೆ ಒಂದಿಷ್ಟು ವೀಕ್ಷಣೆಯಾದರೂ ಬರುತ್ತದೆ ಎಂದು ನಟಿ ಖಾರವಾಗಿ ಉತ್ತರಿಸಿದ್ದಾರೆ.

ಜೈಸ್ವಾಲ್​ ಮುನ್ನ ಧನುಷ್​!

ಯಶಸ್ವಿ ಜೈಸ್ವಾಲ್​ಗೂ ಮುನ್ನ ಮೃಣಾಲ್​ ಹೆಸರನ್ನು ಸೌತ್​ ಸೂಪರ್​ಸ್ಟಾರ್​ ಧನುಷ್​ ಜೊತೆ ಸೇರಿಸಲಾಗಿತ್ತು. ಇವರಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, 2026 ರ ಫೆಬ್ರವರಿ 14 ರಂದೇ ಮದುವೆ ಕೂಡ ಆಗಲಿದ್ದಾರೆಂದು ವದಂತಿ ಹಬ್ಬಿತ್ತು. ಆದರೆ ಇದರ ಬಗ್ಗೆ ಧನುಷ್​ ಆಗಲೀ, ಮೃಣಾಲ್​ ಅಗಲೀ ಯಾವುದೇ ಹೇಳಿಕೆ ನೀಡಿರಲಿಲ್ಲ. ಅಂತೆಯೇ ಅವರು ಮದುವೆ ಕೂಡ ಆಗಲಿಲ್ಲ.
ಈಗ ಮತ್ತೆ ಮೃಣಾಲ್​ ಹೆಸರನ್ನು ಆಕೆಗಿಂತ ಹೆಚ್ಚು ಕಡಿಮೆ 10 ವರ್ಷ ಚಿಕ್ಕ ವಯಸ್ಸಿನ ಆಟಗಾರನೊಂದಿಗೆ ನಟಿ ಹೆಸರನ್ನು ಜೋಡಿಸಿದ್ದು, ಮೃಣಾಲ್​ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರ ಕಮೆಂಟ್​ ತಿಳಿಸುತ್ತಿದೆ ಎಂದರೆ ಸುಳ್ಳಲ್ಲ, (ಏಜನ್ಸೀಸ್​).