ಮುಂಬೈ: ನಮಿತ್ ಮಲ್ಹೋತ್ರ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅತ್ಯಂತ ದುಬಾರಿ ಹೂಡಿಕೆಯ ಸಿನಿಮಾ ರಾಮಾಯಣ ಪಾರ್ಟ್ 1 ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ.
ಸಿನಿಮಾ ಬಿಡುಡೆಯಾಗಿ 23 ದಿನ ಪೂರ್ಣಗೊಳಿಸಿದರೂ, ಈ ಚಿತ್ರವನ್ನು ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ಈ ಸಿನಿಮಾ ಭಾರತೀಯ ಮಾರಿಕಟ್ಟೆಯಲ್ಲಿ ನಿವ್ವಳ 1,000 ಕೋಟಿ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ ಸುಮಾರು 1,790 ಕೋಟಿ ಗಳಿಕೆ ಮಾಡುವ ಮೂಲಕ ನೂತನ ದಾಖಲೆಯೊಂದನ್ನು ಬರೆದಿದೆ.
ರಾಮಯಾಣದ ಇಷ್ಟು ಗಳಿಕೆ ಮಾಡುವ ಮೊದಲು, ಎಸ್.ಎಸ್. ರಾಜಮೌಳಿ ನಿರ್ದೇಶನದ ಹಾಗೂ ಪ್ರಭಾಸ್ ನಟನೆಯ ಬ್ಲಾಕ್ಬಾಸ್ಟರ್ ಸಿನಿಮಾ ಬಾಹುಬಲಿ 2, ವಿಶ್ವದಾದ್ಯಂತ 1,788 ಕೋಟಿ ಗಳಿಸಿ, ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೀಗ 1,790 ಕೋಟಿ ಕಲೆಕ್ಷನ್ ಮೂಲಕ ರಾಮಾಯಣ ಸಿನಿಮಾ ಬಾಹುಬಲಿ ದಾಖಲೆಯನ್ನು ಪುಡಿಗಟ್ಟಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಮಾಯಣ ಸಿನಿಮಾ ಮೂರನೇ ಸ್ಥಾನದಲ್ಲಿದ್ದರೆ, ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ 1,850 ಕೋಟಿ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ ರಾಮಾಯಣ ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಹಾಗೂ ಆಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡು ಭರ್ತಿ 2,070 ಕೋಟಿ ಗಳಿಕೆ ಮಾಡಿರುವ ದಂಗಲ್ ಸಿನಿಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ರಾಮಾಯಣ ಸಿನಿಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಇನ್ನೂ 150 ರಿಂದ 200 ಕೋಟಿ ಗಳಿಕೆ ಮಾಡಬೇಕಿದೆ. ಆದರೆ, ಈ ಸಿನಿಮಾ ದಿನಾಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ಈ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ಭಾರತದಿಂದ ನಿರ್ಮಾಣವಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ರಾಮಾಯಣವಾಗಲಿ ಎನ್ನುವುದು ಅಭಿಮಾನಿಗಳ ಅಭಿಲಾಶೆಯಾಗಿದೆ, (ಏಜೆನ್ಸೀಸ್).