'ಸ್ಪಿರಿಟ್' ಸಿನಿಮಾ ವಿವಾದಕ್ಕೆ ಹೊಸ ತಿರುವು 
ಬಾಲಿವುಡ್

ಅವನೊಬ್ಬ ಸ್ತ್ರೀ ವಿರೋಧಿ: 'ಸ್ಪಿರಿಟ್​' ವಿವಾದಕ್ಕೆ ಬಿಗ್​ ಟ್ವಿಸ್ಟ್​; ದೀಪಿಕಾ ಆಪ್ತರಿಂದ ನಿರ್ದೇಶಕ ಸಂದೀಪ್​ ವಂಗಾ ಮೇಲೆ ಗಂಭೀರ ಆರೋಪ! Deepika Padukone close aides on Sandeep Reddy Vanga

ಪ್ರಮುಖ ಮುಖ್ಯಾಂಶಗಳು

  • 'ಸ್ಪಿರಿಟ್' ಸಿನಿಮಾ ವಿವಾದಕ್ಕೆ ಹೊಸ ತಿರುವು
  • ಸಂದೀಪ್ ವಂಗಾ ಒಬ್ಬ ಸ್ತ್ರೀ ವಿರೋಧಿ ನಿರ್ದೇಶಕ
  • ದೀಪಿಕಾ ಪಡುಕೋಣೆ ಆಪ್ತರಿಂದ ಗಂಭೀರ ಆರೋಪ
ಮುಂಬೈ: ಕಬೀರ್​ ಸಿಂಗ್​ ಮತ್ತು ಎನಿಮನ್​ ಸಿನಿಮಾ ಮೂಲಕ ದೇಶದ ಪ್ರೇಕ್ಷಕರ ಗಮನ ಸೆಳೆದ ನಿರ್ದೇಶಕ ಎಂದರೆ ಸಂದೀಪ್​ ರೆಡ್ಡಿ ವಂಗಾ. ಈದೀಗ ವಾಂಗ ಸೌತ್​ ಸೂಪರ್​ ಸ್ಟಾರ್​ ಪ್ರಭಾಸ್​ ಜೊತೆ ಸೇರಿಕೊಂಡು ಸ್ಪಿರಿಟ್​ ಎಂಬ ಸಿನಿಮಾ ನಿರ್ದೇಶಿಸಲಿದ್ದಾರೆ.
ಆದರೆ, ಈ ಸಿನಿಮಾ ನಾಯಕನಟಿಯಾಗಿ ದೀಪಿಕಾ ಪಡುಕೋಣೆ (Deepika Padukone close aides on Sandeep Reddy Vanga) ಮೊದಲು ಆಯ್ಕೆಯಾಗಿದ್ದರು. ಆದರೆ ಅವರ ಕೆಲ ಬೇಡಿಕೆಗಳಿಗೆ ಸಿನಿಮಾ ತಂಡ ಈಡೇರಿಸದ ಹಿನ್ನಲೆ ನಟಿ ಸಿನಿಮಾ ತಂಡದಿಂದ ಹೊರಬಿದ್ದಿದ್ದರು ಎಂದು ವರದಿಯಾಗಿತ್ತು.
ಈಗ, ಕೆಲ ದಿನಗಳ ಹಿಂದೆ ದೀಪಿಕಾ ಸಿನಿಮಾ ತಂಡ ತೊರೆಯಲು ಕಾರಣವೆನೆಂದು ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಸಹೋದರ ಪ್ರಣಯ್​​ ವಂಗಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಈಗ ವಂಗಾನ ಹೇಳಿಕೆಗೆ ದೀಪಿಕಾ ಆಪ್ತ ವಲಯದಿಂದ ಕೌಂಟರ್​ ಬಂದಿದೆ.

ಪ್ರಣಯ್​​​ ವಂಗಾ ಹೇಳಿದ್ದೇನು?

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಪ್ರಣಯ್​, ಸ್ಪಿರಿಟ್​ ಸಿನಿಮಾದಿಂದ ದೀಪಿಕಾ ಪಡುಕೋಣೆಯನ್ನು ಏಕೆ ಹೊರಹಾಕಲಾಯಿತು? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಿನಿಮಾ ತಂಡದವರು ಸುಮಾರು 18 ತಿಂಗಳಿನಿಂದ ದೀಪಿಕಾ ಬಳಿ ಅಡ್ಡಾಡಿ, ಅವರನ್ನು ಸಿನಿಮಾಗೆ ಒಪ್ಪಿಸಿದ್ದರು. ಆದರೆ ನಟಿ ತಾನು ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಹಾಗೂ ತನ್ನ ತಂಡದವರ ಖರ್ಚನ್ನು ಪ್ರೊಡಕ್ಷನ್​ ಅವರೇ ನೋಡಿಕೊಳ್ಳಬೇಕು. ಜೊತೆಗೆ ತಮಗೆ ಇನ್ನಷ್ಟು ಸಂಭಾವನೆ ನೀಡಬೇಕು ಹಾಗೆಯೇ ಸಿನಿಮಾದ ಲಾಭದಲ್ಲಿ ಶೇ. 10 ಪಾಲನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದರಂತೆ.


ಆದರೆ, ನಟಿಯ ಇವೆಲ್ಲಾ, ಬೇಡಿಕೆಗಳನ್ನು ನಿರ್ದೇಶಕನಾಗಿ ಅಣ್ಣನಿಗಾಗಲೀ, ನಿರ್ಮಾಪಕರಿಗಾಗಲೀ ಈಡೇರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಒಂದೆರಡು ಸಲ ಅವರನ್ನು ಒಪ್ಪಿಸಲು ಪ್ರಯತ್ನಿಸಿದೆವು. ಕೊನೆಗೆ ಅದು ಸಾದ್ಯವಾಗದೇ ಇದ್ದಾಗ ಅವರ ಬದಲಿಗೆ ಬೇರೆ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಣಯ್​ ತಿಳಿಸಿದ್ದಾರೆ.

ದೀಪಿಕಾ ವಂಗಾ ಸಿನಿಮಾದಲ್ಲಿ ನಟಿಸಲ್ಲ!

ಪ್ರಣಯ್​ ವಂಗಾ, ಹೇಳಿಕೆ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದಂತೆ ದೀಪಿಳಾನ್ನು ಟ್ರೋಲ್​ ಮಾಡಲು ಶುರುವಿಡಲಾಗಿದೆ. ಈಗ ಇದಕ್ಕೆ ದೀಪಿಕಾ ಆಪ್ತವಲಯ ಕೂಡ ಖಡಕ್ ಕೌಂಟರ್ ಕೊಟ್ಟಿದೆ.
ಸಂದೀಪ್​ ರೆಡ್ಡಿ ವಂಗಾ ಒಬ್ಬ ಸ್ತ್ರೀ ದ್ವೇಷಿ ನಿರ್ದೇಶಕನಾಗಿದ್ದಾನೆ. ಹಾಗೂ ಅವನು ಸ್ತ್ರೀ ವಿರೋಧಿ ಸಿನಿಮಾಗಳನ್ನೇ ನಿರ್ದೇಶಿಸುತ್ತಾನೆ. ಇದೇ ಕಾರಣಕ್ಕಾಗಿ ದೀಪಿಕಾ ಪಡುಕೋಣೆ ವಂಗಾನ ಸ್ಪಿರಿಟ್​ ಸಿನಿಮಾದಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲದೇ ವಂಗಾ ನಿರ್ದೇಶಿಸುವ ಯಾವುದೇ ಸಿನಿಮಾಗಳಲ್ಲಿ ದೀಪಿಕಾ ಕಾಣಿಸಿಕೊಳ್ಳುದಿಲ್ಲ ಎಂದು ಹೇಳಿದ್ದಾರೆ.
ಹಾಗೂ ಪ್ರಣಯ್ ಮಾಡಿದ್ದ ಶೇ. 10 ಲಾಭದ ಆರೋಪಕ್ಕೆ ಉತ್ತರಿಸುತ್ತಾ, ದೀಪಿಕಾ ಸಂದೀಪ್​ ಅವರನ್ನು ಒಮ್ಮೆ ಮಾತ್ರ ಬೇಟಿಯಾಗಿದ್ದು, ಅವರೊಂದಿಗೆ ಕಥೆಯಾಗಲೀ, ಸಂಭಾವನೆಯಾಗಲೀ ಯಾವುದನ್ನು ಚರ್ಚಿಸಿಯೇ ಇಲ್ಲ ಎಂದಿದ್ದಾರೆ.

ದೀಪಿಕಾ ಬದಲಿಗೆ ತೃಪ್ತಿ ದಿಮ್ರಿ!

ಸ್ಪಿರಿಟ್​ನಿಂದ ದೀಪಿಕಾ ಹೊರಬಂದ ನಂತರ ಸಂದೀಪ್​ ರೆಡ್ಡಿ ವಾಂಗಾ, ತಮ್ಮ ಎನಿಮಲ್​ ಸಿನಿಮಾದಲ್ಲಿ ನಟಿಸಿದ್ದ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದೆ ಈ ಸಿನಿಮಾದ ಪೋಸ್ಟರ್​ ಬಿಡುಗಡೆಯಾಗಿತ್ತು. ಪ್ರಭಾಸ್ ಮತ್ತು ವಾಂಗಾ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಮುಂದಿನ ವರ್ಷದ ಮಾರ್ಚ್​ 5 ರಂದು ಈ ಸಿನಿಮಾ ತೆರೆಕಾಣಲಿದೆ, (ಏಜನ್ಸೀಸ್​).