ರೇಸಿಂಗ್ ಟ್ರ್ಯಾಕ್‌ನಲ್ಲಿ ಕಿಚ್ಚನ ಮಿಂಚಿನ ಸಂಚಾರ! ವಿಡಿಯೋ ವೈರಲ್ | kiccha Sudeep

ತೆರೆಮೇಲೆ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರೇಸಿಂಗ್ ಟ್ರ್ಯಾಕ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೇಸಿಂಗ್ ಕಾರಿನ ಸ್ಟೀರಿಂಗ್ ಹಿಡಿದು ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸಿದ ಅವರು, ಈ ಅನುಭವವನ್ನು ಜೀವನದಲ್ಲೇ ಮರೆಯಲಾಗದ ಕ್ಷಣ ಎಂದು ಬಣ್ಣಿಸಿದ್ದಾರೆ.kiccha Sudeep
ರೇಸಿಂಗ್ ಟ್ರ್ಯಾಕ್‌ನಲ್ಲಿ ಕಿಚ್ಚನ ಮಿಂಚಿನ ಸಂಚಾರ
ರೇಸಿಂಗ್ ಟ್ರ್ಯಾಕ್‌ನಲ್ಲಿ ಕಿಚ್ಚನ ಮಿಂಚಿನ ಸಂಚಾರWEB
Published on: 

ಬೆಂಗಳೂರು: ತೆರೆಮೇಲೆ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರೇಸಿಂಗ್ ಟ್ರ್ಯಾಕ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೇಸಿಂಗ್ ಕಾರಿನ ಸ್ಟೀರಿಂಗ್ ಹಿಡಿದು ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸಿದ ಅವರು, ಈ ಅನುಭವವನ್ನು ಜೀವನದಲ್ಲೇ ಮರೆಯಲಾಗದ ಕ್ಷಣ ಎಂದು ಬಣ್ಣಿಸಿದ್ದಾರೆ.

ಕಾರುಗಳ ವೇಗ, ಎಂಜಿನ್ ಸದ್ದು, ರೇಸಿಂಗ್ ಟ್ರ್ಯಾಕ್‌ನ ರೋಮಾಂಚನ... ಇವೆಲ್ಲದರ ನಡುವೆ ಸ್ವತಃ ಕಾರು ಚಲಾಯಿಸುವ ಅವಕಾಶ ಸಿಕ್ಕರೆ ಹೇಗಿರಬಹುದು? ಇಂತಹದ್ದೊಂದು ವಿಶೇಷ ಅನುಭವವನ್ನು ನಟ ಕಿಚ್ಚ ಸುದೀಪ್ ಪಡೆದುಕೊಂಡಿದ್ದಾರೆ. ಕೇವಲ ರೇಸ್ ವೀಕ್ಷಿಸುವುದಕ್ಕೆ ಸೀಮಿತವಾಗದೆ, ರೇಸಿಂಗ್ ಟ್ರ್ಯಾಕ್‌ಗೆ ಇಳಿದು ಕಾರು ಚಾಲನೆ ಮಾಡಿರುವ ಕಿಚ್ಚ, ತಮ್ಮ ಅನುಭವದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾರು ಓಡಿಸುವ ಮುನ್ನ ಸಿಕ್ಕಿತು ವಿಶೇಷ ತರಬೇತಿ

ರೇಸಿಂಗ್ ಕಾರು ಚಾಲನೆ ಎನ್ನುವುದು ಸಾಮಾನ್ಯ ಕಾರು ಓಡಿಸಿದಂತಲ್ಲ. ವೇಗ, ನಿಯಂತ್ರಣ, ತಾಂತ್ರಿಕ ಜ್ಞಾನ ಮತ್ತು ಸುರಕ್ಷತೆ ಎಲ್ಲವೂ ಇಲ್ಲಿ ಮುಖ್ಯ. ಹೀಗಾಗಿ ಟ್ರ್ಯಾಕ್‌ಗೆ ಪ್ರವೇಶಿಸುವ ಮುನ್ನ ಸುದೀಪ್ ಅವರಿಗೆ ರೇಸಿಂಗ್ ಕಾರಿನ ಕಾರ್ಯವೈಖರಿ, ಅದರ ತಾಂತ್ರಿಕ ಅಂಶಗಳು, ಚಾಲನೆಯ ವೇಳೆ ಅನುಸರಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ತಜ್ಞರು ವಿವರಿಸಿದ್ದಾರೆ. ಈ ಸಿದ್ಧತೆಯ ಬಳಿಕ ರೇಸಿಂಗ್ ಟ್ರ್ಯಾಕ್‌ನಲ್ಲಿ ಕಾರು ಚಲಾಯಿಸಿದ ಸುದೀಪ್, ಅಲ್ಲಿನ ಅತ್ಯಾಧುನಿಕ ವ್ಯವಸ್ಥೆ, ವಿಶಾಲವಾದ ಟ್ರ್ಯಾಕ್ ಹಾಗೂ ವಾತಾವರಣಕ್ಕೆ ಮನಸೋತಿದ್ದಾರೆ.

ಪದಗಳಲ್ಲಿ ಹೇಳಲು ಸಾಧ್ಯವಿಲ್ಲಾ ಎಂದ ಕಿಚ್ಚ

ತಮ್ಮ ಎಕ್ಸ್ ಖಾತೆಯಲ್ಲಿ ಈ ಅನುಭವದ ಬಗ್ಗೆ ಬರೆದುಕೊಂಡಿರುವ ಸುದೀಪ್, ಇದೊಂದು ಅಪರೂಪದ ಕ್ಷಣವಾಗಿದ್ದು, ಜೀವಮಾನದ ಅತ್ಯುತ್ತಮ ಚಾಲನಾ ಅನುಭವಗಳಲ್ಲಿ ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಅನುಭವವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿರುವ ಅವರು, ಅವಕಾಶ ಕಲ್ಪಿಸಿದ ಇಂಡಿಯನ್ ರೇಸಿಂಗ್ ಲೀಗ್ (IRL) ತಂಡದ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

Also Read
ತಡರಾತ್ರಿ ರಸ್ತೆಗಿಳಿದವರಿಗೆ ಎದುರಾದ ಮೃತ್ಯು! ಭೀಕರ ಅಪಘಾತಕ್ಕೆ ಇಬ್ಬರು ಸಹೋದರರು ಬಲಿ | Kolhapur Accident
ರೇಸಿಂಗ್ ಟ್ರ್ಯಾಕ್‌ನಲ್ಲಿ ಕಿಚ್ಚನ ಮಿಂಚಿನ ಸಂಚಾರ

ಕಿಚ್ಚನ ತಂಡದ ಮುಂದಿನ ರೇಸ್ ಯಾವಾಗ?

ಅಂದಹಾಗೆ ಸುದೀಪ್ ಅವರಿಗೆ ರೇಸಿಂಗ್‌ನೊಂದಿಗೆ ಇರುವ ನಂಟು ಕೇವಲ ಹವ್ಯಾಸಕ್ಕೆ ಸೀಮಿತವಾಗಿಲ್ಲ. ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಅವರ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡವೂ ಸ್ಪರ್ಧಿಸುತ್ತಿದೆ. ಇದೀಗ ತಂಡದ ಮುಂದಿನ ರೇಸ್‌ಗಳ ಕುರಿತು ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.

ನವೆಂಬರ್ 28 ಮತ್ತು 29ರಂದು ಗ್ರೇಟರ್ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ರೇಸ್‌ನಲ್ಲಿ ತಂಡ ಭಾಗವಹಿಸಲಿದೆ. ನಂತರ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆ ನಡೆಯಲಿದೆ.

ಸಿನಿಮಾದಲ್ಲಿ ಸಾಹಸಮಯ ಪಾತ್ರಗಳ ಮೂಲಕ ಗಮನ ಸೆಳೆಯುವ ಕಿಚ್ಚ ಇದೀಗ ನಿಜ ಜೀವನದಲ್ಲೂ ರೇಸಿಂಗ್ ಕಾರಿನ ಸ್ಟೀರಿಂಗ್ ಹಿಡಿದು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಅವರ ಈ ಹೊಸ ಅನುಭವದ ವಿಡಿಯೋ ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.