ಮುಂಬೈ: ಬಾಲಿವುಡ್ ತಾರಾದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಹಬ್ಬದ ಸಂಭ್ರಮದ ನಡುವೆಯೇ ತಮ್ಮ ಪುತ್ರ ವಿಹಾನ್‌ನ ಮುಖವನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮುದ್ದಾದ ಕುಟುಂಬದ ಫೋಟೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಮ್ಮ ಅತ್ಯಂತ ಸುಂದರ ದೀಪಾವಳಿ (Our Brightest Diwali Yet) ಎಂಬ ಭಾವನಾತ್ಮಕ ಸಾಲಿನೊಂದಿಗೆ ಹಂಚಿಕೊಂಡಿರುವ ಈ ಫೋಟೋದಲ್ಲಿ ಕತ್ರಿನಾ, ವಿಕ್ಕಿ ಮತ್ತು ಅವರ ಪುತ್ರ ವಿಹಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮೂವರ ಮುಖದಲ್ಲೂ ಮಂದಹಾಸ ತುಂಬಿದ್ದು, ಕುಟುಂಬದ ಈ ಸುಂದರ ಕ್ಷಣ ಅಭಿಮಾನಿಗಳ ಮನಗೆದ್ದಿದೆ.
ಫೋಟೋದಲ್ಲಿ ಕತ್ರಿನಾ ಹಳದಿ ಬಣ್ಣದ ಸುಂದರ ಉಡುಪಿನಲ್ಲಿ ಮಿಂಚಿದ್ದರೆ, ಪುಟ್ಟ ವಿಹಾನ್ ಹಳದಿ ಬಣ್ಣದ ಜಾಕೆಟ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಇತ್ತ ವಿಕ್ಕಿ ಕೌಶಲ್ ಸಾಂಪ್ರದಾಯಿಕ ಕುರ್ತಾ ಧರಿಸಿ ಪತ್ನಿ ಮತ್ತು ಮಗನೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಇದುವರೆಗೆ ತಮ್ಮ ಮಗನ ಖಾಸಗಿತನಕ್ಕೆ ಆದ್ಯತೆ ನೀಡುತ್ತಿದ್ದ ಈ ದಂಪತಿ, ಇದೀಗ ಮೊದಲ ಬಾರಿಗೆ ಆತನ ಮುಖದ ದರ್ಶನ ಮಾಡಿಸಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಫೋಟೋಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿಯ ಕಾಮೆಂಟ್‌ಗಳು ಹರಿದುಬರುತ್ತಿವೆ. ದೀಪಾವಳಿಯಂದು ಅಭಿಮಾನಿಗಳಿಗೆ ಸಿಕ್ಕ ಈ ವಿಶೇಷ ಉಡುಗೊರೆ ಬಾಲಿವುಡ್ ವಲಯದಲ್ಲೂ ಚರ್ಚೆಯಾಗುತ್ತಿದೆ, (ಏಜೆನ್ಸೀಸ್).