ಟೈಗರ್​ ಶ್ರಾಫ್​ಗೆ ಗುಂಡಿನ ದಾಳಿ ಬೆನ್ನಲ್ಲೇ ಬಾಲಿವುಡ್​ನ​ ಇನ್ನಿಬ್ಬರು ಸ್ಟಾರ್‌ಗೆ Y+ ಸೆಕ್ಯುರಿಟಿ ಕೊಟ್ಟ ಮುಂಬೈ ಪೊಲೀಸರು | Bollywood  
ಬಾಲಿವುಡ್

ಟೈಗರ್​ ಶ್ರಾಫ್ ಗುಂಡಿನ ದಾಳಿ ಬೆನ್ನಲ್ಲೇ ಬಾಲಿವುಡ್​ನ​ ಇನ್ನಿಬ್ಬರು ಸ್ಟಾರ್‌ಗೆ Y+ ಸೆಕ್ಯುರಿಟಿ ಕೊಟ್ಟ ಮುಂಬೈ ಪೊಲೀಸರು | Bollywood

Bollywood: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ ನಡೆಸಿದ ಗುಂಡಿನ ದಾಳಿ ಪ್ರಕರಣ ಬಳಿಕ ಇದೀಗ ಮುಂಬೈ ಪೊಲೀಸರು ಇನ್ನಿಬ್ಬರು ಹಿಂದಿ ಚಿತ್ರೋದ್ಯಮದ ನಟರಿಗೆ ವೈ ಪ್ಲಸ್​ ಭದ್ರತೆ ನೀಡಲು ಮುಂದಾಗಿದೆ.

ಶ್ರಾಫ್​ ಕಾರಿನ ಮೇಲೆ ಹಲವು ರೌಂಡ್​ ಫೈರಿಂಗ್ ಮಾಡಿದ ಕಿಡಿಗೇಡಿಗಳು, ಬದುಕುಳಿದ ಟೈಗರ್​ ಶ್ರಾಫ್​ ಮತ್ತು ಒಂದಷ್ಟು ಬಾಲಿವುಡ್​ ನಟರಿಗೆ ಕೊಲೆ ಬೆದರಿಕೆಯನ್ನು ಹಾಕುತ್ತಿರುವುದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇಂತಹ ಬೆದರಿಕೆ ಕರೆಗಳು ಸದ್ಯ ಚಿತ್ರರಂಗದಲ್ಲಿ ಭಾರಿ ಆತಂಕ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಾಲಿವುಡ್‌ನ ಪ್ರಮುಖ ನಟರಿಗೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.

ಬಾಲಿವುಡ್ ಗಣ್ಯರಿಗೆ ಈಗಾಗಲೇ ನೀಡಲಾಗಿರುವ ಭದ್ರತೆಯ ಕುರಿತು ಹಲವು ತನಿಖಾ ಸಂಸ್ಥೆಗಳು ಮರುಪರಿಶೀಲನೆ ನಡೆಸುತ್ತಿವೆ. ಯಾರಿಗೆ ಹೆಚ್ಚಿನ ಭದ್ರತೆಯ ಅಗತ್ಯವಿದೆ ಎಂಬುದನ್ನೂ ಪರಿಶೀಲನೆ ಕೈಗೊಂಡ ಬಳಿಕವೇ ಕೊಡಬೇಕೋ, ಬಿಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಒಬ್ಬ ನಟನಿಗೆ ನೀಡಲಾಗಿದ್ದ ಎಕ್ಸ್‌ (X) ಶ್ರೇಣಿಯ ಭದ್ರತೆಯನ್ನು ವೈ-ಪ್ಲಸ್‌ಗೆ ಹೆಚ್ಚಿಸಲಾಗಿದೆ. ಮತ್ತೊಬ್ಬ ನಟನ ಭದ್ರತೆಯನ್ನು ವೈ (Y) ಶ್ರೇಣಿಯಿಂದ ವೈ-ಪ್ಲಸ್‌ಗೆ ಏರಿಸಲಾಗಿದೆ. ಹೈ ಸೆಕ್ಯೂರಿಟಿ ಕಾರಣಗಳಿಂದಾಗಿ, ಭದ್ರತೆ ಪಡೆದಿರುವ ಹೀರೋಗಳ ಹೆಸರು ಮತ್ತು ವ್ಯವಸ್ಥೆಯ ಸಂಪೂರ್ಣ ಕಾರ್ಯಾಚರಣೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಟೈಗರ್ ಶ್ರಾಫ್ ಮೇಲಿನ ದಾಳಿಯಿಂದ ಹೈಅಲರ್ಟ್​

ಅಕ್ಟೋಬರ್ 18ರ ಸಂಜೆ ಜುಹುವಿನ ಪುಷ್ಪಾ ಪಾರ್ಕ್ ಸಮೀಪದ ಫುಟ್‌ಬಾಲ್ ಮೈದಾನದಿಂದ ಟೈಗರ್ ಶ್ರಾಫ್ ಅವರ ಕಾರು ಹೊರಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಕನಿಷ್ಠ ಮೂರು ಸುತ್ತು ಗುಂಡು ಹಾರಿಸಲಾಗಿತ್ತು. ಘಟನೆಯಲ್ಲಿ ಟೈಗರ್ ಶ್ರಾಫ್ ಪಾರಾಗಿದ್ದೇ ಆದರೂ, ಅವರ ಕಾರು ಚಾಲಕ ಮತ್ತು ಆಟೋ ಚಾಲಕರಿಗೆ ಗಾಯಗಳಾಯಿತು. ಈ ಘಟನೆ ಬೆನ್ನಲ್ಲೇ ಪರಿಸ್ಥಿತಿ ನೋಡಿಕೊಂಡು ಪೊಲೀಸರು ಇಬ್ಬರು ನಟರಿಗೆ ಭದ್ರತೆಯನ್ನು ಹೆಚ್ಚಿಸಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).