ಧರ್ಮೇಂದ್ರ ಮೊದಲ ಪುಣ್ಯತಿಥಿ  WEB
ಬಾಲಿವುಡ್

ಧರ್ಮೇಂದ್ರ ಮೊದಲ ಪುಣ್ಯತಿಥಿ ! ಅವರಿಲ್ಲದೆ ಜೀವನವೇ ಶೂನ್ಯ ಎಂದ ಹೇಮಾ ಮಾಲಿನಿ | Dream girl

ಬಾಲಿವುಡ್‌ನ ಎವರ್‌ಗ್ರೀನ್ ನಟ, ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ಧರ್ಮೇಂದ್ರ ಅಗಲಿ ಇಂದಿಗೆ ಒಂದು ವರ್ಷ. ಪತಿಯ ಮೊದಲ ಪುಣ್ಯಸ್ಮರಣೆಯ ದಿನದಂದು ನಟಿ ಹೇಮಾ ಮಾಲಿನಿ ಹಂಚಿಕೊಂಡಿರುವ ಭಾವುಕ ಸಂದೇಶ ಅಭಿಮಾನಿಗಳ ಮನಕಲಕಿದೆ. ಒಂದು ವರ್ಷ ಕಳೆದರೂ ಅವರ ಅಗಲಿಕೆಯ ನೋವು ಕಡಿಮೆಯಾಗಿಲ್ಲ, ಅವರಿಲ್ಲದ ಬದುಕು ಇಂದಿಗೂ ಖಾಲಿಯಾಗಿದೆ ಎಂದು ಹೇಮಾ ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.Dream girl

ನವದೆಹಲಿ: ಬಾಲಿವುಡ್‌ನ ಎವರ್‌ಗ್ರೀನ್ ನಟ, ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ಧರ್ಮೇಂದ್ರ ಅಗಲಿ ಇಂದಿಗೆ ಒಂದು ವರ್ಷ. ಪತಿಯ ಮೊದಲ ಪುಣ್ಯಸ್ಮರಣೆಯ ದಿನದಂದು ನಟಿ ಹೇಮಾ ಮಾಲಿನಿ ಹಂಚಿಕೊಂಡಿರುವ ಭಾವುಕ ಸಂದೇಶ ಅಭಿಮಾನಿಗಳ ಮನಕಲಕಿದೆ. ಒಂದು ವರ್ಷ ಕಳೆದರೂ ಅವರ ಅಗಲಿಕೆಯ ನೋವು ಕಡಿಮೆಯಾಗಿಲ್ಲ, ಅವರಿಲ್ಲದ ಬದುಕು ಇಂದಿಗೂ ಖಾಲಿಯಾಗಿದೆ ಎಂದು ಹೇಮಾ ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.

2025ರ ನವೆಂಬರ್ 24ರಂದು ತಮ್ಮ 89ನೇ ವಯಸ್ಸಿನಲ್ಲಿ ಮುಂಬೈನ ನಿವಾಸದಲ್ಲಿ ಧರ್ಮೇಂದ್ರ ನಿಧನರಾಗಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದರು. ಇದೀಗ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಹೇಮಾ ಮಾಲಿನಿ ಸಾಮಾಜಿಕ ಜಾಲತಾಣದಲ್ಲಿ ಧರ್ಮೇಂದ್ರ ಅವರೊಂದಿಗೆ ಕಳೆದ ಸುಂದರ ಕ್ಷಣಗಳ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಸ್ನೇಹಿತ, ಮಾರ್ಗದರ್ಶಕ ಎಲ್ಲವೂ ಅವರೇ ಆಗಿದ್ದರು

ಧರ್ಮೇಂದ್ರ ಅವರನ್ನು ನೆನಪಿಸಿಕೊಂಡಿರುವ ಹೇಮಾ ಮಾಲಿನಿ, ಅವರು ಕೇವಲ ತಮ್ಮ ಪತಿಯಾಗಿರಲಿಲ್ಲ, ಬದಲಿಗೆ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಕ ಮತ್ತು ಜೀವನದ ಆಧಾರಸ್ತಂಭವಾಗಿದ್ದರು ಎಂದು ಬರೆದುಕೊಂಡಿದ್ದಾರೆ. ನಾನು ನನ್ನ ಜೀವನದ ಅತ್ಯಂತ ದೊಡ್ಡ ಮತ್ತು ಎಂದಿಗೂ ತುಂಬಲಾಗದ ನಷ್ಟವನ್ನು ನೆನೆದು ದುಃಖಿಸುತ್ತಿದ್ದೇನೆ. ಅವರು ಕೇವಲ ನನ್ನ ಪತಿಯಾಗಿರಲಿಲ್ಲ. ಅವರೇ ನನ್ನ ಎಲ್ಲವೂ ಆಗಿದ್ದರು. ನನ್ನ ಸ್ನೇಹಿತ, ಮಾರ್ಗದರ್ಶಕ ಮತ್ತು ನನ್ನ ಬೆನ್ನೆಲುಬಾಗಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರೇ ನನ್ನ ಅಸ್ತಿತ್ವವಾಗಿದ್ದರು ಎಂದು ಹೇಮಾ ಭಾವುಕವಾಗಿ ಬರೆದುಕೊಂಡಿದ್ದಾರೆ.

ಯಶಸ್ಸಿನ ಉತ್ತುಂಗದಲ್ಲಿದ್ದರೂ ಬದಲಾಗದ ವ್ಯಕ್ತಿತ್ವ

ಧರ್ಮೇಂದ್ರ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡಿರುವ ಹೇಮಾ, ಅವರಲ್ಲಿದ್ದ ಸಹಜ ಒಳ್ಳೆಯತನ, ಸರಳತೆ ಮತ್ತು ಎಲ್ಲರ ಮೇಲಿನ ಪ್ರೀತಿಯನ್ನು ಸ್ಮರಿಸಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಯಶಸ್ಸು ಗಳಿಸಿದರೂ ಅವರು ತಮ್ಮ ಬೇರುಗಳನ್ನು ಮರೆಯಲಿಲ್ಲ. ಸದಾ ಸರಳವಾಗಿ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರ ಗುಣವನ್ನು ಹೇಮಾ ನೆನಪಿಸಿಕೊಂಡಿದ್ದಾರೆ.

ಭಗವದ್ಗೀತೆಯಲ್ಲಿ ಆತ್ಮಕ್ಕೆ ಸಾವಿಲ್ಲ, ಅದು ಅಮರ ಮತ್ತು ಮರುಜನ್ಮ ಪಡೆಯುತ್ತದೆ ಎಂದು ಹೇಳಲಾಗಿದೆ. ಈ ಸತ್ಯ ನನಗೆ ತಿಳಿದಿದೆ. ಆದರೆ ನಾನು ಇನ್ನೂ ಇದೇ ಜೀವನದಲ್ಲಿದ್ದೇನೆ. ಹೀಗಾಗಿ ಅವರ ಪ್ರೀತಿಯ ಸಾನ್ನಿಧ್ಯವನ್ನು ಪ್ರತಿಕ್ಷಣವೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಹೇಮಾ

ಧರ್ಮೇಂದ್ರ ಅವರ ಮೊದಲ ಪುಣ್ಯಸ್ಮರಣೆಯಂದು ಕೋಟ್ಯಂತರ ಅಭಿಮಾನಿಗಳು ತೋರಿದ ಪ್ರೀತಿಗೂ ಹೇಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು, ಅವರ ವ್ಯಕ್ತಿತ್ವ ಮತ್ತು ಅವರು ತಮ್ಮ ಜೀವನದಲ್ಲಿ ಬೀರಿದ ಪ್ರಭಾವದ ಕುರಿತು ಆತ್ಮೀಯ ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 1980ರಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ವಿವಾಹವಾಗಿದ್ದರು. ಈ ದಂಪತಿಗೆ ಇಶಾ ಡಿಯೋಲ್ ಮತ್ತು ಅಹನಾ ಡಿಯೋಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಪರದೆಯ ಮೇಲೆ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದ ಧರ್ಮೇಂದ್ರ, ನಿಜ ಜೀವನದಲ್ಲೂ ತಮ್ಮ ಸರಳತೆ ಮತ್ತು ಆತ್ಮೀಯತೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನೆನಪುಗಳು ಎಂದೆಂದಿಗೂ ಅಭಿಮಾನಿಗಳ ಮನದಲ್ಲಿ ಉಳಿಯಲಿವೆ.