salmankhan : ಬಾಲಿವುಡ್ನಲ್ಲಿ ಸಿನಿಮಾಗಳ ಬಿಡುಗಡೆ ದಿನಾಂಕದ ವಿಚಾರವಾಗಿ ಸ್ಟಾರ್ ನಟರ ನಡುವೆ ಪೈಪೋಟಿ ನಡೆಯುವುದು ಹೊಸದೇನಲ್ಲ. ಆದರೆ ಕೆಲವೊಮ್ಮೆ ಒಂದೇ ದಿನ ಇಬ್ಬರು ಪ್ರಮುಖ ನಟರ ಸಿನಿಮಾಗಳು ತೆರೆಗೆ ಬಂದಾಗ ಬಾಕ್ಸ್ಆಫೀಸ್ನಲ್ಲಿ ಅನಿವಾರ್ಯವಾಗಿ ಪೈಪೋಟಿ ಎದುರಾಗುತ್ತದೆ. ಇದೀಗ ನಟ ಸಲ್ಮಾನ್ ಖಾನ್ ಅಭಿನಯದ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಮತ್ತು ಶ್ರದ್ಧಾ ಕಪೂರ್ ನಟನೆಯ ಈಥಾ ಸಿನಿಮಾಗಳು ಡಿಸೆಂಬರ್ 4ರಂದು ಬಿಡುಗಡೆಯಾಗಲು ಸಿದ್ಧವಾಗಿವೆ. ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ಶ್ರದ್ಧಾ ಅವರ ಸಿನಿಮಾದ ಬಿಡುಗಡೆ ದಿನಾಂಕದ ವಿಚಾರ ತಮಗೆ ಮೊದಲೇ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ವಿಷಯ ತಿಳಿದ ಬಳಿಕ ನಟಿಗೆ ಕರೆ ಮಾಡಿ ಕ್ಷಮೆಯನ್ನೂ ಕೇಳಿದ್ದಾರಂತೆ
ಹೈದರಾಬಾದ್ನಲ್ಲಿ ಎಬಿಪಿ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಶ್ರದ್ಧಾ ಕಪೂರ್ ಅವರ ಸಿನಿಮಾ ಕೂಡ ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ಮೊದಲೇ ಈ ವಿಚಾರ ತಿಳಿದಿದ್ದರೆ ಶ್ರದ್ಧಾ ಅವರ ಸಿನಿಮಾದ ಜೊತೆಗೆ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಶ್ರದ್ಧಾ ಕಪೂರ್ ಅವರ ಸಿನಿಮಾ ಡಿಸೆಂಬರ್ 4ರಂದು ಬಿಡುಗಡೆಯಾಗುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ಈ ವಿಚಾರದಿಂದ ನನಗೆ ನಿಜಕ್ಕೂ ತುಂಬಾ ಬೇಸರವಾಗಿದೆ. ಮೊದಲೇ ಗೊತ್ತಿದ್ದರೆ ಅವರ ಸಿನಿಮಾದೊಂದಿಗೆ ನನ್ನ ಚಿತ್ರವನ್ನು ಬಿಡುಗಡೆ ಮಾಡುತ್ತಿರಲಿಲ್ಲ. ನಾನು ಅವರಿಗೆ ಕರೆ ಮಾಡಿ ಕ್ಷಮೆ ಕೇಳಿದೆ. ಅವರು ಬೆಳೆಯುವುದನ್ನು ನಾನು ನೋಡಿದ್ದೇನೆ. ಹೀಗಾಗಿ ಈ ಪರಿಸ್ಥಿತಿಗೆ ನಿಜಕ್ಕೂ ವಿಷಾದವಿದೆ ಎಂದು ತಿಳಿಸಿದೆ ಎಂದು ಸಲ್ಮಾನ್ ಹೇಳಿದ್ದಾರೆ.
ಇದನ್ನೂ ಓದಿ : ಕಿಂಗ್ ಖಾನ್ ಎದುರು ಕ್ಲ್ಯಾಶ್ ಬೇಡವೇ ಬೇಡ ಎಂದ ಸಲ್ಲು ! ಅಸಲಿ ಸೀಕ್ರೆಟ್ ರಿವೀಲ್ | salman khan
ತಾವು ಕ್ಷಮೆ ಕೇಳಿದಾಗ ಶ್ರದ್ಧಾ ಕಪೂರ್ ನೀಡಿದ ಪ್ರತಿಕ್ರಿಯೆಯನ್ನೂ ಸಲ್ಮಾನ್ ಹಂಚಿಕೊಂಡಿದ್ದಾರೆ. ಇಲ್ಲ ಸರ್, ಇಲ್ಲ ಸರ್... ನಮ್ಮಿಬ್ಬರ ಸಿನಿಮಾಗಳಿಗೂ ಸಾಕಷ್ಟು ಅವಕಾಶಗಳಿವೆ. ಎರಡೂ ಚಿತ್ರಗಳು ಬಿಡುಗಡೆಯಾಗಬಹುದು ಎಂದು ಶ್ರದ್ಧಾ ಸಮಾಧಾನಪಡಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್, ತುಂಬಾ ಒಳ್ಳೆಯದು, ನನಗೆ ಖುಷಿಯಾಯಿತು ಎಂದು ಹೇಳಿದ್ದಾರೆ.
ಇನ್ನು ತಮ್ಮ ಸಿನಿಮಾ ಬಿಡುಗಡೆಯಾಗುತ್ತಿದ್ದರೂ ಶ್ರದ್ಧಾ ಕಪೂರ್ ಅವರ ಈಥಾ ಚಿತ್ರವನ್ನೂ ಪ್ರೇಕ್ಷಕರು ನೋಡಬೇಕು ಎಂದು ಸಲ್ಮಾನ್ ಮನವಿ ಮಾಡಿದ್ದಾರೆ. ಎಲ್ಲರೂ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದ್ದಾರೆ. ಆದರೆ ಎರಡು ಚಿತ್ರಗಳು ಒಂದೇ ದಿನ ತೆರೆಗೆ ಬರುತ್ತಿರುವುದರಿಂದ ಬಾಕ್ಸ್ಆಫೀಸ್ನಲ್ಲಿ ಪೈಪೋಟಿ ಇದ್ದೇ ಇರುತ್ತದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
ಸದ್ಯ ಸಲ್ಮಾನ್ ಖಾನ್ ಅವರ ಈ ಹೇಳಿಕೆ ಬಾಲಿವುಡ್ನಲ್ಲಿ ಗಮನ ಸೆಳೆದಿದೆ. ಒಂದೆಡೆ ತಮ್ಮ ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಸಲ್ಮಾನ್, ಮತ್ತೊಂದೆಡೆ ಸಹನಟಿಯ ಚಿತ್ರದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.