Salman Khan ಚಿತ್ರ Instagram
Salman Khan: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಫಿಟ್‌ನೆಸ್ ಮತ್ತು ಲುಕ್ ವಿಷಯದಲ್ಲಿ ಎಷ್ಟೇ ವಿಮರ್ಶೆ ಎದುರಾದರೂ, ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುವುದರಲ್ಲಿ ಸಿದ್ಧಹಸ್ತರು. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಅವರನ್ನು ವಯಸ್ಸಾದಂತೆ ಕಾಣುತ್ತಿದ್ದಾರೆ ಎಂದು ಟ್ರೋಲ್ ಮಾಡಿದವರಿಗೆ ನಟ ಈಗ ಮಾಸ್ ಲುಕ್ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ.
ವೈರಲ್ ಆಗಿದ್ದ ಹಳೆಯ ವೀಡಿಯೊ ಮತ್ತು ಟ್ರೋಲ್ಸ್
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಸ್ಲಂ ಪುನರ್ವಸತಿ ಪ್ರಾಧಿಕಾರದ (SRA) ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಈ ವೇಳೆ ಅವರ ಕೆಲವೊಂದು ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು. ಅದರಲ್ಲಿ ಅವರು ಸ್ವಲ್ಪ ಆಯಾಸಗೊಂಡಂತೆ ಕಾಣುತ್ತಿದ್ದರು. ಇದನ್ನು ಗುರುತಿಸಿದ ನೆಟ್ಟಿಗರು ಸಲ್ಮಾನ್ ಖಾನ್ಗೆ ವಯಸ್ಸಾಗಿದೆ. ಅವರ ಫಿಟ್‌ನೆಸ್ ಕುಸಿದಿದೆ ಎಂದು ತೀವ್ರವಾಗಿ ಟ್ರೋಲ್ ಮಾಡಿದ್ದರು. ಆದರೆ, ಅವರ ಅಭಿಮಾನಿಗಳು ಯಾವುದೇ ಫಿಲ್ಟರ್ ಇಲ್ಲದೆ ನೈಸರ್ಗಿಕವಾಗಿ ವಯಸ್ಸಾಗುವುದನ್ನು ಒಪ್ಪಿಕೊಳ್ಳಬೇಕು, ಸಲ್ಲು ಸದಾ ಫಿಟ್ ಎಂದು ಸಮರ್ಥಿಸಿಕೊಂಡಿದ್ದರು.
ಅರ್ಧರಾತ್ರಿ ಸಲ್ಮಾನ್ ನೀಡಿದ ಖಡಕ್ ಉತ್ತರ!
ಈ ಎಲ್ಲಾ ಚರ್ಚೆಗಳು ಮತ್ತು ಟ್ರೋಲ್‌ಗಳ ನಡುವೆಯೇ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಡರಾತ್ರಿ ಹಂಚಿಕೊಂಡ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಅದರಲ್ಲಿ ಕೌಬಾಯ್ ಹ್ಯಾಟ್, ಡಿಸ್ಟ್ರೆಸ್ಡ್ ಲೆದರ್ ಜಾಕೆಟ್ ಹಾಗೂ ಡಾರ್ಕ್ ಶರ್ಟ್ ಧರಿಸಿ, ಬ್ಲ್ಯಾಕ್ ಅಂಡ್ ವೈಟ್ ಶೈಲಿಯಲ್ಲಿ ಅತ್ಯಂತ ರಗಡ್ ಹಾಗೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಟ್ರೋಲಿಗರಿಗೆ ಶಾಕ್ ಕೊಟ್ಟ ಸಲ್ಮಾನ್ ಖಾನ್! ಈ ಫೋಟೋಗಳನ್ನು ಹಂಚಿಕೊಂಡ ಸಲ್ಮಾನ್ ಖಾನ್, ಆಪ್ ಲೋಗೋ ಕಿ ತಬಿಯತ್ ಕೈಸಿ ಹೈ? (ನಿಮ್ಮ ಆರೋಗ್ಯ ಹೇಗಿದೆ?) ಎಂಬ ಕ್ಯಾಪ್ಷನ್ ಬರೆಯುವ ಮೂಲಕ ತಮ್ಮನ್ನು ಟ್ರೋಲ್ ಮಾಡಿದವರಿಗೆ ನೇರವಾಗಿ ಚಾಟಿ ಬೀಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಸಲ್ಮಾನ್ ಖಾನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ನೀವೇ ಹೇಳಿ ನಿಮ್ಮ ಆರೋಗ್ಯ ಹೇಗಿದೆ ಎಂದು.. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಸಲ್ಲು ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಮಾಶಾಅಲ್ಲಾಹ್, ಟ್ರೋಲಿಗರನ್ನು ಉರಿಸುವುದರಲ್ಲಿ ಇರುವಷ್ಟು ಮಜಾ ಬೇರೆ ಯಾವುದರಲ್ಲೂ ಇಲ್ಲ. ಹೃದಯ ತುಂಬಿ ಬಂತು. ಅಲ್ಹಮ್ದುಲಿಲ್ಲಾಹ್, ಸದಾ ಫಿಟ್ ಆಗಿರಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದಿದ್ದಾರೆ (ಏಜೆನ್ಸೀಸ್).